ದೇಶ ವಿಭಜನೆಯಿಂದ ಬಾಬರಿ ಮಸೀದಿ ವಿವಾದ ಸೃಷ್ಟಿ: ‘ಧಾರ್ಮಿಕ ಸೊತ್ತುಗಳನ್ನು ಉಳಿಸುವ ಬಗ್ಗೆ’ ಸಮಾಲೋಚನಾ ಸಭೆಯಲ್ಲಿ ಮಂಗಳೂರು ಖಾಝಿ
ಮಂಗಳೂರು,ಜ.20: ದೇಶ ವಿಭಜ ನೆಯು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಅದರಲ್ಲಿ ಬಾಬರಿ ಮಸೀದಿ ವಿವಾ ದವೂ ಒಂದು. ಅಂದು ದೇಶ ವಿಭಜನೆ ಯಾಗದಿರುತ್ತಿದ್ದರೆ ಬಾಬರಿ ಮಸೀದಿ ವಿವಾದವೂ ಸೃಷ್ಟಿಯಾಗುತ್ತಿರಲಿಲ್ಲ ಎಂದು ಮಂಗಳೂರು ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ದೀನೀ ಫ್ರೆಂಡ್ಸ್ ಕಣ್ಣೂರು ಇದರ ಆಶ್ರಯದಲ್ಲಿ ‘ಧಾರ್ಮಿಕ ಸೊತ್ತುಗಳನ್ನು ಉಳಿಸುವ ಬಗ್ಗೆ’ ಗುರುವಾರ ನಗರದ ಪುರಭವನದಲ್ಲಿ ನಡೆದ ಸಮಾಲೋ ಚನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತ ದೇಶ ವಿಭಜನೆಯಾದಾಗ ಇಲ್ಲಿನ ಮುಸ್ಲಿಮರು ಅನೇಕ ಕಾರಣಕ್ಕಾಗಿ ದೇಶ ಬಿಟ್ಟು ಹೋದರು. ಇದರಿಂದ ಇಲ್ಲಿನ ಮುಸ್ಲಿಮರು ಅನೇಕ ಸಂಕಷ್ಟಗಳಿಗೆ ಸಿಲುಕಿದರು. ಮುಸ್ಲಿಮರ ಧಾರ್ಮಿಕ ಕೇಂದ್ರಗಳು ಅನಾಥ ವಾದವು. ಇಂದು ಅವುಗಳನ್ನು ಉಳಿ ಸುವ ಪ್ರಮೇಯ ಒದಗಿರುವುದು ವಿಷಾದನೀಯ ಎಂದು ತ್ವಾಕ ಅಹ್ಮದ್ ಮುಸ್ಲಿಯಾರ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ವಹಿಸಿದ್ದರು. ಹಿರಿಯ ನ್ಯಾಯವಾದಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್ ಧಾರ್ಮಿಕ ಸೊತ್ತುಗಳ ಕುರಿತು ಸ್ಥೂಲ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಎ.ಮೊಯ್ದಿನ್, ಶಾಸಕ ಯು.ಟಿ.ಖಾದರ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ, ಅಝಾದ್ ಹಾರ್ಡ್‌ವೇರ್‌ನ ಮನ್ಸೂರ್ ಅಹ್ಮದ್, ಫಾತಿಮಾ ಟ್ರೇಡರ್ಸ್‌ನ ಶರೀಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಕಣ್ಣೂರು ಜುಮಾ ಮಸೀದಿಯ ಅಬ್ದುಲ್ ಖಾದರ್ ಸಿತಾರ್, ದೀನೀ ಫ್ರೆಂಡ್ಸ್‌ನ ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಭಾಗವಹಿಸಿದ್ದರು.
ದೀನೀ ಫ್ರೆಂಡ್ಸ್‌ನ ಅಧ್ಯಕ್ಷ ಹಮೀದ್ ಕಣ್ಣೂರು ಸ್ವಾಗತಿಸಿದರು. ರಿಯಾಝ್ ಕಣ್ಣೂರು ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿ ಸಿದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ