ಭಾನುವಾರ, ಜನವರಿ 02, 2011

ವಾಯು ಸೇನೆಯ ಗೌಪ್ಯ ಕಡತ ನಾಪತ್ತೆ:ತನಿಖೆಗೆ ಆದೇಶ

ಹೊಸದಿಲ್ಲಿ, ಜ.1:ರಕ್ಷಣಾ ಸಚಿವಾಲಯದಿಂದ ನಾಪತೆಯಾಗಿ ರಸ್ತೆ ಬದಿಯಲ್ಲಿ ಪತ್ತೆಯಾದ 11 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರದ 126 ಜಂಟಿ ಅಭ್ಯಾಸ ಯುದ್ಧ್ದ ವಿಮಾನಗಳ ಕಡತಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯು ಸೇನೆ ತನಿಖೆಗೆ ಮುಂದಾಗಿದೆ.
ಯುದ್ಧ ವಿಮಾನಕ್ಕೆ ಸಂಬಂಧಿಸಿದ ಗೌಪ್ಯ ಕಡತ ನಾಪತ್ತೆಯಾಗಿದ್ದು ಮತ್ತು ಅದು ದೆಹಲಿಯಲ್ಲಿನ ಜನನಿಬಿಡ ಸ್ಥಳದಲ್ಲಿ ಪತ್ತೆಯಾಗಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಏರ್ ವೈಸ್ ಮಾರ್ಷಲ್ ಎಂ.ಮಾದೇಶ್ವರನ್ ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯದಿಂದ ನಾಪತ್ತೆ ಯಾದ ಈ ಗೌಪ್ಯ ಕಡತದ ಬಗ್ಗೆ ತನಿಖೆ ನಡೆಸಲು ವಾಯು ಸೇನೆ ತನಿಖಾ ಆಯೋ ಗಕ್ಕೆ ಆದೇಶಿಸಿದ್ದು,ರಕ್ಷಣಾ ಸಚಿವಾಲಯ ಕೂಡ ಕಡತ ನಾಪತ್ತೆಯಾದ ಬಗ್ಗೆ ಪ್ರತ್ಯೇಕವಾದ ತನಿಖೆಗೆ ಆದೇಶ ನೀಡಲಿದೆ ಎಂದು ಅವರು ತಿಳಿಸಿದರು.
ಆರು ಯುದ್ಧ ವಿಮಾನಗಳನ್ನು ಖರೀದಿಸಲು ಭಾರತೀಯ ವಾಯು ಪಡೆ ಮುಂದಾಗಿ ಅದರ ವೌಲ್ಯಗಳನ್ನು ಪರಿಶೀಲಿಸುತ್ತಿದ್ದಾಗ ಬಹು ಕೋಟಿ ರೂಪಾ ಯಿಗಳ ಈ ವ್ಯವಹಾರ ಬೆಳಕಿಗೆ ಬಂದಿತ್ತು.
ವಿವಿಧ ದೇಶಗಳ ದರ ಪಟ್ಟಿಯನ್ನು ವಾಯು ಸೇನೆ ರಕ್ಷಣಾ ಸಚಿವಾಲಯಕ್ಕೆ ನೀಡಿದ್ದು ಅದು ವ್ಯವಹಾರದ ಅಂತಿಮ ತೀರ್ಮಾನ ತೆಗೆದುಕೊಳ್ಳುವುದರೊಳಗೆ ಈ ಗೌಪ್ಯ ಕಡತ ನಾಪತ್ತೆಯಾಗಿತ್ತು ಎಂದು ಅವರು ತಿಳಿಸಿದರು.
ವಾಯು ಸೇನೆಗೆ ಸೇರಿದ ಗೌಪ್ಯ ಕಡತ ರಕ್ಷಣಾ ಸಚಿವಾಲಯದಿಂದ ಹೇಗೆ ನಾಪತ್ತೆಯಾಯಿತು ಎಂಬುದನ್ನು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಯೊಬ್ಬರಿಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಭಾರತೀಯ ರಕ್ಷಣಾ ನಿಯಮದ ಪ್ರಕಾರ ಸೇನಾ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ವಿದೇಶಿ ಸಂಸ್ಥೆಗಳು ಒಪ್ಪಂದದ ಶೇ. 30ನ್ನು ಭಾರತೀಯ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಯಗಳಿಗೆ ವಿನಿಯೋಗಿಸಬೇಕಿದ್ದು, ಈ ಮೇಲಿನ ವ್ಯವಹಾರ ರೂ.300ಕೋಟಿ ವೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಆದರೆ ಈ ವ್ಯವಹಾರದಲ್ಲಿ ಕೆಲ ವಿದೇಶಿ ಸಂಸ್ಥೆಗಳು ಶೇ. 50 ಒಪ್ಪಂದದ ಹಣವನ್ನು ವಿನಿಯೋಗಿಸಲು ಮುಂದಾಗಿದ್ದವು ಎಂದು ಹೇಳಲಾಗಿದೆ.ಅಮೆರಿಕದ ಎಫ್-16 ಮತ್ತು ಎಫ್/ಎ-18,ಫ್ರಾನ್ಸ್‌ನ ರಾಫಲ್,ಸ್ವೀಡಿಶ್‌ನ ಗ್ರಿಪೆನ್,ರಷ್ಯಾದ ಎಂಐಜಿ 35 ಮತ್ತು ಯುರೋಪ್‌ನ ಯೂರೋ ಫೈಟರ್ ಭಾರತೀಯ ವಾಯು ಸೇನೆಗೆ ಯುದ್ದ ವಿಮಾನಗಳನ್ನು ಸರಬರಾಜು ಮಾಡಲು ಮುಂದಾಗಿದ್ದ ಆರು ಪ್ರಮುಖ ದೇಶಗಳ ಸಂಸ್ಥೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ