ಭಾನುವಾರ, ಜನವರಿ 16, 2011

ಐಎಫ್‌ಎಫ್ ನೆರವು: ಜೈಲಿನಿಂದ ಬಿಡುಗಡೆಗೊಳ್ಳಲಿರು ಸುಲೈಮಾನ್

Sulaiman
ತಾಯಿಫ್: ಕಳೆದ ಮೂರು ವರ್ಷಗಳಿಗೂ ಅಧಿಕ ಕಾಲದಿಂದ ತಾಯಿಫ್ ಜೈಲಿನಲ್ಲಿ ಬಂಧಿಯಾಗಿರುವ ನೆಲ್ಯಾಡಿಯ ಸುಲೈಮಾನ್ ಮೂರು ತಿಂಗಳೊಳಗಾಗಿ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಇಂಡಿಯಾ ಫ್ರೆಟರ್ನಿಟಿ ಫಾರಮ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಸಂಯೋಜಕ ನದೀಮ್ ತಿಳಿಸಿದ್ದಾರೆ.
ಸುಲೈಮಾನ್ (53) ತಾಯಿಫ್‌ನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರು ಚಲಾಯಿಸುತ್ತಿದ್ದ ಲಾರಿಯು ಕಾರೊಂದಕ್ಕೆ ಬಡಿದು 6 ಮಂದಿ ಸೌದಿ ಪ್ರಜೆಗಳು ಸಾವಿಗೀಡಾಗಿದ್ದರು. ನಂತರ ಸುಲೈಮಾನ್‌ರನ್ನು ತಾಯಿಫ್ ಜೈಲಿನಲ್ಲಿ ಇಡಲಾಗಿತ್ತು.
ಅಪಘಾತದಲ್ಲಿ ಮೃತಪಟ್ಟವರಿಗೆ 6 ಲಕ್ಷ ಸೌದಿ ರಿಯಾಲ್ (ಭಾರತದ 75 ಲಕ್ಷ ರೂಪಾಯಿ) ಪರಿಹಾರವಾಗಿ ನೀಡಬೇಕೆಂದು ತಾಯಿಫ್‌ನ ಕೋರ್ಟ್ ತೀರ್ಪು ನೀಡಿತ್ತು. ಬಡವನಾದ ಸುಲೈಮಾನ್ ಇಷ್ಟೊಂದು ಮಟ್ಟದಲ್ಲಿ ಹಣವನ್ನು ಸೇರಿಸಲು ವಿಫಲರಾಗಿದ್ದರು ಮತ್ತು ಜೈಲಿನಲ್ಲೇ ಉಳಿಯಬೇಕಾಗಿ ಬಂದಿತ್ತು.
ನಿಸ್ಸಹಾಯಕ ಸುಲೈಮಾನ್‌ರಿಗೆ ಸಹಾಯ ಹಸ್ತವನ್ನು ಚಾಚಲು ಇಂಡಿಯಾ ಫ್ರೆಟರ್ನಿಟಿ ಫಾರಂ ನಿರ್ಧರಿಸಿತು. ಸುಲೈಮಾನ್ ಜೈಲಿನಲ್ಲಿರುವ ವೇಳೆ ಫಾರಮ್ ಭಾರತದಲ್ಲಿರುವ ಅವರ ಕುಟುಂಬಕೆ ನೆರವಾಯಿತು. ಅದೇ ವೇಳೆ, ವಿಷಯವನ್ನು ಜಿದ್ದಾದಲ್ಲಿರುವ ಭಾರತದ ಪ್ರಧಾನ ರಾಯಭಾರಿ ಕಚೇರಿಯ ಮುಂದೆ ತಂದಿತು. ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ವಿಮಾ ಕಂಪೆನಿಯು ಪರಿಹಾರ ನೀಡುವುದನ್ನು ತ್ವರೆ ಮಾಡುವಂತೆ ಮಾಡಿತು.
ಸುಲೈಮಾನ್ ಇನ್ನು ಮೂರು ತಿಂಗಳುಗಳ ಕಾಲ ಜೈಲಿನಲ್ಲಿದ್ದು, ನಂತರ ಬಿಡುಗಡೆಯಾಗಬಹುದು ಎಂದು ತಾಯಿಫ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ