ಭಾನುವಾರ, ಜನವರಿ 16, 2011

ಉಡುಪಿ: ಕ್ಯಾಂಪಸ್ ಫ್ರಂಟ್ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ

Campusಉಡುಪಿ: ಕ್ಯಾಂಪಸ್ ್ರಂಟ್ ಆ್ ಇಂಡಿಯಾ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದ 197ನೆ ಜನ್ಮ ದಿನಾಚರಣೆ ‘‘ರಾಷ್ಟ್ರೀಯ ಯುವ ದಿನ’’ದ ಪ್ರಯುಕ್ತ ಜ.12ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಶಿರಿಬೀಡು ಸರಸ್ವತಿ ಶಾಲಾ ವಠಾರದವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಸರಸ್ವತಿ ಶಾಲಾ ವಠಾರದಲ್ಲಿ ರನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಎ್ಐ ಜಿಲ್ಲಾಧ್ಯಕ್ಷ ಆಸ್ೀ ಬೈಕಾಡಿ ಮಾತನಾಡಿ ‘ಇಂದು ವಿವೇಕಾನಂದರು ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಅವರು ಬೀರಿರುವ ಜ್ಞಾನದ ಬೆಳಕು ಹರಡಿದೆ. ಆ ಬೆಳಕಿನ ಮಾರ್ಗದರ್ಳಿ ನಾವು ಮುನ್ನಡೆಯೋಣ. ಅವರ ನಿತ್ಯ-ಸತ್ಯ ತತ್ವಗಳನ್ನು ನಿತ್ಯ ಜೀವದಲ್ಲಿ ಅನುಷ್ಟಾನಕ್ಕೆ ತೋರಣ ಎಂದರು.
Campusಮುಖ್ಯ ಅತಿಥೀಯಾಗಿ ಆಗಮಿಸಿದ ರಮೇಶ್ ನಾಯಕ್ ಮಾತನಾಡಿ ವಿವೇಕಾನಂದರು ಮಾದರಿ ನಾಯಕರಾಗಿ ಈ ಜಗತ್ತಿಗೆ ಜ್ಞಾನವನ್ನು ಹಂಚಿದ್ದಾರೆ. ಕ್ಯಾಂಪಸ್ ್ರಂಟ್ ಆ್ ಇಂಡಿಯಾ ಮುಂದೆಯೂ ಇಂತಹ ಕಾರ್ಯಕ್ರಮ ನಡೆಸಲಿ ಎಂದು ಹಾರೈಸಿದರು.
Campusಕ್ಯಾಂಪಸ್ ಫ್ರಂಟ್  ಆ್ ಇಂಡಿಯಾ ಉಡುಪಿ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಎರ್ಮಾಳ್ ಮಾತನಾಡಿ ‘ಸ್ವಾಮಿ ವಿವೇಕಾನದಂರವರು ತಮ್ಮ 39 ವರ್ಷಗಳ ಜೀವನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವಕರಿಗೆ ಮಾದರಿಯಾಗಿ ಬೆಳೆದರು. ನಮ್ಮ ರಾಜ್ಯದ, ದೇಶದ ಅಭಿವೃದ್ಧಿಯ ಚಿಂತನೆಯನ್ನು ಮಾಡುವಂತಹ ಜಾಗೃತಿಯನ್ನು ಮೂಡಿಸುವ ಸಲವಾಗಿ ಕ್ಯಾಂಪಸ್ ಫ್ರಂಟ್  ಆ್ ಇಂಡಿಯಾವು ಈ ಜಾಥಾವನ್ನು ಹಮ್ಮಿಕೊಂಡಿದೆ ಎಂದರು.
ಕ್ಯಾಂಪಸ್ ಫ್ರಂಟ್  ಆ್ ಇಂಇಡಾಯ ಉಡುಪಿ ಜಿಲ್ಲಾ ಜಂಟಿ ಜೊತೆ ಕಾರ್ಯದರ್ಶಿ ರ್ಹಾನ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ