ಬಿ.ಸಿ.ರೋಡ್, ಡಿ.5: ಪೂರ್ವಿಕ ಮಹಾತ್ಮರು ಹಾಕಿಕೊಟ್ಟ ಸತ್ಪಥದಲ್ಲಿ ಮುನ್ನಡೆಯಲು ಯುವ ಸಮುದಾಯ ಕಟಿಬದ್ಧರಾಗಬೇಕು ಎಂದು ಪೇರೋಡ್ ಮುಹಮ್ಮದ್ ಮುಸ್ಲಿಯಾರ್ ಕುಟ್ಯಾಡಿ ಕರೆ ನೀಡಿದರು. ಎಸ್ಸೆಸ್ಸೆಫ್ ಕೆ.ಪಿ. ಬೈಲು ಶಾಖಾ ವತಿ ಯಿಂದ ಸುರಿಬೈಲು ದಾರುಲ್ ಅಶ್‌ಅರಿಯದ ಮರ್‌ಹೂಂ ಸುರಿಬೈಲು ಉಸ್ತಾದ್ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಮರ್ಕಝ್ ಪ್ರಚಾರ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರರಾಗಿ ಅವರು ಮಾತನಾಡುತ್ತಿದ್ದರು. ತಮಿಳುನಾಡು ವೆಲ್ಲೂರು ಅರೆಬಿಕ್ ಕಾಲೇಜು ಪ್ರಾಂಶುಪಾಲ ಕೆ.ಸಿ. ಅಬೂಬಕರ್ ಹಝ್ರತ್ ಸಮ್ಮೇಳನ ಉದ್ಘಾ ಟಿಸಿದರು. ಮಂಚಿ ಮುದರ್ರಿಸ್ ಇಬ್ರಾಹೀಂ ಮದನಿ ಅಧ್ಯಕ್ಷತೆ ವಹಿಸಿದ್ದರು.
ದಾರುಲ್ ಅಶ್-ಅರಿಯ ಅಧ್ಯಕ್ಷ ಮಹ್‌ಮೂದ್ ಫೈಝಿ ವಾಲೆಮುಂಡೋವು ದುವಾಗೈದರು. ಬಳಿಕ ಸ್ಥಳೀಯ ಮುದರ್ರಿಸ್ ಆದಂ ಅಹ್ಸನಿ ನೇತೃತ್ವದಲ್ಲಿ ಮಕ್ಬರ ಝಿಯಾರತ್ ನೆರವೇರಿತು. ಮುಖ್ಯ ಅತಿಥಿಗಳಾಗಿ ಸುರಿಬೈಲು ಜುಮಾ ಮಸೀದಿಯ ಪ್ರಧಾನ ಕಾರ್ಯ ದರ್ಶಿ ಅಬ್ಬಾಸ್ ಅಲಿ, ಖಾಸಿಂ ಸಖಾಫಿ ಕಟ್ಟತ್ತಿಲ, ಅಬ್ದುಲ್ ಖಾದರ್ ಫೈಝಿ, ಅಬ್ದುರ್ರಹ್ಮಾನ್ ಸಖಾಫಿ ಕಲ್ಪನೆ, ಸುಲೈಮಾನ್ ಮುಸ್ಲಿಯಾರ್ ನಾರ್ಶ, ಮಹಮೂದ್ ಸಅದಿ ಬಾರೆಬೆಟ್ಟು, ಅಬ್ದುಲ್ ಹಮೀದ್ ಸಖಾಫಿ ಮಂಚಿ, ಅಬ್ದುರ್ರಹ್ಮಾನ್ ಶರಫಿ ಸೆರ್ಕಳ, ಅಬೂಬಕರ್ ಸಿದ್ದೀಕ್ ಸಖಾಫಿ ನಾಟೆಕಲ್ಲು, ಡಿ. ಎನ್. ಅಬ್ದುಲ್ ಹಮೀದ್ ಮದನಿ, ಸಿ.ಎಂ. ಅಬೂಬಕರ್ ಲತೀಫಿ ಎಣ್ಮೂರು, ಎಸ್. ಎಚ್.ಅಬ್ದುಲ್ ಖಾದರ್ ಮುಸ್ಲಿಯಾರ್, ಸುಲೈಮಾನ್ ಹಾಜಿ ಸಿಂಗಾರಿ ನಾರ್ಶ, ಮುಹಮ್ಮದ್ ಹಾಜಿ ಮೋಂತಿಮಾರು, ಮುಹಮ್ಮದ್ ಹಾಜಿ ನಾಡಾಜೆ, ಮುತ್ತಲಿಬ್ ಹಾಜಿ, ಬದ್ರುದ್ದೀನ್ ಮಂಚಿ, ಎಸ್.ಎಂ. ಅಬೂಬಕರ್ ಮತ್ತಿತರರು ಭಾಗವಹಿಸಿದ್ದರು. ದಾರುಲ್ ಅಶ್-ಅರಿಯ ಮೆನೇಜರ್ ಮುಹಮ್ಮದಲಿ ಸಖಾಫಿ ಸ್ವಾಗತಿಸಿದರು. ಕೆ.ಪಿ. ಬೈಲು ಎಸ್ಸೆಸೆಫ್ ಅಧ್ಯಕ್ಷ ಎಸ್.ಎ.ಅಬೂಬಕರ್ ಸಿದ್ದೀಕ್ ಸಅದಿ ವಂದಿಸಿದರು. ಕಾರ್ಯದರ್ಶಿ ಕರೀಂ ಕದ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ