‘ಶೆಟ್ಟಿಗಾರ್ ಕೊಲೆಗೆ ಪೊಲೀಸರೇ ಕಾರಣ’
ಆರೋಪಿಯ ಪತ್ನಿ ಶೀಲಾ ಆರೋಪ
ಉಡುಪಿ: ಜೈಲಿನಲ್ಲಿಯೇ ಹತ್ಯೆ ಯಾದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಮುತ್ತಪ್ಪನ ಪತ್ನಿ ಉಡುಪಿ ಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ತನ್ನ ಪತಿ ನಿರ್ದೋಷಿ ಎಂದು ಹೇಳಿರುವುದರಿಂದ ಪ್ರಕರಣ ತಿರುವು ಪಡೆದುಕೊಂಡಿದೆ. ಹಿರಿಯಡ್ಕ ಜೈಲಿನಲ್ಲಿ ಹಾಡಹಗಲೇ ರೌಡಿ ವಿನೋದ್ ಶೆಟ್ಟಿಗಾರನ ಕೊಲೆ ನಡೆದಿತ್ತು. ಜೈಲಿನಲ್ಲಿ ಶೆಟ್ಟಿಗಾರನ ಕಿರುಕುಳ ತಾಳಲಾರದೆ ಮೂವರು ಖೈದಿಗಳಾದ ರಿಯಾಜ್, ಮುತ್ತಪ್ಪ ಹಾಗೂ ಈತನ ತಮ್ಮ ನಾಗರಾಜ ಸೇರಿ ಹತ್ಯೆಗೈದಿದ್ದರೆಂದು ಪೊಲೀ ಸರು ಆರೋಪಿಸಿ ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದರು. ಪ್ರಕರಣದಲ್ಲಿ ಮುತ್ತಪ್ಪನ ಪತ್ನಿ ಶೀಲಾ ತನ್ನ ಮಗುವಿನ ಬರ್ತ್‌ಡೇ ಗೆಂದು ಗಂಡ ಹಾಗೂ ಮೈದುನನಿಗೆ ತಂದಿದ್ದ ಕೇಕಿನಲ್ಲಿ ಚೂರಿ ಇಟ್ಟು ಕೊಟ್ಟಿದ್ದಳೆಂಬ ಆರೋಪದಡಿಯಲ್ಲಿ ಶೀಲಾಳನ್ನು ಆರೋಪಿ ಯನ್ನಾಗಿಸಿತ್ತು. ದಿಢೀರ್ ಬೆಳವಣಿಗೆಯೊಂ ದರಲ್ಲಿ ಮುತ್ತಪ್ಪನ ಪತ್ನಿ ಶೀಲಾ ಪತ್ರಿಕಾ ಗೋಷ್ಟಿ ನಡೆಸಿ ‘ನನ್ನ ಗಂಡ ಯಾವುದೇ ಕೃತ್ಯವನ್ನು ಎಸೆಯದೇ ನಿರ್ದೋಷಿಯಾಗಿದ್ದು, ಕೊಲೆ ನಡೆದ ಸಂದರ್ಭದಲ್ಲಿ ಮುತ್ತಪ್ಪ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದರು. ಶೆಟ್ಟಿಗಾರನ ಮೇಲೆ ನಡೆಯುತ್ತಿದ್ದ ದಾಳಿ ವೇಳೆ ಕಿರುಚಾಟ ಕೇಳಿದ್ದ ಹಿನ್ನೆಲೆಯಲ್ಲಿ ಅವರು ಹಲ್ಲೆಯನ್ನು ತಡೆಯಲು ಶೆಟ್ಟಿಗಾರನ ಬಳಿಗೆ ಆಗಮಿಸಿದ್ದರು.
ಈ ವೇಳೆ ಹಲ್ಲೆಯನ್ನು ತಡೆಯಲು ಯತ್ನಿಸಿದರೆ ವಿನಹ ಕೊಲೆ ನಡೆಸಲಿಲ್ಲ. ಇದಲ್ಲದೆ ಕೊಲೆ ನಡೆದು ಸುಮಾರು ಒಂದು ಗಂಟೆಯವರೆಗೆ ವಿನೋದ್ ಶೆಟ್ಟಿಗಾರ್ ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿದ್ದರೂ ಯಾವುದೇ ಪೊಲೀಸರಾಗಲೀ, ಜೈಲು ಸಿಬ್ಬಂದಿಗಳಾಗಲೀ ಈತನನ್ನು ಆಸ್ಪತ್ರೆಗೆ ಸಾಗಿಸಿ ರಕ್ಷಿಸುವ ಕ್ರಮಕೈಗೊಳ್ಳಲಿಲ್ಲ. ಇದರಿಂದ ವಿನೋದ್ ಕೊಲೆಗೆ ಪೊಲೀಸರೇ ನೇರ ಹೊಣೆ ಎಂದು ಮುತ್ತಪ್ಪನ ಪತ್ನಿ ಶೀಲಾ ಆರೋಪಿ ಸಿದ್ದಾರೆ. ಗಂಡನನ್ನು ವಿನಾಕಾರಣ ಪ್ರಕರಣದಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಹೇಳಿರುವ ಶೀಲಾ ಕೊಲೆ ನಡೆದ ಮರುದಿನ ಆರೋಪಿಗಳನ್ನು ಬೆಳಗಾವಿ ಜೈಲಿಗೆ ಸ್ಥಳಾಂತರಿಸುವ ಸಂದರ್ಭ ಫೋನ್ ಮೂಲಕ ಮಾತನಾ ಡಿದ್ದ ಮೈದುನ ನಾಗರಾಜ್ ‘ವಿನೋದ್‌ನನ್ನು ನಾನೇ ಕೊಲೆಗೈದಿದ್ದು, ನನ್ನ ಅಣ್ಣ ಮುತ್ತಪ್ಪನ ಪಾತ್ರವಿಲ್ಲ, ಅವರು ಕೇವಲ ಜಗಳ ಬಿಡಿಸಲು ಬಂದಿದ್ದಾರೆ ಎಂದು ತಿಳಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾಳೆ. ಇದರೊಂದಿಗೆ ಚೂರಿಯನ್ನು ತಾನು ಕೇಕಿನೊಳಗೆ ಇಟ್ಟು ಕೊಡಲಾಗಿದೆಯೆಂದು ಎಲ್ಲಾ ಪತ್ರಿಕೆಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿದ್ದು, ನಾನು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ತನ್ನ ಗಂಡನನ್ನು ಕೊಲೆಗಡುಕನನ್ನಾಗಿ ಮಾಡಲು ಯಾವ ಪತ್ನಿ ಇಚ್ಛಿಸುತ್ತಾಳೆ? ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ತಾನು ಡಿ.೬ ರಂದು ಕೇಕ್ ಕೊಟ್ಟಿದ್ದು ನಿಜ. ನನ್ನ ಮಗಳ ಬರ್ತ್‌ಡೇಗೆಂದು ಕೊಟ್ಟಿದ್ದೇನೆ. ಈ ವೇಳೆ ನನ್ನ ಎದುರೇ ಪೊಲೀಸರು ಕೇಕನ್ನು ತಿಂದು ಪರೀಕ್ಷಿಸಿ ಮುತ್ತಪ್ಪನಿಗೆ ನೀಡಿದ್ದರೆಂದು ಸ್ಪಷ್ಟಪಡಿಸಿದರು. ಈ ತಿಂಗಳ ೨೩ರಂದು ಅವರ ಹಳೆಯ ಕೇಸಿನ ವಿಚಾರಣೆ ನಡೆಯಲಿದ್ದು, ಅದರಲ್ಲಿ ಮುತ್ತಪ್ಪ ನಿರ್ದೋಷಿ ಎಂದು ಸಾಬೀತಾಗುವುದರಲ್ಲಿತ್ತು, ಆದರೆ ಇದೀಗ ಪೊಲೀಸರು ಇಲ್ಲಸಲ್ಲದ ಆರೋಪವನ್ನು ಹೊರಿಸಿ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಪತಿಯ ಕ್ರಿಮಿನಲ್ ಹಿನ್ನೆಲೆಯಿಂದ ಆಂಧ್ರದ ಪೊಲೀಸ್ ಇಲಾಖೆಯಿಂದ ಕೆಲಸ ಕಳೆದುಕೊಂಡ ಶೀಲಾ ತಿಳಿಸಿದ್ದಾರೆ. ಈ ಹಿಂದೆ ಈಕೆ ಉಡುಪಿ ಜೈಲರ್‌ಗಳು ಲಂಚ ಪಡೆಯುತ್ತಿರುವ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ