ದ.ಕ.ಜಿಲ್ಲಾ ರೈತ ಸಂಘದ ಅಧ್ಯಕ್ಷ ರೋಹಿತಾಕ್ಷ ರೈ ಅಂಬೇಡ್ಕರ್ ವೃತ್ತದಿಂದ ಸ್ಟೇಟ್‌ಬ್ಯಾಂಕ್ ವರೆಗೆ ಹೊರಟ ‘ಆರೋಗ್ಯ ಜಾಗೃತಿ ಮ್ಯಾರಥಾನ್’ಗೆ ಹಸಿರು ನಿಶಾನೆ ತೋರಿದರು. ಬಳಿಕ ‘ಪತಂಜಲಿ ಯೋಗ ಸಮಿತಿ’ಯಿಂದ ಯೋಗ ಪ್ರಾತ್ಯಕ್ಷಿಕೆ ಜರಗಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೋಹಿತಾಕ್ಷ ರೈ, ಮಾತೃಭೂಮಿ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಯೋಗದಿಂದ ದ್ವೇಷ, ಅಸೂಯೆ ಮತ್ತು ಮಾನಸಿಕ ಒತ್ತಡವನ್ನು ದೂರ ಮಾಡುವುದರ ಜತೆಗೆ ಹಿತಕರ ಸಮಾಜ ನಿರ್ಮಿಸಲು ಸಾಧ್ಯ ಎಂದರು.
‘ತಾನು ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದೇನೆ. ಪಿಎಫ್‌ಐ ಬಗ್ಗೆ ಆರಂಭದಲ್ಲಿ ತನಗೆ ಕೆಲವೊಂದು ಅನುಮಾನವಿತ್ತು. ಆದರೆ, ಪಿಎಫ್‌ಐನ ಕಾರ್ಯಚಟುವಟಿಕೆಯನ್ನು ಹತ್ತಿರದಿಂದ ಗಮನಿಸಿದ ಮೇಲೆ ಈ ಸಂಶಯ ದೂರವಾಗಿದೆ’ ಎಂದು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಕೆಮ್ಮಾರ ವಹಿಸಿದ್ದರು. ಪಿಎಫ್‌ಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್, ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಝೀಝ್ ಸುರತ್ಕಲ್ ಉಪಸ್ಥಿತರಿದ್ದರು. ರಿಯಾಝ್ ಫರಂಗಿಪೇಟೆ ಸ್ವಾಗತಿಸಿದರು. ಇಸ್ಮಾಯೀಲ್ ಮಲಾರ್ ವಂದಿಸಿದರು. ನಝೀರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.







ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ