ಶುಕ್ರವಾರ, ಜನವರಿ 21, 2011

ಮಕ್ಕಾ ಮಸೀದಿ ಸ್ಫೋಟ ತನಿಖೆ ಅರ್ಧದಲ್ಲೇ ಇತಿಶ್ರೀಯಾಗಲಿದೆಯೇ?

ಸ್ವಾಮಿ ಅಸೀಮಾನಂದ ತೀಸ್ ಹಜಾರಿ ನ್ಯಾಯಾಲಯದಲ್ಲಿ ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳು ಮಾಲೆಗಾಂವ್ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳ ಬಗ್ಗೆ ಒಂದು ನಿರ್ದಿಷ್ಟ ಪ್ರಮಾಣದ ಸ್ಪಷ್ಟತೆಯನ್ನು ಮೂಡಿಸಿರಬಹುದು. 2007ರಲ್ಲಿ ನಡೆದ ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣ ದಲ್ಲೂ ಕೇಸರಿ ಸಂಘಟನೆಗಳ ಕೈವಾಡವಿರುವುದನ್ನು ಅಸೀಮಾನಂದ ಒಪ್ಪಿಕೊಂಡಿದ್ದರೂ ಸಹ, ಈ ಪ್ರಕರಣದ ತನಿಖೆಯು ಸ್ತಬ್ಧಗೊಂಡಿದೆ. ಈ ಪ್ರಕರಣದ ಬಗ್ಗೆ ತನಿಖಾಧಿಕಾರಿಗಳಲ್ಲಿ ಮುತುವರ್ಜಿಯ ಕೊರತೆಯಿರುವುದು ಎದ್ದು ಕಾಣುತ್ತಿದೆ.

ಮಕ್ಕಾ ಮಸೀದಿ ಸ್ಫೋಟ ನಡೆದು ಸುಮಾರು ನಾಲ್ಕು ವರ್ಷಗಳಾದ ಬಳಿಕ ಹೈದರಾಬಾದ್ ಪೊಲೀಸರು ತನಿಖೆಯತ್ತ ಮುಖ ಮಾಡಿದ್ದರಾದರೂ, ಅದೇಕೋ ಹಳಿ ತಪ್ಪುತ್ತಿರುವ ಹಾಗೆ ಕಾಣುತ್ತಿದೆ. ಅದಕ್ಕೂ ಹೆಚ್ಚಾಗಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆಯೆಂಬ ಭಾವನೆ ನಗರದ ಮುಸ್ಲಿಮರಲ್ಲಿ ಬೆಳೆಯತೊಡಗಿದೆ.

ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ತೀವ್ರವಾದಿ ಇಸ್ಲಾಮಿಕ್ ಸಂಘಟನೆಗಳ ಕೈವಾಡವಿದೆಯೆಂದು ಶಂಕಿಸಿ ತನಿಖಾಧಿಕಾರಿಗಳು ಮುಸ್ಲಿಂ ಸಮುದಾಯದ ಹಲವು ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿತ್ತು.

ತೀವ್ರ ಒತ್ತಡ ಬಂದ ಬಳಿಕವಷ್ಟೇ ಹೈದರಾಬಾದ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತಾದರೂ,ಅದರೆ ಕಳೆದ ಎರಡು ತಿಂಗಳುಗಳಿಂದ ತನಿಖೆಯು ಆಮೆಗತಿಯಲ್ಲಿ ಸಾಗುತ್ತಿದೆ.ಇಂದು ಮಕ್ಕಾ ಮಸೀದಿ ಸ್ಫೋಟ ಪ್ರಕರಣವನ್ನು ಎರಡು ಭಾಗಗಳಾಗಿ ತನಿಖೆ ಮಾಡಲಾ ಗುತ್ತಿದೆ. ಮೊದಲನೆಯ ತನಿಖೆಯು ಸ್ಫೋಟಗೊಂಡಿದ್ದ ಬಾಂಬ್‌ಗೆ ಸಂಬಂಧಿಸಿದ್ದಾದರೆ, ಇನ್ನೊಂದು ಸ್ಫೋಟಿಸದೆ ಉಳಿದ ಬಾಂಬ್‌ನ ಕುರಿತಾಗಿದೆ.

ಮಕ್ಕಾ ಮಸೀದಿಯಲ್ಲಿ ಸ್ಫೋಟಿಸಿದ್ದ ಸ್ಫೋಟಕವಸ್ತುವಿಗೆ ಸಂಬಂಧಿಸಿ ಸಿಬಿಐ ತನಿಖೆಯನ್ನು ಆರಂಭಿಸಿದೆ. ಆದಾಗ್ಯೂ ಹೈದರಾಬಾದ್ ಪೊಲೀಸರು ತಾವು ಪತ್ತೆಹಚ್ಚಿದ ಸ್ಫೋಟಿಸದೆ ಉಳಿದ ಬಾಂಬ್‌ನ ಬಗ್ಗೆ ತನಿಖೆಯನ್ನು ಈಗಲೂ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಸಹ ಸಿಬಿಐಗೆ ಹಸ್ತಾಂತರಿಸುವಂತೆ ಅವರ ಮೇಲೆ ಬಲವಾದ ಒತ್ತಡವನ್ನು ಹೇರಲಾಗುತ್ತಿದೆ ಯಾದರೂ, ಈವರೆಗೆ ಏನೂ ಪ್ರಯೋಜನವಾಗಿ ಲ್ಲವೆಂದು ಆಂತರಿಕ ಮೂಲಗಳು ತಿಳಿಸಿವೆ.

ಹೈದರಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಅನ್ಯಾಯವಾಗಿ ಬಂಧಿಸಲ್ಪಟ್ಟಿರುವ ಅಮಾಯಕ ಮುಸ್ಲಿಂ ಯುವಕನೊಬ್ಬನ ಪರವಾಗಿ ಹೋರಾಡುತ್ತಿರುವ ಮಾನವಹಕ್ಕುಗಳ ಚಳವಳಿಗಾರರು ಕೂಡಾ, ಒಂದು ಪ್ರಕರಣವನ್ನು ಸಿಬಿಐಗೂ ಇನ್ನೊಂದನ್ನು ಸ್ಥಳೀಯ ಪೊಲೀಸರೂ ನಿರ್ವಹಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ಗಳನ್ನು ಒಂದೇ ದಿನ ಒಂದೇ ಉದ್ದೇಶಕ್ಕಾಗಿ ಒಂದೇ ಸ್ಥಳದಲ್ಲಿ ಇರಿಸಲಾಗಿತ್ತು. ಹಾಗಾಗಿ ಪ್ರಕರಣ ವನ್ನು ಸಿಬಿಐಯೇ ಏಕಾಏಕಿಯಾಗಿ ತನಿಖೆ ಮಾಡಬೇಕೆಂದು ಅವರು ಪ್ರತಿಪಾದಿಸಿದ್ದಾರೆ.

ಆದಾಗ್ಯೂ ಹೈದರಾಬಾದ್ ಪೊಲೀಸರು ಪ್ರಕರಣವನ್ನು ಹಸ್ತಾಂತರಿಸಲು ಒಪ್ಪುತ್ತಿಲ್ಲ. ತಾವು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿರುವುದಾಗಿ ಸಬೂಬು ಹೇಳುತ್ತಿದ್ದಾರೆ. ಆದರೆ ತನಿಖೆಯಲ್ಲಿ ಹೆಚ್ಚೇನೂ ಪ್ರಗತಿಯಾಗಿರುವುದು ಕಂಡುಬರುತ್ತಿಲ್ಲ. ಇದೀಗ ಪೊಲೀಸರು ಅದನ್ನು ತಟಸ್ಥವಾಗಿರಿಸಿದ್ದಾರೆ.

ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಹೀಗಿದ್ದರೂ ಸಹ ಹೈದರಾಬಾದ್ ಪೊಲೀಸರು ಪ್ರಕರಣವನ್ನು ಈವರೆಗೆ ತಮ್ಮಲ್ಲಿಯೇ ಉಳಿಸಿಕೊಂಡಿರುವುದು ಅಚ್ಚರಿಕರ. ಇದೀಗ ಈ ಪ್ರಕರಣದ ತನಿಖೆಯನ್ನು ತನಗೆ ವಹಿಸಬೇಕೆಂದು ಕೋರಿ ಸಿಬಿಐನಿಂದ ವಿಧ್ಯುಕ್ತವಾಗಿ ಪತ್ರ ಬರುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆಂದು ಕೆಲವು ಮೂಲಗಳು ಹೇಳಿವೆ.

ಆದಾಗ್ಯೂ ಸಿಬಿಐ ಸದ್ಯಕ್ಕೆ ತಾನು ಸ್ಫೋಟಗೊಂಡ ಬಾಂಬ್ ಬಗ್ಗೆ ಮಾತ್ರ ತನಿಖೆ ನಡೆಸುವುದಾಗಿ ಹೇಳಿದೆ. ಈ ನಿಟ್ಟಿನಲ್ಲಿ ಅಸೀಮಾನಂದ ನೀಡಿದ ತಪ್ಪೊಪ್ಪಿಗೆ ಹೇಳಿಕೆಯು ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಮಕ್ಕಾ ಮಸೀದಿಯಲ್ಲಿ ಯಾರು ಬಾಂಬಿರಿಸಿದರು ಹಾಗೂ ದಾಳಿಯನ್ನು ನಡೆಸಲು ಅವರಿಗೆ ಯಾರು ವ್ಯವಸ್ಥೆ ಮಾಡಿದರು ಹಾಗೂ ಸ್ಥಳೀಯರು ನೆರವನ್ನು ನೀಡಿದರು ಎಂಬ ಎರಡು ಅಂಶಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಸ್ಫೋಟಕ್ಕೆ ನೆರವು ನೀಡಿದವರು ಯಾರು?

ಅಸೀಮಾನಂದ ಸಿಬಿಐ ಅಧಿಕಾರಿಗಳು ತಮ್ಮ ತನಿಖೆಯನ್ನು ಮುನ್ನಡೆಸುವುದಕ್ಕೆ ಕಾರಣನಾಗಿದ್ದಾನೆ. ಆದರೆ ನಿಗೂಢವಾಗಿ ಕೊಲೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಸುನೀಲ್ ಜೋಶಿ ಹಾಗೂ ಆತನ ಸಹಚರರಾದ ಸಂದೀಪ್ ಡಾಂಗೆ ಹಾಗೂ ರಾಮ್‌ಜಿ ಕಲ್ಸಂಗ್ರಾ, ಬಿಹಾರ್ ದೇವೇಂದ್ರ ಗುಪ್ತಾ ಹಾಗೂ ಲೋಕೇಶ್ ಗುಪ್ತಾ ಅವರಿಗೆ ಈ ಪ್ರಕರಣದ ಜೊತೆ ಸಂಬಂಧವನ್ನು ಬಯಲಿಗೆಳೆ ಯುವುದು ಅದರ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.

ಸಿಬಿಐ ಡಿಸೆಂಬರ್ 18ರಂದು ಗುಪ್ತಾ, ಶರ್ಮಾ ಹಾಗೂ ಜೋಶಿ ವಿರುದ್ಧ ಹೈದರಾಬಾದ್‌ನ ನ್ಯಾಯಾಲಯವೊಂದರಲ್ಲಿ ದೋಷಾ ರೋಪ ಪಟ್ಟಿಯನ್ನು ಸಲ್ಲಿಸಿತು. ಈಗ ಭೂಗತರಾಗಿರುವ ಡಾಂಗೆ ಹಾಗೂ ಕಲ್ಸಂಗ್ರಾನನ್ನು ಕೂಡಾ ಚಾರ್ಜ್‌ಶೀಟ್ ಹೆಸರಿಸಿದೆ.

ಈ ಮೂವರು ವ್ಯಕ್ತಿಗಳು ಹೈದರಾಬಾದ್‌ನವರಲ್ಲ. ಹಾಗಾಗಿ ಅವರು ಸ್ಥಳೀಯರ ನೆರವಿಲ್ಲದೆ ಈ ದಾಳಿಯನ್ನು ನಡೆಸಿರುವುದು ಅಸಾಧ್ಯವೆಂದು ಸಿಬಿಐ ಮೂಲಗಳು ಹೇಳಿವೆ.

ಸಿಬಿಐ ಕಸ್ಟಡಿಯಲ್ಲಿರುವ ಗುಪ್ತಾ, ತಮಗೆ ಸ್ಥಳೀಯರ ಬೆಂಬಲ ವಿರುವ ಬಗ್ಗೆ ಯಾವುದೇ ಬಗ್ಗೆ ತನಿಖಾಧಿಕಾರಿ ಗಳಿಗೆ ನೀಡಿಲ್ಲ. ಅದಕ್ಕೂ ಹೆಚ್ಚಾಗಿ ಈ ವಿಷಯವಾಗಿ ಮಾಹಿತಿಗಳನ್ನು ಸಂಗ್ರಹಿಸಲು ಹೈದರಾಬಾದ್ ಪೊಲೀಸರಿಗೆ ಇದುವರೆಗೆ ಸಾಧ್ಯವಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ