ಶುಕ್ರವಾರ, ಜನವರಿ 21, 2011

ದುಡ್ಡು ಕೊಟ್ಟರೆ ಯಾವ ನೀಚ ಕಾರ್ಯಕ್ಕೂ ಸಿದ್ಧರಾಗುವ ಕಲ್ಲಡ್ಕ ಪ್ರಭಾಕರ ಭಟ್ಟ

ಬಂಟ್ವಾಳ, ಜ.21: ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ನಾರಾಯಣ ಸೋಮಯಾಜಿಯವರ ಷಡ್ಯಂತ್ರದಿಂದ ಸುದೆಕ್ಕಾರ್‌ನಲ್ಲಿ ಶುಕ್ರವಾರ ರಾತ್ರಿ ನಡೆ ಯಬೇಕಾಗಿದ್ದ ಯಕ್ಷಗಾನ ಬಯಲಾಟ ರದ್ದುಗೊಂಡಿದ್ದು, ದುಡ್ಡು ಕೊಟ್ಟರೆ ಯಾವ ನೀಚ ಕಾರ್ಯಕ್ಕೂ ಸಿದ್ಧರಾಗುವ ಕಲ್ಲಡ್ಕ ಪ್ರಭಾಕರ ಭಟ್ಟರದ್ದು ಕಪಟ ಹಿಂದುತ್ವ ಎಂದು ಗೋಳ್ತಮಜಲು ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12ವರ್ಷಗಳಿಂದ ವರ್ಷಂಪ್ರತಿ ಸುದೆಕ್ಕಾರ್‌ನ ಶ್ರೀರಾಮ ಭಜನಾ ಮಂದಿರದ ಬಳಿ ಯಕ್ಷಗಾನ ನಡೆಸುತ್ತಾ ಬರಲಾಗಿದೆ. ಆದರೆ, ಈ ಬಾರಿ ನಾರಾಯಣ ಸೋಮಯಾಜಿ ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಕಲ್ಲಡ್ಕ ಪ್ರಭಾಕರ ಭಟ್ಟರು ಇದನ್ನು ಬೆಂಬಲಿ ಸಿದ್ದಾರೆ ಹಾಗೂ ಬಂಟ್ವಾಳ ತಹಶೀಲ್ದಾರ್ ರವಿಚಂದ್ರ ನಾಕ್ ಏಕಪಕ್ಷೀಯ ಧೋರಣೆ ಅನುಸರಿಸಿದ್ದಾರೆ ಎಂದು ದೂರಿದರು. ಬಾಳ್ತಿಲ ಗ್ರಾಮದ ಸರ್ವೆ ನಂಬ್ರ 10/2 ರಲ್ಲಿ 2.60 ಎಕ್ರೆ ಜಾಗವಿದ್ದು, ಇಲ್ಲಿ ಶ್ರೀ ರಾಮ ಭಜನಾ ಮಂದಿರ, ಅಂಗನವಾಡಿ ಕೇಂದ್ರ ಹಾಗೂ ಸಾರ್ವ ಜನಿಕ ರಂಗಮಂದಿರವಿದೆ. ಇದು ಸಂಪೂರ್ಣ ಸರಕಾರಿ ಜಾಗವಾಗಿದೆ ಎಂದ ಅವರು, ಸಂಸದ ನಳಿನ್ ಕುಮಾರ್ ಕಟೀಲು ಯಕ್ಷಗಾನ ಮಂಡ ಳಿಯ ಮೆನೇಜರ್‌ಗೆ ದೂರವಾಣಿ ಮೂಲಕ ಪ್ರದರ್ಶನಕ್ಕೆ ತಡೆಯೊಡ್ಡುವಂ ತಹ ನೀಚ ಕಾರ್ಯಕ್ಕೆ ಇಳಿದಿದ್ದಾರೆ. ಯಕ್ಷಗಾನಕ್ಕೆ ತಡೆಯೊಡ್ಡಿದ ಬಗ್ಗೆ ಬಂಟ್ವಾಳ ತಹಶೀಲ್ದಾರರ ಸಹಿತ ಇದಕ್ಕೆ ಸಹಕರಿಸಿದ ಇನ್ನಿತರರ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲಾ ಗುವುದು ಎಂದು ತಿಳಿಸಿದರು.
 ಸುದೆಕ್ಕಾರು ಫ್ರೆಂಡ್ಸ್‌ನ ಅಧ್ಯಕ್ಷ ಶೇಖರ ಸುದೆಕ್ಕಾರು ಮಾತನಾಡಿ, ಮುಸ್ಲಿಮರನ್ನು ಹಿಂದೂ ವಿರೋಧಿಗಳೆಂದು ಈ ತನಕ ಬಿಂಬಿಸಲಾಗುತ್ತಿತ್ತು. ಆದರೆ, ಕಲ್ಲಡ್ಕ ಪ್ರಭಾಕರ ಭಟ್ ಹಿಂದೂ ವಿರೋಧಿ ಎಂಬುದು ನಮಗೆ ಈಗ ಮನವರಿಕೆ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫ್ರೆಂಡ್ಸ್ ಸುದೆಕ್ಕಾರ್‌ನ ಅಧ್ಯಕ್ಷ ಶೇಖರ, ಕಾರ್ಯದರ್ಶಿ ಕುಶಲ ಕುಮಾರ್, ಸದಸ್ಯ ನಾರಾಯಣ ಸುದೆಕ್ಕಾರ್, ಪರಿಶಿಷ್ಟ ಪಂಗಡದ ಮುಖಂಡ ಪದ್ಮನಾಭ ನರಿಂಗಾನ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ