ಗುರುವಾರ, ಮಾರ್ಚ್ 31, 2011

ಅಮಾಯಕರ ಬಂಧನದ ವಿರುದ್ಧ ಎಸ್‌ಡಿಪಿಐ ಹೋರಾಟ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ 'ಅಮಾಯಕರು ಜೈಲಿನಲ್ಲಿ, ಆರೋಪಿಗಳು ಅಧಿಕಾರದಲ್ಲಿ' ಎಂಬ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಇಂದು ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಮೂಲಕ ದೇಶದ ಸಂಪತ್ತಿನ ಲೂಟಿಯಾಗುತ್ತಿದೆ.  ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವು ಭ್ರಷ್ಟಾಚಾರದಲ್ಲಿ ತೊಡಗಿ ಸಂಪತ್ತನ್ನು ಲೂಟಿ ಮಾಡುತ್ತಿದೆ ಎಂಬ ವಿಷಯದ ಬಗ್ಗೆ ಬೆಳಕು ಚೆಲ್ಲಲಾಯಿತು.
ಎಸ್‌ಡಿಪಿಐನ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಹನ್ನಾನ್‌ರವರು ಮಾತನಾಡಿ, ಅಮಾಯಕ ಮುಸ್ಲಿಂ ಯುವಕರನ್ನು ಜೈಲಿನೊಳಗೆ ಬಂಧಿಸಿಡಲಾಗಿದೆ. ಆದರೆ ಆರೋಪಿಗಳು ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ ಎಂದು ಹೇಳಿದರು. ಅಂದರೆ ದೇಶದಲ್ಲಿ ನ್ಯಾಯವು ಮರೀಚಿಕೆಯಾಗಿದೆ ಎಂದು ಅವರು ನುಡಿದರು. ದೇಶದ ವಿವಿಧ ಜೈಲುಗಳಲ್ಲಿ ಬಂಧಿಯಾಗಿರುವ ಅಮಾಕರನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಅವರು ಇದೇ ಸಂದರ್ಭ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಫರೀದ್ ಅಹ್ಮದ್ , ಜೀಮಾ, ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹೇಮಲತಾ, ಕಾಂತರಾಜು, ಜೆ.ಕುಮಾರ್, ಬಶೀರ್ ಅಹ್ಮದ್, ಅಸಫ್ ಮತ್ತು ಫರ್ವೇಝ್ ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ