ಬುಧವಾರ, ಫೆಬ್ರವರಿ 23, 2011

ಹೈಕೋರ್ಟ್ ತೀರ್ಪು: ಪಾಪ್ಯುಲರ್ ಫ್ರಂಟ್‌ನ ಕಾನೂನು ಹೋರಾಟಕ್ಕೆ ಸಂದ ಜಯ

ಬೆಂಗಳೂರು: 2009ರಲ್ಲಿ ಮೈಸೂರು ಗಲಭೆಯ ವೇಳೆ ಮಾನವ ಹಕ್ಕು ಉಲ್ಲಂಘನೆ ನಡೆದಿರುವುದಕ್ಕಾಗಿ ಹೈಕೋರ್ಟ್ ಉನ್ನತ ಪೊಲೀಸ್ ಅಧಿಕಾರಿಗಳ ಮೇಲೆ 50,000 ರೂಪಾಯಿ ದಂಡ ವಿಧಿಸಿರುವುದನ್ನು ತನ್ನ ಕಾನೂನು ಹೋರಾಟಕ್ಕೆ ಸಂದ ಜಯವೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಣ್ಣಿಸಿದೆ.
2009ರ ಜುಲೈ ತಿಂಗಳಲ್ಲಿ ಮೈಸೂರಿನಲ್ಲಿ ನಡೆದಿದ್ದ ಗಲಭೆಯ ಸಂದರ್ಭದಲ್ಲಿ ಪೊಲೀಸರು ಅಮಾಯಕರ ಮನೆಗಳಿಗೆ ರಾತ್ರೋ ರಾತ್ರಿ ನುಗ್ಗಿ ದಾಂಧಲೆ, ಹಲ್ಲೆ ನಡೆಸಿ ನೂರಾರು ಅಮಾಯಕರನ್ನು ಅಕ್ರಮ ಬಂಧನದಲ್ಲಿರಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಾಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ‘ಜೈಲ್ ಭರೋ’ ಆಂದೋಲನದ ಮೂಲಕ ಪ್ರತಿಭಟನೆಯನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಕಾರರ ಮೇಲೆ ಅಮಾನುಷ ದೌರ್ಜನ್ಯ ನಡೆಸಿದ್ದರು. ಅನಂತರ 300ಕ್ಕೂ ಹೆಚ್ಚು ಸಂಘಟನಾ ಕಾರ್ಯಕರ್ತರನ್ನು, ನಾಯಕರನ್ನು ಹಾಗೂ ಮಹಿಳೆಯರನ್ನು ಸೆಕ್ಷನ್ 107ರನ್ವಯ ಬಂಧಿಸಿದ್ದರು. ಆದರೆ ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಬಿಡದೆ ಅವರ ಮೇಲೆ ವಿನಾ: ಕಾರಣ ಬೇರೆ ಬೇರೆ ಆರೋಪಗಳನ್ನು ಹೊರಿಸಿ ಪ್ರಕರಣಗಳನ್ನು ದಾಖಲಿಸಿ ಸುಮಾರು 72 ದಿನಗಳ ಕಾಲ ಗುಲ್ಬರ್ಗಾ, ಮೈಸೂರು, ಬಳ್ಳಾರಿ ಹಾಗೂ ಬೆಳಗಾವಿ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲದೆ ಬಂಧಿತರನ್ನು ಕೋರ್ಟಿಗೆ ಹಾಜರುಪಡಿಸುವಲ್ಲಿ  ಪೊಲೀಸರು ಅಗನತ್ಯ ವಿಳಂಬ ಮಾಡಿದ್ದರು ಎಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೊಲೀಸರು ನಡೆಸಿದ ಈ ಅತಿರೇಕದ ಕ್ರಮಗಳು ಕಾನೂನಿ ಉಲ್ಲಂಘನೆ ಹಾಗೂ ಮಾನವ ಹಕ್ಕುಗಳ ಸ್ಪಷ್ಠ ಉಲ್ಲಂಘನೆ ಕೂಡ ಆಗಿದ್ದು, ಇದನ್ನು ಪ್ರಶ್ನಿಸಿ ನಾವು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೆವು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಾನ್ಯ ಉಚ್ಛ ನ್ಯಾಯಾಲವು ಮೈಸೂರು ಪೊಲೀಸರ ಈ ಕ್ರಮಗಳು ಕಾನೂನಿನ ಉಲ್ಲಂಘನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದರಿಂದ ಮೈಸೂರಿನ ಉನ್ನತ ಅಧಿಕಾರಿಗಳಿಗೆ ರೂಪಾಯಿ 50 ಸಾವಿರ ದಂಡವನ್ನು ವಿಧಿಸಿದೆ. ಅಲ್ಲದೆ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಉಚ್ಛ ನ್ಯಾಯಾಲಯ ಆದೇಶಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಮಾನ್ಯ ಉಚ್ಛ ನ್ಯಾಯಾಲಯದ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ವಾಗತಿಸುತ್ತದೆ.
ಸಂಘಟನೆ ಇದನ್ನು ತನ್ನ ಮಾನವ ಹಕ್ಕುಗಳ ವಿರುದ್ಧದ ಹೋರಾಟ ಮತ್ತು ಕಾನೂನಿನ ಹೋರಾಟಕ್ಕೆ ಸಂದ ಜಯವೆಂದು ಬಣ್ಣಿಸುತ್ತದೆ ಎಂದು ಇಲ್ಯಾಸ್ ತುಂಬೆ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ