ಶನಿವಾರ, ನವೆಂಬರ್ 27, 2010

ಇಂಡಿಯಾ ಫ್ರಟೆರ್ನಿಟಿ ಫೋರಂ ಸ್ವಯಂ ಸೇವೆಕರ ಸೇವೆಯನ್ನು ಕೊಂಡಾಡಿದ ಅರಬ್ ಪತ್ರಿಕೆಗಳು

 
 
 
ಮಕ್ಕಾ : ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ ಸ್ವಯಂ ಸೇವಕರನ್ನು ತೊಡಗಿಸಿಕೊಂಡು ವಿಶ್ವದ ನಾನಾ ಮೂಲೆಗಳಿಂದ ಬಂದ ಹಜ್ಜಾಜುಗಳಿಗೆ ಹಜ್ ನಿರ್ವಹಿಸಲು ಅನುಕೂಲವಾಗುವಂತೆ ಸೇವೆ ಸಲ್ಲಿಸಿದ ಅನಿವಾಸಿ ಭಾರತೀಯರ  ಸ್ವಯಂ ಸೇವಾ ಸಾಮಾಜಿಕ ಸಂಘಟನೆ ಇಂಡಿಯಾ ಫ್ರಟೆರ್ನಿಟಿ ಫೋರಂ ಕುರಿತು ಕೊಲ್ಲಿ ರಾಷ್ಟ್ರಗಳ ಅರಬ್ ಮಾಧ್ಯಮಗಳು  ಪ್ರಶಂಸೆಗಳ   ಸುರಿಮಳೆಯನ್ನೇ ಸುರಿಸಿವೆ.
 
ಅತ್ಯಂತ ಹೆಚ್ಚು ಓದುಗರನ್ನು ಹೊಂದಿರುವ ಆಂಗ್ಲ ನಿಯತಕಾಲಿಕ ಅರಬ್ ನ್ಯೂಸ್ ಇಂಡಿಯಾ  ಫ್ರಟೆರ್ನಿಟಿ  ಫೋರಂ ಸ್ವಯಂ ಸೇವೆಕರ ಸೇವೆಯ ಬಗ್ಗೆ ಒಂದು ವಿಶೇಷ ವರದಿಯನ್ನು ಪ್ರಕಟಿಸಿದ್ದು ಚಿತ್ರಗಳ ಸಹಿತ ಈ ಸ್ವಯಂ ಸೇವಕರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂಡಿಯಾ  ಫ್ರಟೆರ್ನಿಟಿ ಫೋರಂ ಕಳೆದ ಕೆಲವು ವರ್ಷಗಳಿಂದ ಹಜ್ ಯಾತ್ರೆಯಲ್ಲಿ ತನ್ನ ಸ್ವಯಂ ಸೇವಕರನ್ನು ತೊಡಗಿಸಿಕೊಳ್ಳುವ ಮೂಲಕ ಹಜ್ ಕಾರ್ಯವನ್ನು ಯಾತ್ರಾರ್ಥಿಗಳು ನಿರಾಂತಕವಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ಇಂಡಿಯಾ  ಫ್ರಟೆರ್ನಿಟಿ ಫೋರಂ ಈ ಸೇವಾ ರಂಗಕ್ಕಿಳಿದ ನಂತರ ಹಜ್ ಸೇವೆಯ ಹೆಸರಿನಲ್ಲಿ ಯಾತ್ರಾರ್ಥಿಗಳಿಂದ ಹಣ ಸುಲಿಗೆ ಮಾಡಿ ಸಂಪಾದನೆ ಮಾಡುತ್ತಿದ್ದ ಹಲವು ವ್ಯಕ್ತಿಗಳು ನಿರುದ್ಯೋಗಿಗಳಾಗಿದ್ದಾರೆ. ಇಂಡಿಯಾ  ಫ್ರಟೆರ್ನಿಟಿ ಫೋರಂ ಸ್ವಯಂ ಸೇವಕರು ಭಾರತೀಯ ಹಜ್ ಮಿಶನ್ , ಭಾರತೀಯ  ರಾಯಭಾರಿ ಕಚೇರಿ , ಸೌದಿ ಅರೇಬಿಯಾದ ಆರೋಗ್ಯ ಇಲಾಖೆ , ಸೌದಿ ಹಜ್ ಸಮಿತಿಯ ಸಹಯೋಗದಲ್ಲಿ ಈ ಸೇವಾ ಕಾರ್ಯವನ್ನು ನಡೆಸುತ್ತಿದ್ದು ಸೌದಿ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯ ಪ್ರಶಂಸೆಗೂ ಪಾತ್ರವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ