ಗುರುವಾರ, ಫೆಬ್ರವರಿ 24, 2011

ಇಂದು ಕಲ್ಲಡ್ಕದಲ್ಲಿ ’ಮೀಲಾದುರ್ರಸೂಲ್’ ಕಾರ್ಯಕ್ರಮ

ಬಂಟ್ವಾಳ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ವಿಟ್ಲ ವಲಯ ವತಿಯಿಂದ ಇಂದು (ಫೆ. ೨೪) ಕಲ್ಲಡ್ಕ ಜಂಕ್ಷನ್‌ನಲ್ಲಿ ’ಸೀರತುನ್ನಬಿ’ ಕಾರ್ಯಕ್ರಮವು ನಡೆಯಲಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್ ರವರು ’ಸಾಮಾಜಿಕ ಬದಲಾವಣೆಯಲ್ಲಿ ಪ್ರವಾದಿ (ಸ.ಅ)ರವರ ಮಾದರಿ’ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಸಂಜೆ ೭:೩೦ ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಅಲ್-ಹಾಜ್ ಅಸ್ಸಯ್ಯೆದ್ ಇಬ್ರಾಹಿಂ ಅಲ್‌ಹಾದಿ ತಂಗಳ್ ಅಲ್‌ಖಾಸಿಮಿ, ಮುದರ್ರಿಸ್ ಬದ್ರಿಯಾ ಜುಮ್ಮಾ ಮಸ್ಜಿದ್, ಆತೂರು, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದನಿ, ಕಲ್ಲಡ್ಕ ಜುಮ್ಮಾ ಮಸೀದಿಯ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಶರೀಫ್ ಕೊಡಾಜೆ, ಶಾಹುಲ್ ಹಮೀದ್ ಎಸ್.ಹೆಚ್., ಜಿ.ಎಂ ಝಕರಿಯಾ ಮತ್ತು ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ