ಚಿಕ್ಕಮಗಳೂರು : ಪ್ರಜಾಪ್ರಭುತ್ವಕ್ಕಾಗಿ ನಡೆಸುತ್ತಿರುವ ಈಜಿಪ್ತ್ ಜನರ ಹೋರಾಟಕ್ಕೆ ಸಂದ ಜಯವನ್ನು ಶ್ಲಾಗಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯು ನಗರದಲ್ಲಿ ಬುಧವಾರ ಈಜಿಫ್ತ್ ಜನತೆಗೆ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಚಿಕ್ಕಮಗಳೂರಿನ ಸಂತೆಮೈದಾನದಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಅಲ್ತಾಫ್ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದಲೂ ಈಜಿಪ್ತ್‌ನಲ್ಲಿ ಸರ್ವಾಧಿಕಾರಿಯಾಗಿದ್ದ ಹೊಸ್ನಿ ಮುಬಾರಕ್ ನೀತಿಯನ್ನು ತೀವ್ರವಾಗಿ ಖಂಡಿಸಬೇಕಾಗಿದೆ. ಮೂರು ದಶಕಗಳ ಕಾಲ ಆ ದೇಶದಲ್ಲಿ ಜನರು ಸ್ವಾತಂತ್ರ್ಯಕ್ಕಾಗಿ ಹಪಹಪಿಸುತ್ತ ಬಂದಿದ್ದರು. ಅದು ಹೋರಾಟದ ರೂಪಕ್ಕೆ ತಿರುಗಿ ಯಶಸ್ವಿಯಾಗಿದ್ದು ಪ್ರಜಾಪ್ರಭುತ್ವ ನೆಲೆಸುವ ಕಾಲ ಸನ್ನಿಹಿತವಾಗಿದೆ. ಈಜಿಪ್ತ್ ಮಾತ್ರವಲ್ಲ ಎಲ್ಲಾ ದೇಶಗಳಲ್ಲೂ ಸರ್ವಾಧಿಕಾರಿಗಳ ಅಧಿಕಾರ ಕೊನೆಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಾ ಪ್ರಜಾಪ್ರಭುತ್ವದ ಪರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಆಲ್ದೂರು ವಲಯ ಕಾರ್ಯದರ್ಶಿ ಸೈಫುದ್ದೀನ್, ಜಿಲ್ಲಾ ಸಮಿತಿ ಸದಸ್ಯ ಅಝೀಝ್ ಮುಂತಾದವರು ಭಾಗವಹಿಸಿದ್ದವರು. ಕಾರ್ಯಕ್ರಮದಲ್ಲಿ ನಹೀಮ್ ನಿರೂಪಣೆ ನೀಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ