ಮಂಗಳೂರು, ಜ.27: ಮುಖಾಂಗ ವಿಕೃತಿಗೆ ಸಂಬಂಧಿಸಿದಂತೆ ಫೌಂಡೇಶನ್ ಹಾಗೂ ಜರ್ಮನಿಯ ಕ್ಲೆಪ್ಟ್ ಚೈಲ್ಡ್ ಏಯ್ಡ್ ಸೊಸೈಟಿಯ ವತಿಯಿಂದ ನಗರದ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಬಡತನ ರೇಖೆಗಿಂತ ಕೆಳಗಿನ ರೋಗಿಗಳಿಗೆ ಈ ಕೇಂದ್ರದಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರದ ಆಡಳಿತ ನಿರ್ದೇಶಕ ಡಾ. ಅಕ್ತರ್ ಹುಸೈನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಜನಿಸುವ 800 ಮಕ್ಕಳಲ್ಲಿ ಒಂದು ಮಗು ಸೀಳು ತುಟಿ, ಬಾಯಿಯ ಊನತೆ ಅಥವಾ ಮುಖಾಂ ಗದ ವಿಕಲತೆಯನ್ನು ಹೊಂದಿರುತ್ತದೆ. ಕರ್ನಾಟಕ, ತಮಿಳುನಾಡಿನಲ್ಲಿ ಪ್ರತಿ ವರ್ಷ ಸುಮಾರು 1300 ಮಕ್ಕಳು ಇಂತಹ ವೈಕಲ್ಯದೊಂದಿಗೆ ಹುಟ್ಟುತ್ತಾರೆ. ಕೇರಳದಲ್ಲಿ ಇಂತಹ ಸಂಖ್ಯೆ ವರ್ಷಕ್ಕೆ ಸುಮಾರು 600. ಈ ಸಮಸ್ಯೆ ಸರಿಪಡಿಸದಿದ್ದರೆ ಕಿವುಡುತನ, ಹಲ್ಲುಗಳ ಸಮಸ್ಯೆ, ತಿನ್ನಲು ಸಾಧ್ಯವಾಗದೆ ಪೌಷ್ಟಿಕತೆಯ ಕೊರತೆ, ತೊದಲು ಮಾತು ಹಾಗೂ ಸಾಮಾಜಿಕ ಪ್ರತ್ಯೇಕತೆಯಂತಹ ಸಮಸ್ಯೆ ಗಳಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕೇವಲ ಮುಖದ ಆಂಗಿಕ ಊನತೆ ಸರಿ ಪಡಿಸುವುದಲ್ಲದೆ ನಿರಂತರವಾಗಿ ಅವರಿಗೆ ಚಿಕಿತ್ಸೆ ನೀಡುವ ಕೇಂದ್ರವನ್ನು ಜರ್ಮನಿಯ ದತ್ತಿ ನಿಧಿ ಸಂಸ್ಥೆ ಹಾಗೂ ಮಾಯಾ ಫೌಂಡೇಶನ್ ಸಹಾಯದೊಂದಿಗೆ ಯೆನೆಪೋಯ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ರೀತಿಯ ಊನತೆ ಹೊಂದಿ ರುವ ಮಕ್ಕಳಲ್ಲಿ ಆರ್ಥಿಕವಾಗಿ ತುಂಬಾ ಹಿಂದುಳಿದವರು ಇರುವುದನ್ನು ಗಮನಿಸಿ ಮಾಯಾ ಫೌಂಡೇಶನ್ ಭಾರತಾ ದ್ಯಂತ ಕಿಮಾಯಾ ಕ್ಲೆಫ್ಟ್ ಸೆಂಟೆರ್ ಗಳೆಂಬ ಕೇಂದ್ರಗಳನ್ನು ಅಹ್ಮದಾಬಾದ್, ಭುವನೇಶ್ವರ, ಮುಂಬೈ, ಶ್ರೀನಗರ, ಸೂರತ್, ವಿಶಾಖಪಟ್ಟಣಂ, ಆಗ್ರಾ, ಪಾಟ್ನಾ, ರಾಯಪುರ ಹಾಗೂ ಮಂಗಳೂರಿನಲ್ಲಿ ಆರಂಭಿಸಿದೆ. ಸ್ಥಳೀಯ ಸಂಸ್ಥೆಗಳು, ದಾನಿಗಳು, ಸರಕಾರೇತರ ಸಂಸ್ಥೆಗಳ ದೇಣಿಗೆಯೊಂದಿಗೆ ಈ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯೆನೆಪೋಯ ದಂತ ವಿಜ್ಞಾನ ಕಾಲೇಜಿನ ಪ್ರಾಂಶು ಪಾಲ ಶ್ರೀಪತಿ ರಾವ್, ಕೇಂದ್ರದ ಮುಖ್ಯಸ್ಥ ಡಾ. ಮುಸ್ತಫಾ, ಇತರ ತಜ್ಞರಾದ ಡಾ. ಮನುಪ್ರಸಾದ್, ಡಾ. ರಶ್ಮೀ ರಾವ್, ಮಾಯಾ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದುಶ್ಯಂತ್ ರಾವ್ ಪ್ರಸಾದ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ