ಶುಕ್ರವಾರ, ಏಪ್ರಿಲ್ 01, 2011

‘ಅಮಾಯಕರನ್ನು ಬಿಡುಗಡೆಗೊಳಿಸಿ, ಅಪರಾಧಿಗಳನ್ನು ಜೈಲಿಗೆ ತಳ್ಳಿ, ಭ್ರಷ್ಟಾಚಾರವನ್ನು ತೊಲ ಗಿಸಿ’

‘ಅಮಾಯಕರನ್ನು ಬಿಡುಗಡೆಗೊಳಿಸಿ, ಅಪರಾಧಿಗಳನ್ನು ಜೈಲಿಗೆ ತಳ್ಳಿ, ಭ್ರಷ್ಟಾಚಾರವನ್ನು ತೊಲ ಗಿಸಿ’ ಎಂಬ ಗುರಿಯೊಂದಿಗೆ ಸೋಶಿ ಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ.ಕ.ಜಿಲ್ಲಾ ಘಟಕ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಚಿಂತಕ, ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಧ್ಯಕ್ಷ ಜಿ. ರಾಜಶೇಖರ್, ದೇಶದಲ್ಲಿ ಅನೇಕ ಕರಾಳ ಕಾನೂನುಗಳಿವೆ ಮತ್ತು ಅವುಗಳ ದುರ್ಬಳಕೆಯೂ ಹೆಚ್ಚುತ್ತಿವೆ. ಮಂಗಳೂರು ಕೂಡ ಇದಕ್ಕೆ ಹೊರತಾ ಗಿಲ್ಲ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದರು.


 ಪಿಎಫ್‌ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಭಯೋತ್ಪಾದಕ ಯಾರೇ ಆಗಲಿ, ಆತನನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು. ಅದು ಬಿಟ್ಟು ಅಮಾ ಯಕರನ್ನು ಬಂಧಿಸಿ ಪೀಡಿಸುವುದು ಸರಿಯಲ್ಲ. ದೇಶದಲ್ಲಿ 1992ರ ಬಳಿಕ ಬಾಂಬ್ ಪ್ರಕರಣಗಳು ಹೆಚ್ಚಾಗಿವೆ. ಇದರ ಹಿಂದೆ ಹಿಂದುತ್ವವಾದಿಗಳ ಕೈವಾಡವಿರುವುದು ತಡವಾಗಿ ಬೆಳಕಿಗೆ ಬಂದರೂ ಅವರ ಮೇಲೆ ಕ್ರಮ ಜರಗಿಸಿಲ್ಲ ಎಂದು ಆರೋಪಿಸಿದರು.

ದೇಶದ ಸೇನೆಯಲ್ಲೂ ಭಯೋತ್ಪಾದ ಕರಿದ್ದಾರೆ, ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ಭಯೋತ್ಪಾದನೆ ಯಲ್ಲಿ ನಿರತರಾದ ಅಂಶ ತಿಳಿದ ನಂತರವೂ ಆತನನ್ನು ಬಂಧಿಸುವ ಧೈರ್ಯವನ್ನು ಕೇಂದ್ರ ಸರಕಾರ ತೋರಿಲ್ಲ. ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್ ಆತ್ಮಾಹುತಿ ದಳದ ಪ್ರಸ್ತಾಪ ಎತ್ತಿದರೂ ಸರಕಾರ ಸುಮ್ಮನಾಗಿದೆ ಎಂದು ಅವರು ದೂರಿದರು.
 






ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅನ್ವರ್ ಸಾದಾತ್, ನಿರ್ಮಾನಪ್ಪ, ಪದಾಧಿಕಾರಿ ಗಳಾದ ಲ್ಯಾನ್ಸಿ ಥೆರೆಸಾ, ಮುಹಮ್ಮದ್ ನಾಸಿರ್ ಸಜಿಪ, ಇಸ್ಮಾಯೀಲ್ ಎಂಜಿ ನಿಯರ್, ಮುಹಮ್ಮದ್ ಶರೀಫ್, ಅಬೂಬಕರ್ ಸಿದ್ದೀಕ್, ಶಾಹುಲ್ ಹಮೀದ್, ಅಬ್ದುಲ್ ಅಝೀಝ್ ಮತ್ತಿತರರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ