ಶುಕ್ರವಾರ, ಡಿಸೆಂಬರ್ 17, 2010

ವಿದ್ಯುತ್ ಕಂಬಕ್ಕೆ ಸಮಾಜೋತ್ಸವದ ಕಟೌಟ್


ಮೂಡಬಿದ್ರೆ, ಡಿ.17: ಹಿಂದೂ ಸಮಾಜೋತ್ಸವದ ಅಂಗವಾಗಿ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ಕಟೌಟ್‌ಗಳನ್ನು ತೆರವುಗೊಳಿಸಿದ್ದ ಮೆಸ್ಕಾಂ ಸಿಬ್ಬಂದಿಯಿಂದಲೇ ಮತ್ತೆ ಹಾಕಿಸಿದ ಘಟನೆ ಶುಕ್ರವಾರ ಮೂಡಬಿದ್ರೆಯಲ್ಲಿ ನಡೆದಿದೆ. ಡಿ.18ರಂದು ಆಲಂಗಾರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವ ಪ್ರಚಾರದ ಕಟೌಟ್‌ನ್ನು ಇಲ್ಲಿನ ಸಮಾಜ ಮಂದಿರದ ಬಳಿ ಸಂಘಟಕರು ವಿದ್ಯುತ್ ಕಂಬಕ್ಕೆ ಕಟ್ಟಿದ್ದರು. ಅದನ್ನು ಮೆಸ್ಕಾಂ ಸಿಬ್ಬಂದಿ ಮುಖ್ಯಾಧಿಕಾರಿಯ ಆದೇಶದ ಮೇರೆಗೆ ತೆರವುಗೊಳಿಸಿದ್ದರು.

ಪುರಸಭೆಯಿಂದ ಅನುಮತಿ ಪಡೆದು ಕಟೌಟ್‌ಗಳನ್ನು ಹಾಕಿದ್ದರಿಂದ ತೆರವುಗೊಳಿಸಿದವರೇ ಅದನ್ನು ಮತ್ತೆ ಕಟ್ಟುವಂತೆ ಸಮಾಜೋತ್ಸವದ ಸಂಘಟಕರು ಒತ್ತಾಯಿಸಿದ್ದು ಇದಕ್ಕೆ ಮಣಿದ ಮೆಸ್ಕಾಂ ಸಿಬ್ಬಂದಿ ಮತ್ತೆ ವಿದ್ಯುತ್ ಕಂಬಕ್ಕೇ ಕಟೌಟ್ ಹಾಕಿದರು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಯವರಲ್ಲಿ ವಿಚಾರಿಸಿ ದಾಗ ತಾವು ಕಟೌಟ್ ಹಾಕಲು ಅನುಮತಿ ನೀಡಿದ್ದೇವೆ. ಆದರೆ ಅದನ್ನು ವಿದ್ಯುತ್ ಕಂಬಕ್ಕೆ ಕಟ್ಟಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ