ಭಾನುವಾರ, ಫೆಬ್ರವರಿ 13, 2011

ಕೋಮುವಾದವನ್ನು ಮೆಟ್ಟಿ ಅಲ್ಪಸಂಖ್ಯಾತರನ್ನು ಮುಂದೆ ತನ್ನಿ - ಕೆ.ಎಂ. ಕರೆ

image


ಪುತ್ತೂರು, ಫೆಬ್ರವರಿ ೧೩: ವಿದ್ಯಾರ್ಥಿಗಳು ಕೋಮುವಾದವನ್ನು ಮೆಟ್ಟಿನಿಂತು ದಮನಿತ ಅಲ್ಪ ಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಯತ್ನಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ತುಫೈಲ್ ಕೆ.ಎಂ. ತಿಳಿಸಿದರು.
 ಅವರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ಪುತ್ತೂರಿನಲ್ಲಿ ನಡೆದ ರ್‍ಯಾಲಿ ಮತ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಕೀರ್ ಮುಖ್ಯ ಭಾಷಣ ಮಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ಪಿಯುಸಿ ಎಲ್ ಜಿಲ್ಲಾ ಕಾರ್ಯದರ್ಶಿ ಹಂಸರಾಜ್ ಗಟ್ಟಿ, ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯ ನಿಝಾಮ್ ಬೆಳ್ತಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಝಕರಿಯ ಪುತ್ತೂರು ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ