ಮಂಗಳೂರು, ನ.30: ಇನ್ಸಿಟಿಟ್ಯೂಟ್ ಆಫ್ ಬುಡೋಕಾನ್ ಕರಾಟೆ ಕುಂದಾಪುರ ವತಿಯಿಂದ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಲರ್ ಬೆಲ್ಟ್‌ನ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ನವಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಆರ್.ವಿ.ಮಾರ್ಟಿಯಲ್ ಆರ್ಟ್ಸ್ ಸ್ಕೂಲ್‌ನ ಸದಸ್ಯ , ಸೆನ್ಸಾಯಿ ವಸಂತ ಕೆ.ಬಂಗೇರ ಹಾಗೂ ಅಬ್ದುಲ್ ರಹ ಮಾನ್‌ರ ಶಿಷ್ಯ ಉಜಿರೆ ಕುಂಟಿನಿಯ ಆಸಿಯಾ ಮತ್ತು ಅಬ್ದುಲ್ ಖಾದರ್ ದಂಪತಿ ಪುತ್ರರಾಗಿದ್ದಾರೆ.
ಪ್ರಥಮ ಸ್ಥಾನ: ಇನ್ಸಿಟಿಟ್ಯೂಟ್ ಆಫ್ ಬುಡೋಕಾನ್ ಕರಾಟೆ ಕುಂದಾಪುರ ಇದರ ವತಿಯಿಂದ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಬುರ್ರಹ್ಮಾನ್ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ಬೆಳ್ತಂಗಡಿ ಆರ್.ವಿ.ಟೈಗರ್ ಮಾರ್ಟಿ ಯಲ್ ಆರ್ಟ್ಸ್ ಸ್ಕೂಲ್ ಸದಸ್ಯ ಹಾಗೂ ಸೆನ್ಸಾಯಿ ವಸಂತ್ ಕೆ.ಬಂಗೇರರ ಶಿಷ್ಯರಾಗಿದ್ದು,ಉಜಿರೆ ಕುಂಟಿನಿಯ ವಿ.ಎಚ್.ಅಬೂಬಕರ್ ಮತ್ತು ಸಾರಮ್ಮ ದಂಪತಿಯ ಪುತ್ರರಾಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ