ಸೋಮವಾರ, ಜನವರಿ 03, 2011

ಉಡುಪಿ: ಭ್ರಷ್ಟಾಚಾರ ನಿರೋಧಕ ಕಾನೂನುಗಳಿಗೆ ತಿದ್ದು ಪಡಿ ಆಗ್ರಹಿಸಿ ರಾಜ್ಯಪಾಲರಲ್ಲಿ ಜಮಾ‌ಅತೆ ಇಸ್ಲಾಮೀ ಹಿಂದ್ ಮನವಿ

image
ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿಪತ್ರ ಹಸ್ತಾಂತರ
ಉಡುಪಿ, ಜನವರಿ ೨: ನಮ್ಮ ದೇಶವು ಪ್ರಜಾತಾಂತ್ರಿಕ ಜಾತ್ಯತೀತ ಸಂಸದೀಯ ವ್ಯವಸ್ಥೆಯನ್ನು ಆಯ್ದುಕೊಂಡಿದೆ. ಆದರೆ ಪ್ರಜಾಪ್ರಭುತ್ವದ ಪ್ರಗತಿ ಮತ್ತು ಬೆಳವಣಿಗೆ ಇದರ ಫಲಗಳನ್ನು ಕೆಲವೇ ಕೆಲವು ಸ್ಥಾಪಿತ ವ್ಯಕ್ತಿಗಳು ಪಡೆಯುತ್ತಿದ್ದಾರೆ. ಆದರೆ ಬಹುಸಂಖ್ಯಾತ ಜನರಿಗೆ ಇದು ಹುಳಿ ದ್ರಾಕ್ಷೆ ಮಾತ್ರವಾಗಿದೆ.
 ವಾಸ್ತವವಾಗಿ ಪ್ರಜಾತಂತ್ರವು ಜನರನ್ನು ಶಕ್ತಿಶಾಲಿಯಾಗಿಸಬೇಕಾಗಿದೆ. ಆದರೆ ಕೆಲವೇ ಕೆಲವು ಶಕ್ತಿಗಳು ಈ ಜನರ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ನಮ್ಮ ದೇಶದ ಸ್ವಾತಂತ್ರ್ಯವು ನಮಗೆ ವಸಾಹತುಶಾಹಿತ್ವದಿಂದ ಮುಕ್ತಿ ನೀಡಿತು. ಆದರೆ ಇಂದು ಈ ವಸಾಹತುಶಾಹಿಗಳು ಜಾಗತೀಕರಣದ ಮುಖವಾಡದೊಂದಿಗೆ ಮರಳುತ್ತಿವೆ. ವಿಷೇಶ ಆರ್ಥಿಕ ವಲಯಗಳು ೧೨೩ಪರಮಾಣು ಒಪ್ಪಂದವು ಇದರ ಕೆಲವು ಉದಾಹರಣೆಗಳು. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೊರೇಟ್ ಸಂಸ್ಕೃತಿಯು ಗ್ರಾಮೀಣ ಅಭಿವೃದ್ಧಿಯನ್ನು ಕಡೆಗಣಿಸಿ ನಗರಾಭಿವೃಧಿಯ ಕೃತಕ ಮುಖವನ್ನು ತೊರಿಸುತ್ತಿದೆ.

ನಮ್ಮ ಆಳುವ ವರ್ಗವು ನೈತಿಕವಾಗಿ ಪತನಗೊಂಡಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ಅವ್ಯವಹಾರಗಳು ನಡೆಸುತ್ತಿದೆ. ಕಾಮನ್‌ವೆಲ್ತ್ ಹಗರಣ, ಟೆಲಿಕಾಮ್ ಹಗರಣಗಳು ರಾಷ್ಟ್ರ ಮಟ್ಟದಲ್ಲಿ ನಡೆದರೆ(KIADB) ಭೂಮಿ ಹಗರಣ ಮುಂತಾದವುಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ. ನಮ್ಮ ರಾಜಕೀಯ ಪಕ್ಷಗಳು ದೇಶ ಮತ್ತು ರಾಜ್ಯದ ಕಲ್ಯಾಣಕ್ಕಾಗಿ ಪ್ರಯತ್ನಿಸುವುದರ ಬದಲು ಪರಸ್ಪರ ಕೆಸರೆರೆಚಾಟಕ್ಕೆ ಮಾತ್ರ ತಮ್ಮನ್ನು ಸೀಮಿತ ಗೊಳಿಸಿದೆ. ಭ್ರಷ್ಟಾಚಾರ ನಿರೋಧಕ ಕಾನೂನುಗಳಿಗೆ ತಿದ್ದು ಪಡಿಯನ್ನು ತಂದು ಅದನ್ನು ಪ್ರಭಾವಶಾಲಿಯಾಗಿಸಬೇಕು. ಒಂದು ಜವಾಬ್ದಾರಿಯುತ ಆಡಳಿತವು ಜನರಿಗೆ ಸಿಗುವಂತಾಗಬೇಕೆಂದು ಜಮಾ‌ಅತೆ ಇಸ್ಲಾಮೀ ಹಿಂದ್ ಬಯಸುತ್ತದೆ.


 


ಜಮಾ‌ಅತೆ ಇಸ್ಲಾಮೀ ಹಿಂದ್ ತನ್ನೆಲ್ಲಾ ಸಂಪನ್ಮೂಲಗಳನ್ನು ಮತ್ತು ಶಕ್ತಿಯನ್ನು ಉಪಯೋಗಿಸಿ ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸಲಿಕ್ಕಾಗಿ ನಿರಂತರ ಪ್ರಯತ್ನಿಸುತ್ತಾ ಬಂದಿದೆ. ಅದು ವ್ಯಕ್ತಿ ಸಮಾಜ ಮತ್ತು ವ್ಯವಸ್ಥೆಯ ಮನಮಸ್ತಿಶ್ಕದಲ್ಲಿ ಬದಲಾವಣೆಯುಂಟಾಗಬೇಕೆಂದು ಬಯಸುತ್ತದೆ. ಈ ರಂಗದಲ್ಲಿ ಬೇರೆ ವೇದಿಕೆಗಳೊಂದಿಗೆ ಸಹಕರಿಸಲು ಅದು ಸದಾ ಸಿದ್ಧವಿದೆ ಎಂದು ಜಮಾ‌ಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾಧಿಕಾರಿಯ ಮೂಲಕ ರಾಜ್ಯಪಾಲರಲ್ಲಿ ಮನವಿ ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ