ವಿದ್ಯಾರ್ಥಿಗಳಿಗೀಗ ಪರೀಕ್ಷಾ ಸಮಯ. ಎಲ್ಲೆಡೆ ಅವರನ್ನು ಪರೀಕ್ಷಾ ಭೀತಿ, ಆತಂಕ ಕಾಡಿಸಿದರೆ ತಂದೆ, ತಾಯಿ, ಪೋಷಕರಿಗೆ ಮಕ್ಕಳು ಹೇಗೆ ಪರೀಕ್ಷಾ ಸಿದ್ಧತೆ ನಡೆಸಿದ್ದಾರೆ? ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಪಡೆಯುವರು? ಮುಂದೆ ಅವರ ಭವಿಷ್ಯ ಏನು? ಹೇಗೆ? ಎಂಬ ಕಾತರ, ತಳಮಳ. ಇನ್ನೊಂದೆಡೆಯಲ್ಲಿ ಮಕ್ಕಳಿಗೆ ಮಾರ್ಗ ದರ್ಶನ, ತರಬೇತಿ ನೀಡಿದ ಶಿಕ್ಷಕ ವೃಂದ, ತಾವು ನೀಡಿದ ತರಬೇತಿಯಿಂದ ಎಷ್ಟು ಲಾಭ, ಪ್ರಯೋಜನ ಪಡೆದುಕೊಳ್ಳುತ್ತಾರೆಂಬ, ಕುತೂಹಲ ಎಲ್ಲೆಡೆಯಲ್ಲಿಯೂ ಕಂಡು ಬರು ವಂತಹದು ಸಹಜ ದೃಶ್ಯವಾಗಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ‘ಸುಲಿದ ಬಾಳೆಹಣ್ಣಿನ ತರ’ ಎಂದಾಗಬೇಕಾದರೆ, ಆಯಾ ತರಗತಿಗಳಿಗೆ ಸಂಬಂಧಪಟ್ಟ ಪಾಠ, ಪಠ್ಯಗಳಿಗನುಗುಣವಾಗಿ, ಎಲ್ಲ ವಿಷಯಗಳ ಜ್ಞಾನ ಸಂಗ್ರಹಣೆಗಳನ್ನು ವಿದ್ಯಾರ್ಥಿಗಳು ಸರಿ ಯಾದ ರೀತಿಯಲ್ಲಿ ಮೊದಲು ಮಾಡಿಕೊಂಡಿರ ಬೇಕು.
ವಿದ್ಯಾರ್ಥಿಗಳಿಗೆ ಹಿತ ನುಡಿ:ಪರೀಕ್ಷೆ ಸಮೀಪಿಸುತ್ತಲೇ, ಕೆಲವು ವಿದ್ಯಾರ್ಥಿ ಗಳು ಸರಿಯಾಗಿ ಊಟ ಮಾಡದಿರುವುದು, ನಿದ್ರೆ ಮಾಡದಿರುವುದು, ಗಾಬರಿ ಮಾಡಿಕೊಳ್ಳುವುದು, ಭಯಭೀತರಾಗುವುದು ಮುಂತಾದವು ಕಂಡುಬರುತ್ತದೆ. ಮಕ್ಕಳೇ ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎಂಬಂತೆ ಒಂದೇ ರಾತ್ರಿಯಲ್ಲಿ ಎಲ್ಲಾ ಪಾಠಗಳನ್ನು ಓದಿ ಮುಗಿಸುವ ದುಸ್ಸಾಹಸಕ್ಕೆ ಎಂದೂ ಹೋಗ ಬೇಡಿರಿ. ಆರೋಗ್ಯ ಕೆಡುತ್ತದೆ. ನೀವು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿರಿ. ಸಮಯ ಸಿಕ್ಕಾಗಲೆಲ್ಲ ಅದನ್ನು ಹಾಳು ಮಾಡದೆ, ಓದಿನಲ್ಲಿ ಸರಿಯಾಗಿ ತೊಡಗಿಸಿಕೊಳ್ಳಿರಿ.
ಹಿತಮಿತವಾದ ಆಹಾರವನ್ನು ಸೇವಿಸಿರಿ. ಸ್ವಲ್ಪ ವ್ಯಾಯಾಮದ ಮೂಲಕ ವಿರಾಮವನ್ನು ಪಡೆಯಿರಿ. ಇದು ನಿಮ್ಮ ಓದಿಗೆ ಸಹಕಾರಿ. ಸುಮ್ಮನೆ ಸಮಯವನ್ನು ಹಾಳು ಮಾಡಬೇಡಿರಿ. ಪರೀಕ್ಷೆಗೆ ಮುಂಚಿತವಾಗಿ ನಿಮ್ಮದೇ ಆದ ಓದಿನ ವೇಳಾಪಟ್ಟಿಯನ್ನು ತಯಾರಿಸಿಕೊಂಡು, ಅದಕ್ಕ ನುಗುಣವಾಗಿ, ಒಳ್ಳೆಯ ರೀತಿಯಿಂದ ಅಭ್ಯಾಸ ಮಾಡಿರಿ. ಬಹಳಷ್ಟು ನಿದ್ದೆಗೆಟ್ಟು ಓದುವುದು ಪ್ರಯೋಜನವಿಲ್ಲ. ನಿದ್ದೆಗೆಟ್ಟು ಓದಿದರೆ, ಅದು ತಲೆಗೆ ಹತ್ತದಿರುವುದೇ ಜಾಸ್ತಿ. ಸರಿಯಾದ ವಿಶ್ರಾಂತಿಯೂ ಬೇಕಲ್ಲವೇ? ಆದಷ್ಟು ಮನ ಸ್ಸನ್ನು ಶುಚಿಯಾಗಿಟ್ಟುಕೊಳ್ಳಿರಿ. ದಿನನಿತ್ಯ ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿಕೊಳ್ಳಿರಿ.
ನಾಳೆ ಪರೀಕ್ಷೆ ಇದ್ದರೆ, ಇಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿರಿ. ಬರೆಯಲು ಬೇಕಾದ ಪೆನ್ನು, ರಬ್ಬರ್, ಪೆನ್ಸಿಲ್ ಹಾಗೂ ಇನ್ನಿತರ ಸಲ ಕರಣೆಗಳನ್ನು ಹಾಗೂ ಪರೀಕ್ಷಾ ಪ್ರವೇಶಪತ್ರ ವನ್ನು ಒಂದು ಚೀಲದಲ್ಲಿ ಹಾಕಿಕೊಳ್ಳಿರಿ. ಪರೀಕ್ಷೆಯ ಸಮಯದಲ್ಲಿ ಬಿಸಿಲಿನ ತಾಪ, ಬಾಯಾರಿಕೆ ಹೆಚ್ಚಾಗುವುದು ಜಾಸ್ತಿ. ಅದಕ್ಕಾಗಿ ಒಂದೆರಡು ಬಾಟಲಿ ನೀರನ್ನು ಸಹ ತುಂಬಿಟ್ಟು ಕೊಂಡು ಹೋಗಿರಿ. ಜಾಗ್ರತೆ ವಹಿಸಿರಿ.
ಪರೀಕ್ಷಾ ದಿನ:ಪರೀಕ್ಷಾ ದಿನದಂದು, ಪರೀಕ್ಷೆಗೆ ಹೋಗುವ ಮುಂಚಿತವಾಗಿ, ಪರೀಕ್ಷಾ ವೇಳಾ ಪಟ್ಟಿಗನುಗುಣವಾಗಿ, ಆ ದಿನ ನಡೆಯುವ ಪರೀಕ್ಷಾ ವಿಷಯವನ್ನು ಸರಿಯಾಗಿ ನೋಡಿ. ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ಒಳಗೊಂಡಿರುವ ಪ್ರವೇಶ ಪತ್ರವನ್ನು ಮರೆ ಯದೇ ಪ್ರತಿದಿನ ನಿಮ್ಮೆಡನೆ ಜಾಗ್ರತೆಯಾಗಿ ಇಟ್ಟುಕೊಳ್ಳಿರಿ.
ಸುಮಾರು ಅರ್ಧದಿಂದ ಮುಕ್ಕಾಲು ಗಂಟೆ ಮುಂಚಿತವಾಗಿಯೇ, ಪರೀಕ್ಷಾ ಕೇಂದ್ರವನ್ನು ತಲುಪಿರಿ. ನಿಮ್ಮ ಪರೀಕ್ಷಾ ಕೊಠಡಿಯನ್ನು ಗುರುತಿಸಿಕೊಳ್ಳಿರಿ. ಇನ್ನು ಸಮಯ ಇದ್ದರೆ, ಬದಿಯಲ್ಲಿ ಕುಳಿತು ಓದಿದ ಪರೀಕ್ಷಾ ವಿಷಯ ವನ್ನು ಸ್ವಲ್ಪ ಮನನ ಮಾಡಿಕೊಳ್ಳಿರಿ. ಪರೀಕ್ಷೆ ಪ್ರಾರಂಭವಾಗಿ ಪ್ರಶ್ನೆ ಪತ್ರಿಕೆ ಕೈ ಸೇರಿದ ಕೂಡಲೆ, ಒಮ್ಮೆಲೆ ಉತ್ತರ ಬರೆಯಲು ಪ್ರಾರಂಭಿಸಬೇಡಿರಿ.

ಇಡೀ ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಿಕೊಂಡು, ನಿಮಗೆ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಮನಸಿನಲ್ಲಿ ನಿರ್ಧರಿಸಿ ಕೊಂಡು, ಆ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಬರೆದ ಮೇಲೆ ಅಲ್ಪ ಸ್ವಲ್ಪ ಉತ್ತರ ಬರುವ, ಪ್ರಶ್ನೆಗಳಿದ್ದರೆ ಆ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಿರಿ. ಅಂದರೆ, ಅಲ್ಲಿಯವರೆಗೆ ಉತ್ತರ ಬರೆಯಲು ಮಾನಸಿಕವಾಗಿ ಸಮರ್ಥರಾಗುವಿರಿ. ಯಾವೊಂದೂ ಪ್ರಶ್ನೆಯನ್ನು ಬಿಡದೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿರಿ. ಕೊನೆಯಲ್ಲಿ ಸಮಯ ಸಾಕಾಗಲಿಲ್ಲ ಎನ್ನುವುದಕ್ಕಿಂತ ಮೊದಲೇ ಸರಿಯಾಗಿ ಸಮಯವನ್ನು ಹಂಚಿಕೆ ಮಾಡಿಕೊಂಡು ಉತ್ತರಿಸುವುದು ಒಳಿತು.
ಪಾಲಕರ ಕರ್ತವ್ಯ: ‘ವಿದ್ಯೆ ಕೊಡಿಸದ ತಂದೆ, ಬುದ್ಧಿ ಹೇಳದ ಗುರುವು, ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ’ ಎಂಬಂತೆ ತಂದೆ, ತಾಯಿ, ಪಾಲಕರು, ಗುರುಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ, ವಿದ್ಯಾರ್ಜನೆ ಮಾಡುವ ಸಂದರ್ಭದಲ್ಲಿ, ಪರೀಕ್ಷಾ ಸಮಯದಲ್ಲಿ ಹಿರಿದಾದ ಪಾತ್ರವನ್ನು ವಹಿಸಬೇಕಾಗುತ್ತದೆ. ಮಕ್ಕಳನ್ನು ಸರಿಯಾಗಿ, ಅರ್ಥ ಮಾಡಿಕೊಳ್ಳುವ ತಾಳ್ಮೆ, ಜಾಣ್ಮೆ, ತಂದೆ-ತಾಯಿಯರಿಗೆ, ಪಾಲಕರಿಗೆ ಇರಲೇಬೇಕಾಗುತ್ತದೆ. ಪರೀಕ್ಷೆ ಹತ್ತಿರ ಬಂದಂತೆ ಯಾವುದೇ ರೀತಿಯಲ್ಲಿ ಮಕ್ಕಳಿಗೆ ಮಾನಸಿಕವಾಗಿ, ಬೌದ್ಧಿಕವಾಗಿ, ಹಿಂಸೆಯಾಗದಂತೆ, ಸದಾ ಮನಸ್ಸು ಸಂತೋಷದಿಂದ ಇರುವಂತೆ ಮಾಡುತ್ತಾ ಓದಿನಲ್ಲಿ ಹೆಚ್ಚು ಆಸಕ್ತರಾಗುವಂತೆ ಮಾಡಬೇಕು.

ಮನೆಯಲ್ಲಿನ ಟಿ.ವಿ., ರೇಡಿಯೋ, ಇತ್ಯಾದಿಗಳಿಂದ ಮಕ್ಕಳು ಪರೀಕ್ಷೆ ಮುಗಿಯುವವರೆಗೂ ಆದಷ್ಟು ದೂರ ಇರುವಂತೆ ಪ್ರಯತ್ನಿಸಬೇಕು. ಪಾಲಕರು ಕೂಡ ಟಿ.ವಿ.ಯಿಂದ ದೂರ ವಿರಬೇಕು. ಮಕ್ಕಳು ಓದಿನಲ್ಲಿ ಅನಾಸಕ್ತಿ ತೋರಿದರೆ ಮೂದಲಿಸದೆ, ನಿಂದಿಸದೆ ಸರಿ ದಾರಿಗೆ ತರಬೇಕು. ಪರೀಕ್ಷೆ ಮುಗಿಯುವವರೆಗೂ ತಂದೆ, ತಾಯಿ ಯರು ತಮ್ಮ ಮಕ್ಕಳಿಗಾಗಿ ತ್ಯಾಗ ಮನೋಭಾವದಿಂದ ವರ್ತಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.ಪೂರ್ಣ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹೋಗಲು ಪ್ರೇರಣೆ ನೀಡಬೇಕು.
ಶಿಕ್ಷಕರ ಜವಾಬ್ದಾರಿ: ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಸಾಕಷ್ಟಿದೆ. ಶಿಕ್ಷಕರು ಸದಾ ಅಧ್ಯಯನ, ಅಧ್ಯಾಪನದ ಮೂಲಕ ತಮ್ಮನ್ನು ರೂಪಿಸಿಕೊಳ್ಳಬೇಕು. ತಮ್ಮ ಉತ್ತಮ ಬೋಧನೆಯ ಮೂಲಕ ಮಕ್ಕಳು ಕಲಿಕೆಯಲ್ಲಿ ಮುಂದುವರಿಯುವಂತೆ ಮಾಡಬೇಕು. ಶಾಲೆಗೆ ಬರುವ ಮಕ್ಕಳು ಒಂದೇ ರೀತಿಯಾಗಿ ಇರುವುದಿಲ್ಲ. ಅನೇಕ ಹಿನ್ನೆಲೆಗಳಿಂದ ಬರುವವರಾದ್ದರಿಂದ ಕಲಿಕೆಯಲ್ಲಿ ಕೆಲವರು ಮುಂದಿರುತ್ತಾರೆ. ಇನ್ನು ಕೆಲವರು ಹಿಂದುಳಿಯುತ್ತಾರೆ. ಇನ್ನು ಕೆಲವರು ಅತಿ ಹಿಂದುಳಿಯುವವರೂ ಇದ್ದಾರೆ. ಹಿಂದುಳಿದ ಮಕ್ಕಳನ್ನು ಹಾಗೇನೇ ಬಿಡುವುದಲ್ಲ.
ಶಿಕ್ಷಕರು ಅಂತಹ ಮಕ್ಕಳಿಗೆ ವಿಶೇಷ ಗಮನ ಹರಿಸಬೇಕು. ಸಾಧ್ಯವಾದಷ್ಟು ಹೆಚ್ಚಿನ ಸಹಕಾರ ನೀಡಬೇಕು. ಮಾರ್ಗದರ್ಶನ ನೀಡಬೇಕು. ಅಂತಹ ಮಕ್ಕಳನ್ನು ಯಾವುದೇ ರೀತಿಯಲ್ಲಿ ನಿಂದಿಸದೇ, ಅವರನ್ನು ಪ್ರೋತ್ಸಾಹಿಸಿ, ಕಲಿಕೆಯಲ್ಲಿ ಮುಂದುವರಿಯುವಂತೆ ಮಾಡಿ ಪರೀಕ್ಷೆಯೆಂಬ ಭಯ, ಭೀತಿಯನ್ನು ನಿವಾರಣೆ ಮಾಡಿ, ತಪ್ಪಿದ್ದಲ್ಲಿ ತಿದ್ದಬೇಕು, ಪರೀಕ್ಷೆಯನ್ನು ಸರಿಯಾಗಿ ಎದುರಿಸುವಂತೆ ಯಶಸ್ವಿಯಾಗಿ ನೋಡಿಕೊಳ್ಳಬೇಕು. ಇದರಿಂದಾಗಿ ಮಕ್ಕಳಿಗೆ ಪರೀಕ್ಷೆಯಲ್ಲಿ ಯಶಸ್ಸು ಖಂಡಿತ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ