ಸೋಮವಾರ, ಜನವರಿ 17, 2011

ಎಸ್.ಐ.ಗಾಗಿ ಹೋರಾಟಕ್ಕೆ ಮುಂದಾದ ಸಂಘ-ಸಂಸ್ಥೆಗಳು

ಮಂಗಳೂರು: ಕೊಣಾಜೆ ಠಾಣಾಧಿಕಾರಿ ಸುನಿಲ್ ಪಾಟೀಲ್ ರನ್ನು ವರ್ಗಾವಣೆಗೊಳಿಸಲು ತೆರೆಮರೆಯ ಕಸರತ್ತು ಆರಂಭ ಗೊಂಡಿದ್ದು ಇದನ್ನು ವಿರೋಧಿಸಿ ರುವ ಸಾರ್ವಜನಿಕರು ಹಾಗೂ ಸಂಘ-ಸಂಸ್ಥಗಳು ಹೋರಾಟಕ್ಕೆ ಮುಂದಾಗಿದ್ದು ಅದಕ್ಕೂ ಪೂರ್ವ ಭಾವಿಯಾಗಿ ಕಮೀಷನ್‌ರಿಗೆ ಮನವಿ ಸಲ್ಲಿಸಿದೆ.
ಕೊಣಾಜೆ ಠಾಣಾ ವ್ಯಾಪ್ತಿಯ ಹರೇಕಳ-ಪಾವೂರಿನಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿದ್ದು ಅದನ್ನು ತಡೆಯುವಲ್ಲಿ ಸುನಿಲ್ ಪಾಟೀಲ್ ಮಹತ್ವದ ಪಾತ್ರ ವಹಿಸಿದ್ದಾರೆ. ಲಂಚ ಮತ್ತು ರಾಜಕೀಯ ಪ್ರಭಾವವನ್ನೂ ವಿಫಲಗೊಳಿಸಿರುವ ಪಾಟೀಲ್ ಬಡವರಿಗೂ ಸಮಾನ ನ್ಯಾಯ ಕಲ್ಪಿಸುವಲ್ಲಿ ಸಫಲರಾಗಿದ್ದಾರೆ. ಇತ್ತೀಚೆಗೆ ಕೇರಳಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಹತ್ತು ಮರಳು ಲಾರಿಗಳನ್ನು ವಶಕ್ಕೆ ತೆಗೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಪಾಟೀಲ್ ಈ ಮೂಲಕ ಮರಳು ಮಾಫಿಯಾದ ಕೆಂಗಣ್ಣಿಗೆ ಗುರಿಯಾ ಗಿದ್ದರು.
ಕಳೆದ ಬಾರಿಯೂ ಇದೇ ರೀತಿಯ ಕಾರ್ಯಾಚರಣೆ ನಡೆಸಿದ್ದ ಪಾಟೀಲ್‌ರನ್ನು ವರ್ಗಾಯಿಸಲು ತೆರೆಮರೆಯಲ್ಲಿಯೇ ಕಸರತ್ತು ನಡೆದಿತ್ತು. ಆಗಲೂ ಎಚ್ಚೆತ್ತುಕೊಂಡಿದ್ದ ಸಾರ್ವಜನಿಕರು ಕಮೀಷನ್‌ರಿಗೆ ಮನವಿ ನೀಡುವ ಮೂಲಕ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ದ್ದರು. ಗ್ರಾಮಸ್ಥರು ಮತ್ತೊಮ್ಮೆ ಕಮೀಷನರ್‌ರಿಗೆ ಮನವಿ ನೀಡಿ ಮರಳು ಮಾಫಿಯಾಕ್ಕೆ ಮಣಿಯದೆ ಪಾಟೀಲರನ್ನು ಕೊಣಾಜೆ ಯಲ್ಲಿಯೇ ಉಳಿಸಿಕೊಳ್ಳುವಂತೆ ವಿನಂತಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ