ಮಂಗಳವಾರ, ಡಿಸೆಂಬರ್ 14, 2010

ಇಂದು ಸಂಜೆ ಪ್ರತಿಭಟನೆ: ಪಾಪ್ಯುಲರ್ ಫ್ರಂಟ್

ಕ್ರಪೆ ವಿಶ್ವ ಕನ್ನಡಿಗ ನ್ಯೂಸ್
ಬಂಟ್ವಾಳ: ಶರಣ್ ಪಂಪುವೆಲ್, ಸುರೇಂದ್ರ ಬಂಟ್ವಾಳ ಸಹಿತ ಕೆಲವು ಕಟ್ಟರ್ ಹಿಂದೂ ನಾಯಕರುಗಳಿಗೆ ಸ್ಕೆಚ್ ರೂಪಿಸಿದ್ದ ಆರೋಪದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್, ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ನಂಜುಂಡೇಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನಿನ್ನೆ ಇಲ್ಲಿನ ಜೆಎಂಎಫ್‌ಸಿ ಕೋರ್ಟಿಗೆ ಹಾಜರುಪಡಿಸಿದೆ.
 ಬಂಧಿತರನ್ನು ಉಳ್ಳಾಲದ ನವಾಜ್,ಅಬ್ದುಲ್ ಖಾದರ್ ಅಶ್ರಫ್, ಮಹಮ್ಮದ್ ಸೈಫುಲ್ಲಾ, ನೂರುಲ್ ಅಮೀನ್, ವಲಿ ಅಬ್ದುಲ್ ರಶೀದ್, ಅಬ್ದುಲ್ ಶರೀಫ್, ಅಹ್ಮದ್ ಅನ್ಸಾರ್, ನೌಷಾದ್, ರಿಯಾಜ್ ಎಂದು ಹೆಸರಿಸಲಾಗಿದೆ.ಇವರೆಲ್ಲ ಜೋಕಟ್ಟೆ, ಅರ್ಕುಳ, ಮೂಡು ಶೆಡ್ಡೆ ಪರಿಸರದ ಯುವಕರು ಸೇರಿದ್ದರೆನ್ನಲಾಗಿದ್ದು ಇವರೆಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರಾಗಿದ್ದಾರೆ. ಆರೋಪಿಗಳಿಗೆ ೧೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರು ಸಮಾವೇಶಕ್ಕೆ ಹೊರಟವರು : ಪಾಪ್ಯುಲರ್ ಫ್ರಂಟ್.
ಮಂಗಳೂರು: ಮೈಸೂರಿನಲ್ಲಿ ಪಿಎಫ್‌ಐ ಸಂಘಟನೆಯ ರಾಜ್ಯ ಮಟ್ಟದ ಜಿಲ್ಲಾ ಮುಖಂಡರ ಸಮಾವೇಶ ಇತ್ತು. ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಒಂಭತ್ತು ಕಾರ್ಯಕರ್ತರು  ಟ್ರವೇರಾ ಗಾಡಿಯಲ್ಲಿ ಹೊರಟಿದ್ದರು. ಇವರನ್ನು ಶನಿವಾರ ಮಧ್ಯರಾತ್ರಿ ಬಂಟ್ವಾಳ ಪೊಲೀಸರು ಬಿ.ಸಿರೋಡ್ ಕೈಕಂಬ ಬಳಿ ರೌಂಡ್‌ಅಪ್ ಮಾಡಿದ್ದಾರೆ. ಏನು ಎತ್ತ ಎಂದು ವಿಚಾರಿಸುವಷ್ಟರಲ್ಲಿ ಇವರಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಸ್ವಿಚ್‌ಅಫ್ ಮಾಡಿದ್ದಾರೆ. ಮರುದಿನ ಮೈಸೂರಿನಿಂದ ಇಲ್ಲಿನ ಪಿಎಫ್‌ಐ ಮುಖಂಡರಿಗೆ ಕರೆಬಂತು. ಜಿಲ್ಲೆಯಿಂದ ಯಾರೂ ಸಮಾವೇಶಕ್ಕೆ ಬಂದಿಲ್ಲ, ಕಾರಣವೇನು ಎಂದು ಕೇಳಿದರು. ಕೂಡಲೇ ನಾವು ವಿಚಾರಿಸಿದೆವು. ಪೊಲೀಸರಿಗೂ ಸಂದೇಶ ತಲುಪಿಸಿ ಕಾಣೆಯಾದ ಕಾರ್ಯಕರ್ತರನ್ನು ಹುಡುಕತೊಡಗಿದೆವು. ಕೊನೆಗೆ ಪಿಎಫ್‌ಐ ಕಾರ್ಯಕರ್ತರನ್ನು ಬಂಟ್ವಾಳ ಪೊಲೀಸರು ಬಂಧಿಸಿ ಅವರ ಮೇಲೆ ಹತ್ಯಾ ಸಂಚಿನ ಆರೋಪ ಹೊರಿಸಿ ಕೇಸು ದಾಖಲಿಸಿದ್ದು ಗೊತ್ತಾಯಿತು. ಬಂಧಿತರಲ್ಲಿ ಪೋಲಿಯೋ ಪೀಡಿತ ರಿಯಾಜ್ ಎನ್ನುವ ಯುವಕನೂ ಇದ್ದಾನೆ. ಆತನಿಗೆ ಸರಿಯಾಗಿ ನಡೆ ಯಲು ಆಗುತ್ತಿಲ್ಲ. ಇಂಥವನನ್ನು ಜೊತೆಯಾಗಿಸಿಕೊಂಡು ಕೊಲ್ಲಲುಯಾರಾ ದರೂ ಹೋಗುತ್ತಾರೆಯೇ ಎಂದು ಪಿಎಫ್‌ಐ ಮುಖಂಡರು ಪ್ರಶ್ನಿಸಿದ್ದಾರೆ. 
ಇಂದು ಸಂಜೆ ಪ್ರತಿಭಟನೆ
ಮಂಗಳೂರು: ಬಂಟ್ವಾಳ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಬಂಧಿಸಿ ಸುಳ್ಳು ಕೇಸು ದಾಖಲಿಸಿದೆ ಎಂದು ಆರೋಪಿಸಿ ಪಿಎಫ್‌ಐ ಇಂದು ಸಂಜೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ