ಈಜಿಪ್ಟ್‌ನ ಅಧ್ಯಕ್ಷ ಹುಸ್ನಿ ಮುಬಾರಕ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ, ಇಲ್ಲಿನ ಉತ್ತರ ಸಿನಾಯ್‌ನ ಅಲ್ ಆರಿಶ್ ಪ್ರದೇಶದಿಂದ ಇಸ್ರೇಲ್‌ಗೆ ನೈಸರ್ಗಿಕ ಅನಿಲವನ್ನು ಸಾಗಿಸುವ ಮಾರ್ಗವನ್ನು ಅಜ್ಞಾತ ದಾಳಿಕಾರರು ಸ್ಫೋಟಿಸಿದ್ದಾರೆ.
‘‘ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದ್ದು, ಅನಿಲ ಮಾರ್ಗದುದ್ದಕ್ಕೂ ವಿವಿಧೆಡೆಗಳಲ್ಲಿ ಸ್ಫೋಟ ಮುಂದುವರಿದಿದೆ. ಇದೊಂದು ಭಾರೀ ಭಯೋತ್ಪಾದಕ ಕಾರ್ಯಾಚರಣೆಯಾಗಿದೆ’’ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯೊಂದು ವರದಿ ಮಾಡಿದೆ.ಅನಿಲದ ಹರಿವನ್ನು ಸ್ಥಗಿತಗೊಳಿಸುವಲ್ಲಿ ಹಾಗೂ ಸ್ಫೋಟದಿಂದ ಉಂಟಾಗಿರುವ ಬೆಂಕಿಯನ್ನು ನಿಯಂತ್ರಿಸುವಲ್ಲಿ ಈಜಿಪ್ಟ್‌ನ ಸಶಸ್ತ್ರ ಪಡೆಗಳು ಯಶಸ್ಸು ಸಾಧಿಸಿವೆ ಎಂದು ಸುದ್ದಿ ಮೂಲ ತಿಳಿಸಿದೆ.
ಸ್ಫೋಟದ ವೇಳೆ ಬೆಂಕಿಯ ಜ್ವಾಲೆಗಳು ಸುಮಾರು 20 ಮೀಟರ್ ಎತ್ತರದವರೆಗೂ ವ್ಯಾಪಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಘಟನೆಯ ಹೊಣೆಯನ್ನು ಇದುವರೆಗೆ ಯಾವುದೇ ವ್ಯಕ್ತಿ ಅಥವಾ ಗುಂಪು ವಹಿಸಿಕೊಂಡಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಇಸ್ರೇಲ್ ಈಜಿಪ್ಟ್‌ನಿಂದ ಸುಮಾರು 10 ಶತಕೋಟಿ ಡಾಲರ್‌ಗೂ ಅಧಿಕ ವೌಲ್ಯದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಒಪ್ಪಂದವೊಂದಕ್ಕೆ ಸಹಿ ಮಾಡಿತ್ತು.
ಸ್ಫೋಟದ ವೇಳೆ ಬೆಂಕಿಯ ಜ್ವಾಲೆಗಳು ಸುಮಾರು 20 ಮೀಟರ್ ಎತ್ತರದವರೆಗೂ ವ್ಯಾಪಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ