ಮಂಗಳವಾರ, ಡಿಸೆಂಬರ್ 21, 2010

ಮಂಗಳೂರು: ಜಿ.ಪಂ.ನ 60 ನಾಮಪತ್ರಗಳ ಪೈಕಿ 58 ಕ್ರಮಬದ್ಧ

ಮಂಗಳೂರು, ಡಿ.21: ದಕ್ಷಿಣ ಕನ್ನಡ ಜಿಲ್ಲೆಯ 35 ಜಿ.ಪಂ. ಸ್ಥಾನಗಳ ಪೈಕಿ ಮಂಗಳೂರು ತಾಲೂಕಿನ 10 ಕ್ಷೇತ್ರಗಳಿಗೆ ಸಲ್ಲಿಸಲ್ಪಟ್ಟಿರುವ 60 ನಾಮಪತ್ರಗಳ ಪೈಕಿ 58 ಕ್ರಮಬದ್ಧವಾಗಿದೆ. ಒಬ್ಬ ಅಭ್ಯರ್ಥಿಗೆ ನಾಲ್ಕು ಸೆಟ್‌ನಲ್ಲಿ ನಾಮಪತ್ರ ಸಲ್ಲಿಸುವ ಅವಕಾಶವಿದ್ದು, ಆ ಪೈಕಿ ಹೆಚ್ಚುವರಿ ಯಾಗಿದ್ದ ಎರಡು ನಾಮಪತ್ರಗಳನ್ನು ಕೈ ಬಿಡಲಾ ಗಿದೆ ಎಂದು ತಾಲೂಕು ಚುನಾವಣಾ ವಿಭಾಗದ ಕಚೇರಿ ಮೂಲಗಳು ತಿಳಿಸಿವೆ.
ಮಂಗಳೂರು ತಾಲೂಕಿನ 37 ಕ್ಷೇತ್ರಗಳಿಗೆ ಸಲ್ಲಿಕೆಯಾದ 173 ನಾಮಪತ್ರಗಳ ಪೈಕಿ 168 ಕ್ರಮಬದ್ಧವಾಗಿದೆ. ಹೆಚ್ಚುವರಿ 5 ನಾಮಪತ್ರಗಳನ್ನು ಕೈ ಬಿಡಲಾಗಿದೆ. ಡಿ.23ರ ಗುರುವಾರ ನಾಮಪತ್ರ ವಾಪಸು ಪಡೆಯಲು ಅಂತಿಮ ದಿನವಾಗಿದ್ದು, ಬಳಿಕ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ.

ದ.ಕ.: 35 ಜಿ.ಪಂ., 129 ತಾ.ಪಂ. ಸ್ಥಾನಕ್ಕೆ 790 ನಾಮಪತ್ರ ಸಲ್ಲಿಕೆ

 

ದಕ್ಷಿಣ ಕನ್ನಡ ಜಿಲ್ಲೆಯ 35 ಜಿಲ್ಲಾ ಪಂಚಾಯತ್ ಮತ್ತು 5 ತಾಲೂಕಿನ 129 ತಾ.ಪಂ. ಸ್ಥಾನಕ್ಕೆ ಒಟ್ಟು 790 ನಾಮಪತ್ರ ಸಲ್ಲಿಕೆಯಾಗಿದೆ.
ಜಿ.ಪಂ.ನ 35 ಸ್ಥಾನಗಳಿಗೆ 215 ನಾಮಪತ್ರ ಸಲ್ಲಿಕೆಯಾಗಿದ್ದು, ಅದರಲ್ಲಿ ಮಂಗಳೂರು ತಾಲೂಕಿನ 10 ಸ್ಥಾನಗಳಿಗೆ ಬಿಜೆಪಿ 18, ಜೆಡಿಎಸ್ 14,ಕಾಂಗ್ರೆಸ್ 13, ಎಸ್‌ಡಿಪಿಐ 4, ಸಿಪಿಎಂ 1 ಮತ್ತು 9 ಮಂದಿ ಪಕ್ಷೇತರರ ಸಹಿತ 60 ಮತ್ತು ಬಂಟ್ವಾಳ ತಾಲೂಕಿನ 9 ಜಿ.ಪಂ. ಸ್ಥಾನಗಳಿಗೆ ಬಿಜೆಪಿ 22, ಕಾಂಗ್ರೆಸ್ 16, ಜೆಡಿಎಸ್ 7, ಎಸ್‌ಡಿಪಿಐ 5 ಮತ್ತು ಪಕ್ಷೇತರ 7 ಸಹಿತ 59 ಹಾಗೂ ಪುತ್ತೂರು ತಾಲೂಕಿನ 6 ಜಿ.ಪಂ. ಸ್ಥಾನಗಳಿಗೆ ಬಿಜೆಪಿ 11, ಕಾಂಗ್ರೆಸ್ 10, ಎಸ್‌ಡಿಪಿಐ ಮತ್ತು ಜೆಡಿಎಸ್ ತಲಾ 4, ಸಿಪಿಎಂ ಮತ್ತು ಬಿಎಸ್‌ಪಿ ತಲಾ 1 ಮತ್ತು 10ಮಂದಿ ಪಕ್ಷೇತರರ ಸಹಿತ 41ನಾಮಪತ್ರ ಸಲ್ಲಿಕೆಯಾಗಿತ್ತು.
ಬೆಳ್ತಂಗಡಿ ತಾಲೂಕಿನ 6 ಜಿ.ಪಂ. ಸ್ಥಾನಗಳಿಗೆ ಕಾಂಗ್ರೆಸ್ 10, ಬಿಜೆಪಿ 9, ಜೆಡಿಎಸ್ 5, ಸಿಪಿಎಂ 1 ಮತ್ತು ಒಬ್ಬ ಪಕ್ಷೇತರರ ಸಹಿತ 30 ಮತ್ತು ಸುಳ್ಯ ತಾಲೂಕಿನ 4 ಜಿ.ಪಂ. ಸ್ಥಾನಗಳಿಗೆ ಕಾಂಗ್ರೆಸ್ 5, ಬಿಜೆಪಿ ಮತ್ತು ಜೆಡಿಎಸ್ ಹಾಗೂ ಎಸ್‌ಡಿಪಿಐ ತಲಾ 4 ಮತ್ತು 9 ಪಕ್ಷೇತರರ ಸಹಿತ 26 ನಾಮಪತ್ರ ಸಲ್ಲಿಕೆಯಾಗಿತ್ತು.
ಜಿಲ್ಲೆಯ 5 ತಾಲೂಕುಗಳ 129 ಸ್ಥಾನಗಳಿಗೆ 575 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಮಂಗಳೂರು ತಾಲೂಕಿನ 37 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ 58, ಕಾಂಗ್ರೆಸ್ ಪಕ್ಷದ 42, ಜೆಡಿಎಸ್ ಪಕ್ಷದ 32, ಎಸ್‌ಡಿಪಿಐ ಪಕ್ಷದ 14, ಸಿಪಿಎಂ ಪಕ್ಷದ 7, ಸಿಪಿಐ ಪಕ್ಷದ 1 ಮತ್ತು 19 ಪಕ್ಷೇತರರ ಸಹಿತ 173 ನಾಮಪತ್ರಗಳು ಸೇರಿದೆ.

ಪರಿಶೀಲನೆಯಲ್ಲೇ ಸುಸ್ತಾದ ಸಿಬ್ಬಂದಿ

 

ಚುನಾವಣೆ ಬಂತೆಂದರೆ, ಸಿಬ್ಬಂದಿಗೆ ಬಿಡು ವಿಲ್ಲದ ಕೆಲಸ. ಸಂಜೆ ಐದಾರು ಗಂಟೆಗೆ ಮನೆ ಯತ್ತ ಮುಖಹಾಕುವ ಸಿಬ್ಬಂದಿ ಚುನಾ ವಣೆಯ ಹೆಚ್ಚುವರಿ ಜಬಾವ್ದಾರಿ ವಹಿಸಿ ಕೊಂಡ ಬಳಿಕ ರಾತ್ರಿ 10 ಗಂಟೆಯವರೆಗೂ ಕಚೇರಿ ಯಲ್ಲಿರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಬಹುತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ ಕಾರಣ ಒತ್ತಡ ಸಾಮಾನ್ಯ. ಆದರೆ, ಮಂಗಳವಾರ ರಾತ್ರಿಯ ವರೆಗೂ ಸಿಬ್ಬಂದಿ ನಾಮಪತ್ರಗಳ ಪರಿಶೀಲನೆಯಲ್ಲೇ ತಲ್ಲೀನರಾಗಿ ಭಾಗಶಃ ಸುಸ್ತಾಗಿದ್ದರು. ತಾಲೂಕುವಾರು ಪರಿಶೀಲನೆ ನಡೆದಿದ್ದರೂ, ಅದು ಮಂಗಳವಾರ ರಾತ್ರಿ 8:30ರವರೆಗೂ ಜಿಲ್ಲಾ ಕೇಂದ್ರಕ್ಕೆ ತಲುಪಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ