ಶನಿವಾರ, ಜನವರಿ 22, 2011

‘‘ಹಿಂದೂ ಉಗ್ರರ ಕೃತ್ಯ ಮುಸ್ಲಿಂ ತಲೆಗಳಿಗೆ!’ ಬಿ.ಟಿ. ಲಲಿತಾ ನಾಯಕ್





ಮಂಗಳೂರು: ಅಜ್ಮೇರ್ ಸ್ಪೋಟ, ಸಂಜೋತ ರೈಲು ಸ್ಪೋಟ ಹಾಗೂ ಇತರ ಸ್ಪೋಟಗಳನ್ನು ಹಿಂದೂ ಭಯೋ ತ್ಪಾದಕರು ಮಾಡಿದ್ದರೂ ಅದನ್ನು ಮುಸ್ಲಿಮರ ಮೇಲೆ ಎತ್ತಿ ಕಟ್ಟಲಾಯಿತು. ಜೈಲಿನಲ್ಲಿ ಇದ್ದ ಮುಸ್ಲಿಂ ಯುವಕ ನೊಬ್ಬ ಸ್ಪೋಟದ ಪ್ರಕರಣದಲ್ಲಿ ತಾನು ಶಿಕ್ಷೆ ಎದುರಿಸು ತ್ತಿದ್ದೇನೆಂದು ಹೇಳಿದಾಗ ಪಶ್ಚಾತಾಪಗೊಂಡ ಅಸೀಮಾ ನಂದ ಹಿಂದೂ ಭಯೋತ್ಪಾದಕರು ನಡೆಸಿದ ಎಲ್ಲಾ ಸ್ಪೋಟಗಳ ಬಗ್ಗೆ ಮಾಹಿತಿ ನೀಡಿದ. ಒಂದು ವೇಳೆ ಅಸೀಮಾನಂದ ಸತ್ಯವನ್ನು ಬಾಯ್ಬಿಡದಿದ್ದರೆ ಇನ್ನಷ್ಟು ಪ್ರಕರಣಗಳನ್ನು ಮುಸ್ಲಿಮರ ಮೇಲೆ ಹೇರಲಾಗುತ್ತಿತ್ತು ಎಂದು ರಾಜ್ಯದ ಮಾಜಿ ಮಂತ್ರಿ ಬಿ.ಟಿ.ಲಲಿತಾ ನಾಯಕ್ ಗುಡುಗಿದ್ದಾರೆ.

ಅವರು ನಿನ್ನೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್, ಎನ್‌ಸಿಎಚ್‌ಆರ್‌ಒ ಮತ್ತು ಪಿಯುಸಿಎಲ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಸಾರ್ವಜನಿಕ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದೆ ರಾಜರುಗಳ ಅಧಿಕಾರವಿದ್ದ ಸಂದರ್ಭ ಅವರು ಹೇಳಿದ ಮಾತಿಗೆ ಪ್ರಜೆಗಳು ತಲೆದೂಗಬೇಕಾಗಿತ್ತು. ಈಗ ಅಂತಹದ್ದೇ ಪರಿಸ್ಥಿತಿಯನ್ನು ದೇಶದ ಅಂತಿಮ ತೀರ್ಪು ನೀಡುವ ನ್ಯಾಯಾಲಯಗಳಲ್ಲಿ ಉದ್ಭವಿಸಿದ್ದು ಇದು ದುರಂತವಾಗಿದೆ ಎಂದು ಲಲಿತಾ ನಾಯಕ್ ಖೇದ ವ್ಯಕ್ತಪಡಿಸಿದರು.

ನ್ಯಾಯಾಲಯ ಮಾತ್ರವಲ್ಲದೆ ನಮ್ಮ ಸಂಬಂಧಿಕ ರಿಂದಲೂ ಅನ್ಯಾಯವಾದಾಗ ಅದನ್ನು ಕುರಿಗಳಂತೆ ಸಹಿಸದೆ ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು. ಹೋರಾಟ ವಿಲ್ಲದಿದ್ದರೆ ನಮಗೆ ಸ್ವಾತಂತ್ರ್ಯ ಸಿಕ್ಕಿ ಏನೂ ಪ್ರಯೋಜನವೂ ಇಲ್ಲ. ಬಾಬರಿ ಮಸೀದಿಯು ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಅದರ ಸುತ್ತಲೂ ನೂರಾರು ರಾಮನ ಮೂರ್ತಿಗಳಿವೆ. ಆದರೆ ನ್ಯಾಯಾಲಯ ತೀರ್ಪು ನೀಡುವಾಗ ಹೊರಗಿದ್ದ ಮೂರ್ತಿಗಳ ಬಗ್ಗೆ ಗಮನಹರಿಸದೆ ಅಯೋಧ್ಯೆಯನ್ನು ಮೂರು ಭಾಗಗಳನ್ನಾಗಿ ಮಾಡಿ ತೀರ್ಪು ನೀಡಿತು. ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡುತ್ತಿದ್ದ ಬಿನಾಯಕ್ ಸೇನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇಂತಹ ತೀರ್ಪಿನಿಂದಾಗಿಯೇ ಭಯೋತ್ಪಾದಕರು ಹುಟ್ಟುತ್ತಿದ್ದಾರೆ ಎಂದು ಹರಿಹಾಯ್ದ ಲಲಿತಾ ನಾಯಕ್ ಪತ್ರಿಕೆಗಳು ಕೂಡಾ ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು.

ಕಳೆದ ೩೫ ವರ್ಷಗಳವರೆಗೆ ನ್ಯಾಯವಾದಿಯಾಗಿ ಮತ್ತು ೧೫ ವರ್ಷ ನ್ಯಾಯಾಧೀಶನಾಗಿ ಕೆಲಸ ನಿರ್ವಹಿಸಿದ ತಾನು ನ್ಯಾಯಾಲಯದಿಂದ ಜನತೆಗೆ ನ್ಯಾಯ ಸಿಗುತ್ತಿದೆ ಎಂದು ಭಾವಿಸಿದ್ದೆ. ಆದರೆ ಈಗ ಸತ್ಯದ ಅರಿವಾಗುತ್ತಿದ್ದು ಇದೊಂದು ದುಃಖದ ದಿನವಾಗಿ ಕಾಡುತ್ತಿದೆ. ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ನ್ಯಾಯಾಲಯಗಳು ಅನ್ಯಾಯಲ ಯಗಳಾಗಿವೆ ಎಂಬ ಆರೋಪವನ್ನು ಬಹು ಜನರು ವ್ಯಕ್ತಪಡಿಸಿದ್ದು ಬೇಸರ ತರಿಸಿದೆ ಎಂದು ನಿವೃತ್ತ ನ್ಯಾಯಾಧೀಶರಾದ ಎಂ.ಎಫ್.ಸಲ್ದಾನ ವಿಷಾದದಿಂದ ನುಡಿದರು. ವೇದಿಕೆಯಲ್ಲಿ ಚಿಂತಕರಾದ ಜಿ.ರಾಜಶೇಖರ್, ಕೆ.ಎಂ.ಶರೀಫ್, ಮಹಮ್ಮದ್ ಕುಂಞಿ, ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ