ಮಂಗಳೂರು: ಇತ್ತೀಚೆಗೆ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಪಕ್ಷ ದಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಹಾಗೂ ಮತದಾರರಿಗೆ ಅಭಿನಂದನಾ ಸಲ್ಲಿಸುವ ಕಾರ್ಯಕ್ರಮ ಗುರುಪುರ-ಕೈಕಂಬ ಜಂಕ್ಷನ್‌ನಲ್ಲಿ ನಡೆ ಯಿತು. ಈ ಸಂದರ್ಭದಲ್ಲಿ ರೋಸಮಿ ಸ್ತಿಕಾ ಮತ್ತು ಸೂರಲ್ಪಾಡಿಯಿಂದ ಬೃಹತ್ ರ‍್ಯಾಲಿ ನಡೆಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಸಮಾಜದ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ನಿಟ್ಟಿನಲ್ಲಿ ಎಸ್.ಡಿ.ಪಿ.ಐ. ಪಕ್ಷವನ್ನು ಹುಟ್ಟು ಹಾಕ ಲಾಗಿದ್ದು ಇದರ ಕಾರ್ಯ ವೈಖರಿಗೆ ಈಗಾಗಲೇ ಅಪಾರ ಜನಬೆಂಬಲ ವ್ಯಕ್ತ ವಾಗಿದೆ. ಇದನ್ನು ಗಮನಿಸಿರುವ ವಿರೋಧಿಗಳು ಪಕ್ಷವು ಜನಪರವಾಗಿರು ವುದನ್ನು ಅರಿತು ಚಿಂತಿತರಾಗಿದ್ದಾರೆ.
ಎಸ್.ಡಿ.ಪಿ.ಐ. ಅಭಿವೃದ್ಧಿಯಿಂದ ತಮ್ಮ ಓಟ್ ಬ್ಯಾಂಕ್‌ಗೆ ಅಡ್ಡಿಯಾ ಗುವುದನ್ನು ಕಂಡು ಹೆದರಿರುವ ಪಟ್ಟಭದ್ರರು ಪಕ್ಷವು ಬಿ.ಜೆ.ಪಿ.ಯಿಂದ ಲಂಚ ಪಡೆದು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಪ್ರತಿಪಾದಿಸಿದ ಸಾದಾತ್ ಆರೋಪ ಮಾಡಿದವರ ಬಳಿ ಪುರಾವೆ ಇದ್ದಲ್ಲಿ ಅದನ್ನು ತಂದು ನಮ್ಮ ಮುಂದೆ ಇಡಲಿ ಅಥವಾ ಬಹಿರಂಗ ವಾಗಿ ವೇದಿಕೆಗೆ ಬಂದು ಚರ್ಚಿಸಲು ಮುಂದಾಗಲಿ. ಸವಾಲನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯಾಧ್ಯಕ್ಷರಾಗಿರುವ ಜಲೀಲ್ ವಹಿಸಿದ್ದರು. ವೇದಿಕೆಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಸುಬ್ರಹ್ಮಣ್ಯ ಭಟ್, ಸದಸ್ಯರಾದ ಅಕ್ಬರ್ ಅಲಿ, ಮಹಮ್ಮದ್ ಶರೀಫ್, ಶೇಕುಞಿ, ಜಮಾಲ್, ಶರೀಫ್ ಹಾಗೂ ತಾ.ಪಂ. ಮತ್ತು ಜಿ.ಪಂ. ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಸೋತರೂ ಸನ್ಮಾನ!
ಯಾವುದೇ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಹಿಂದುಗಡೆ ಸಂಬಂಧಪಟ್ಟ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಇರುತ್ತಾರೆ. ಆದರೆ ಚುನಾವಣೆಯಲ್ಲಿ ಆತ ಸೋತನೆಂದರೆ ನಂತರ ಆತನ ಹಿಂದೆ ಇದ್ದವರ ನೆರಳು ಕೂಡಾ ಕಾಣಿಸುವುದಿಲ್ಲ. ಆದರೆ ಎಸ್.ಡಿ.ಪಿ.ಐ. ಪಕ್ಷ ಸೋತ ಅಭ್ಯರ್ಥಿಗಳ ಕೈ ಬಿಡದೆ ಅವರ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಕೆಲಸ ಮಾಡಿದೆ. ಗುರುಪುರದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಸಭೆಯಲ್ಲಿ ಪಕ್ಷದ ಪರವಾಗಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳು ಉಪಸ್ಥಿತರಿದ್ದು ಅವರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಇದು ಪಕ್ಷದ ಮೇಲೆ ಜನಸಾಮಾನ್ಯರಿಗೆ ವಿಶ್ವಾಸ ಮೂಡಿಸುತ್ತದೆ. ಅಲ್ಲದೆ ಇತರ ಪಕ್ಷಗಳಿಗಿಂತ ವಿಭಿನ್ನವೆಂಬ ಸಂದೇಶವನ್ನು ಎಸ್.ಡಿ.ಪಿ.ಐ. ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ