ಅಲ್ಲದೆ ಇದರ ಸೂತ್ರಧಾರಿ ಎಂದು ಹೇಳಲಾಗಿರುವ ಲೆನಿನ್ ಹಿಂದೆ ಕ್ರೈಸ್ತ ಮಿಷನರಿಯೊಬ್ಬರ ಕೈವಾಡವಿದೆ ಇದೆ ಎಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಭಾವೋದ್ವೇಗದಿಂದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಂಜಿತಾ, ನಿತ್ಯಾನಂದನ ಕೋಟ್ಯಂತರ ಭಕ್ತರಲ್ಲಿ ನಾನೂ ಒಬ್ಬಳಾಗಿದ್ದೇನೆ. ಬಿಡದಿ ಆಶ್ರಮದಲ್ಲಿ ಸಾಮಾಜಿಕ ಸೇವೆಯ ಉದ್ದೇಶದಿಂದ ಭಾಗಿಯಾಗಿದ್ದೆ ವಿನಃ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಎಂದಿಗೂ ನಿತ್ಯಾನಂದ ಸ್ವಾಮಿಯ ಭಕ್ತೆಯಾಗಿಯೇ ಇರುತ್ತೇನೆ. ಅವಕಾಶ ದೊರೆತರೆ ಮತ್ತೆ ನಿತ್ಯಾನಂದ ಸ್ವಾಮಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದಾಗಿಯೂ ಈ ಸಂದರ್ಭದಲ್ಲಿ ತಮ್ಮ ಇಚ್ಛೆಯನ್ನು ಹೊರಹಾಕಿದರು. ವೀಡಿಯೋ ಬಗ್ಗೆ ಬಾಯಿ ಬಿಟ್ಟರೆ ಡ್ರಗ್ ಮತ್ತು ಪ್ರಾಸ್ಟಿಟ್ಯೂಷನ್ ಕೇಸು, ಅರೆಸ್ಟ್ ಮಾಡಿಸುವ ಬೆದರಿಕೆ ಒಡ್ಡಿದ್ದರು. ಹಾಗಾಗಿ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡದಿರಲು ಕಾರಣ ಎಂದರು. ಅಷ್ಟೇ ಅಲ್ಲ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಲೆನಿನ್ ವಿರುದ್ಧ ಗುರುವಾರ ರಾಮನಗರ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು.
ರಾಸಲೀಲೆ ಸಿ.ಡಿ. ಬಿಡುಗಡೆಯಾಗುವ ಸಂದರ್ಭದಲ್ಲಿ ನಾನು ಅಮೆರಿಕದಲ್ಲಿ ಇದ್ದೆ. ಅಲ್ಲದೇ ರಾಸಲೀಲೆ ದೃಶ್ಯಾವಳಿ ನಿಜವಲ್ಲ. ಬಿಡುಗಡೆಯಾಗಿರುವ ಅಶ್ಲೀಲ ದೃಶ್ಯಗಳಲ್ಲ ನಾನಿಲ್ಲ. ಸಿ.ಡಿ.ಯಲ್ಲಿರೋದೆಲ್ಲಾ ಬೋಗಸ್. ಇದೆಲ್ಲವೂ ಲೆನಿನ್ ಕರುಪ್ಪನ್ ಸಂಚು ಎಂದು ಗಂಭೀರವಾಗಿ ಆರೋಪಿಸಿದರು.
ಘಟನೆ ನಂತರ ನಾನು ತಲೆಮರೆಸಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಿಸಲಾಗಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಏನೂ ಹೇಳಬಾರದೆಂದು ಜೀವ ಬೆದರಿಕೆ ಒಡ್ಡಲಾಗಿತ್ತು. ನಾನು ಪೊಲೀಸ್ ವಿಚಾರಣೆಯಿಂದ ತಪ್ಪಿಸಿಕೊಂಡಿಲ್ಲ. ಯಾವುದೇ ರಹಸ್ಯ ಸ್ಥಳದಲ್ಲಿಯೂ ನಾನು ಅಡಗಿ ಕೂತುಕೊಂಡಿರಲಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಈ ವಿವಾದದ ನಂತರ ಬಹಳಷ್ಟು ನೊಂದಿದ್ದೇನೆ.
ನನ್ನ ವಿರುದ್ಧ ಈ ಹಿಂದೆ ಮಾಡಿದ್ದ ಆರೋಪಗಳೆಲ್ಲ ಸುಳ್ಳು. ಸಿ.ಡಿ. ವಿಚಾರ ಕುರಿತಂತೆ ಯಾವುದೇ ಮಾಧ್ಯಮಗಳು ನನ್ನ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳು ನನ್ನ ಖಾಸಗಿತನವನ್ನು ಗೌರವಿಸಿವೆ. ಆದರೆ ಕೆಲವು ಮಾಧ್ಯಮಗಳ ನನ್ನ ವೈಯಕ್ತಿಕ ಜೀವನದ ಬಗ್ಗೆ ಏನೇನೂ ವರದಿ ಮಾಡಿದ್ದವು. ಇದರಿಂದ ತನ್ನ ಜೀವನಕ್ಕೆ ಧಕ್ಕೆ ಆಗಿರುವುದಾಗಿ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಅಡಗಿಕೊಂಡಿದ್ದೇನೆ, ನಾಪತ್ತೆಯಾಗಿದ್ದೇನೆ ಎಂದೆಲ್ಲ ಊಹಾಪೋಹಕ್ಕೆ ಪತ್ರಿಕಾಗೋಷ್ಠಿಯ ಮೂಲಕ ತೆರೆಬಿದ್ದಿದೆ. ನನ್ನ ಕುಟುಂಬಕ್ಕೆ ನನ್ನ ಮೇಲೆ ನಂಬಿಕೆಯಿದೆ. ನಾನು ಹಾಗೆ ಮಾಡಿಲ್ಲ. ಹಾಗಾಗಿ ಕುಟುಂಬ ವರ್ಗ ನಂಬಿದ್ದಕ್ಕೆ ದೇವರಿಗೆ ಋಣಿಯಾಗಿರುತ್ತೇನೆ. ಆರೋಪಗಳನ್ನು ಮಾಡುವವರು, ನನ್ನ ಸ್ಥಾನದಲ್ಲಿ ನಿಂತು ಯೋಚಿಸಿ. ಮಹಿಳೆಯನ್ನು ದಾಳವನ್ನಾಗಿ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡ ರಂಜಿತಾ ತಮ್ಮ ಮಾತಿನುದ್ದಕ್ಕೂ ಸಿ.ಡಿ.ಯಲ್ಲಿರುವುದು ತಾನಲ್ಲ ಎಂಬುದಾಗಿ ಪ್ರತಿಪಾದಿಸಿದರು.
ನನಗೆ ಯಾವುದೇ ಪ್ರಭಾವಿಗಳ ಬೆಂಬಲವಿರಲಿಲ್ಲ. ನನ್ನನ್ನು ಬೆಂಬ ಲಿಸುವವರು ಯಾರೂ ಇರಲಿಲ್ಲ. ಹಾಗಾಗಿ ನನ್ನನ್ನು ಗುರಿ ಮಾಡಲಾಯಿತು ಎಂದು ಆರೋಪಿಸಿರುವ ರಂಜಿತಾ, ರಾಸಲೀಲೆ ಸಿ.ಡಿ.ಯಲ್ಲಿ ಇರೋದು ನೀವೇ ಅಲ್ಲವೇ ಎಂಬ ಪ್ರಶ್ನೆಗೆ ನಿಮಗೆ ಧೈರ್ಯವಿದ್ದರೆ ನಿತ್ಯಾನಂದನ ಎದುರು ನಿಂತು ಕೇಳಿ ಎಂದು ರೇಗಿದರು.
ಇದರೆಲ್ಲದರ ಹಿಂದೆ ತಮಿಳುನಾಡಿನ ಪ್ರತಿಷ್ಠಿತ ವ್ಯಕ್ತಿ ಇದ್ದು, ತಮಗೆ ಭದ್ರತೆ ನೀಡಿದರೆ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ