ಮಂಗಳೂರು, ಡಿ.8: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧೀನದಲ್ಲಿ ಕಾರ್ಯಾ ಚರಿಸುತ್ತಿರುವ ದಕ್ಷಿಣ ಭಾರತದ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್ಸೆಸ್ಸೆಫ್‌ನ ಉಚ್ಚಿಲ ಶಾಖೆಯ ವತಿ ಯಿಂದ ಸಮಸ್ತ ಮಹಾ ಸಮ್ಮೇಳನ ಹಾಗೂ ಅಧ್ಯಯನ ಶಿಬಿರ ಹಾಗೂ ಖಾಝಿ ಸನ್ಮಾನ ಸಮಾರಂಭ ಡಿ.12 ರಂದು ನಡೆಯಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡುತ್ತಿದ್ದ ಅವರು, ಉಚ್ಚಿಲದ ರಿಯಲನ್ಸ್ ಪೆಟ್ರೋಲ್ ಬಂಕ್ ಎದುರು ಗಡೆಯ ಇಸ್ಮಾಯೀಲ್ ಹಾಜಿ ವೇದಿಕೆಯಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್‌ಗೆ ಸನ್ಮಾನ ಕಾರ್ಯಕ್ರಮ ಹಾಗೂ ಮದ್ರಸ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಅಧ್ಯಕ್ಷತೆ ಯಲ್ಲಿ ಸಯ್ಯದ್ ಕುಂಬೋಳ್ ಅಲಿ ತಂಙಳ್ ಸಮಾರಂಭ ವನ್ನು ಉದ್ಘಾಟಿಸುವರು.

ಸಮಾರಂಭದಲ್ಲಿ ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್, ಸಯ್ಯದ್ ಅಮೀರ್, ಸಯ್ಯದ್ ಬಾಷಿತ್ ಅಲಿ ತಂಙಳ್, ಸಯ್ಯದ್ ಯು.ಕೆ. ಅಬೂಬಕರ್ ತಂಙಳ್ ಉದ್ಯಾವರ ದುವಾ ಆಶೀರ್ವಚನ ನೀಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ, ಕುಂಬಳೆ ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡಮಿಯ ಪ್ರಾಂಶು ಪಾಲ ಎಂ.ಎ. ಕಾಸೀಮ್ ಉಸ್ತಾದ್, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ನೇತಾರರಾದ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ, ಅಬ್ದುಸ್ಸಮದ್ ಪೂಕೋಟೂರು, ಹಸನ್ ಸಖಾಫಿ ಪೂಕೋಟೂರು, ಅಬ್ದುನ್ನಾಸಿರ್ ಫೈಝಿ ಕೂಡತ್ತಾಯಿ, ‘ಸುನ್ನಿ ಸಂದೇಶ’ ಪತ್ರಿಕೆಯ ಸಂಪಾದಕ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಮಂಗಳೂರು ಕೇಂದ್ರ ಮಸೀದಿಯ ಖತೀಬ್ ಅಬ್ದುಲ್ ವಾಹಿದ್ ಫೈಝಿ ಮೊದಲಾದವರು ‘80 ವರ್ಷ ದಾಟಿದ ಸಮಸ್ತ’ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ಕೆ.ಎಲ್. ಉಮರ್ ದಾರಿಮಿ, ಸಮಸ್ತ ಶಿಕ್ಷಣ ಮಂಡಳಿಯ ಮುಫತ್ತಿಷ್ ಅಬ್ದುಲ್ ಹಮೀದ್ ದಾರಿಮಿ, ಪಾತೂರು ಉಸ್ತಾದ್, ಇಸ್ಮಾಯೀಲ್ ಫೈಝಿ, ಅಬ್ದುರ್ರಝಾಕ್ ಮದನಿ ಮುದರ್ರಿಸ್ ಉಚ್ಚಿಲ, ಶಾಸಕರಾದ ಯು.ಟಿ.ಖಾದರ್, ಹನೀಫ್ ಹಾಜಿ, ಮದ್ರಸ ಮ್ಯಾನೇಜ್‌ಮೆಂಟ್‌ನ ಐ. ಮೊಯ್ದಿನಬ್ಬ ಹಾಜಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಹಾಗೂ ಸಮಸ್ತ ಉಲಮಾ ಉಮರಾ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಕೆ.ಎಲ್. ಉಮರ್ ದಾರಿಮಿ, ಉಚ್ಚಿಲ ಶಾಖೆಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಅಬ್ಬಾಸ್ ಮಜಲ್, ಮುಸ್ತಫ ಪೈಝಿ ಕಿನ್ಯ, ಯು. ಅಬ್ದುಸ್ಸಲಾಂ, ಅಬ್ದುಲ್ ಅಝೀಝ್ ಕೊಳಂಗೆರೆ, ಕೆ.ಸಿ. ಅಬ್ದುಲ್ ಹಮೀದ್ ಕೆ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ