ಶನಿವಾರ, ಜನವರಿ 22, 2011

ಸಲಫಿಗಳಿಗೆ ಎಚ್ಚರಿಕೆ ನೀಡಿದ ಸಮಸ್ತ

ಪುತ್ತೂರು: ಮಾಟ ಮಂತ್ರದ ಮತ್ತು ಆಧ್ಮಾತ್ಮದ ಮೂಲಕ ಸಮುದಾಯ ವನ್ನು ದಾರಿ ತಪ್ಪಿಸುವ ಕೆಲಸ ಕೆಲವ ರಿಂದ ಆಗುತ್ತಿದ್ದ್ದು, ಈ ಹಿನ್ನೆಲೆಯಲ್ಲಿ ಸುನ್ನಿ ಪರಂಪರೆಯ ಉಳಿವಿಗಾಗಿ ಸಮಸ್ತ ಸುನ್ನಿ ಜಾಗೃತಿ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಎಸ್.ಬಿ. ದಾರಿಮಿ ಉಪ್ಪಿನಂಗಡಿ ಹೇಳಿದರು.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ಭಾನುವಾರ ನಡೆಯಲಿರುವ ಸಲಫಿ ಸಮಾವೇಶದಲ್ಲಿ ಸುನ್ನಿ ಪರಂಪರೆಯನ್ನು ಮತ್ತು ಪುಣ್ಯ ಪುರುಷರನ್ನು ಅವಹೇಳನ ಮಾಡುವ ಕಾರ್ಯ ನಡೆದಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಸಂಘಟಕರೇ ಜವಾಬ್ದಾರರು ಎಂದು ಅವರು ಎಚ್ಚರಿಸಿದರು. ಮಾಟ ಮಂತ್ರದ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುವುದು, ಪವಿತ್ರ ಕೂದಲಿನ ಹೆಸರಿನಲ್ಲಿ ವಂಚಿಸುವುದು, ಆಧ್ಮಾತ್ಮದ ಮೂಲಕ ರೋಗ ನಿವಾರಣೆ ಮಾಡುವುದಾಗಿ ಸಮುದಾಯವನ್ನು ದಾರಿ ತಪ್ಪಿಸುವ ನಕಲಿ ಶೈಖ್‌ಗಳ ದಂಧೆಯ ಕುರಿತು ಹಾಗೂ ಕ್ಷುಲ್ಲಕ ವಿಚಾರಗಳನ್ನು ಬೆಳೆಸಿ ಬೀದಿ ರಂಪ ಮಾಡಿ ಧರ್ಮಕ್ಕೆ ಚ್ಯುತಿ ಬರುವಂತೆ ಮಾಡಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರವೃತ್ತಿಯನ್ನು ತಡೆಯಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುತ್ತಿದೆ ಎಂದರು.ಪುತ್ತೂರು ತಾಲ್ಲೂಕಿನ ಬೀಟಿಗೆ ಮತ್ತು ಕುಕ್ಕಾಜೆ ಮಸೀದಿಗಳಲ್ಲಿ ನಕಲಿ ಸುನ್ನಿಗಳಿಂದ ಗೊಂದಲ ಸೃಷ್ಟಿಯಾಗಿದೆ.
 ಇಸ್ಲಾಂನಲ್ಲಿ ಗೌರವ ಇರುವುದು ಸುನ್ನಿಗೆ ಮಾತ್ರ ಎಂದ ಅವರು ವಿವಾಹ ದುಂದು ವೆಚ್ಚದ ಕುರಿತು ಮಾತನಾಡುತ್ತಿರುವ ಸಲಫಿಗಳು ಪುತ್ತೂರಿನಲ್ಲಿ ಸಮ್ಮೇಳನ ನಡೆಸಲು ಭಾರೀ ಮೊತ್ತದ ಹಣವನ್ನು ವ್ಯರ್ಥವಾಗಿ ವ್ಯಯಿಸಿದ್ದಾರೆ ಎಂದು ಆರೋಪಿಸಿದರು. ಪಂಗಡಗಳು ಎಷ್ಟಿದ್ದರೂ ಧರ್ಮ ಮತ್ತು ಮಾನವೀಯ ಮೌಲ್ಯವನ್ನು ಮೀರಬಾರದು. ಇದನ್ನು ಧರ್ಮ ವಿರೋಧಿಗಳು ತಿಳಿದುಕೊಳ್ಳಬೇಕು ಎಂದವರು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ