ರಿಯಾದ್: ಇತ್ತೀಚಿಗೆ ಮಂಗಳೂರಿನ ಕೆಲವೊಂದು ಪತ್ರಿಕೆಗಳು ಇಂಡಿಯಾ ಫ್ರಾಟರ್ನಿಟಿ ಫಾರಂನ್ನು ಪ್ರಸಕ್ತ ಪೋಲಿಸ್ ಕಸ್ಟಡಿಯಲ್ಲಿರುವ ಕ್ರಿಮಿನಲ್ ಆರೋಪಿಯೊಂದಿಗೆ ಅಸಂಬದ್ದ ಸಂಬಂಧ ಕಲ್ಪಿಸಿ ಪ್ರಕಟಿಸಿರುವದನ್ನು ಇಂಡಿಯಾ ಫ್ರಾಟರ್ನಿಟಿ ಫಾರಂ ರಿಯಾದ್, ಸೌದಿ ಅರೇಬಿಯಾ ಘಟಕ ತೀವ್ರಾವಾಗಿ ಖಂಡಿಸಿದೆ. ಗಲ್ಫ್ ರಾಷ್ಟ್ರಗಳಲ್ಲಿ ಅನಿವಾಸೀ ಬಾರತೀಯರ ಮಾನವ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಘಟನೆ ಕ್ರಿಮಿನಲ್ ಚಟುವಟಿಕೆಗಳಿಗೆ ಸಹಕರಿಸುತ್ತಿದೆ ಹಾಗೂ ರಮಧಾನ್ ತಿಂಗಳಿನಲ್ಲಿ ಹಣ ಸಂಗ್ರಹಿಸಿ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುತ್ತಿದೆ ಎಂಬ ಆರೋಪ ನಿರಾಧಾರವಾಗಿದ್ದು ಈ ಹೇಳಿಕೆ ದುರುದ್ದೇಶಪೀಡಿತವಾಗಿದೆ ಎಂದು ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಗಲ್ಫ್ ರಾಷ್ಟ್ರದಾದ್ಯಂತ IFF ಸಂಘಟನೆಯು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು ಜಾತಿ-ಮತ-ಭೇದವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರ ಸೇವೆಗೈಯುವ ಒಂದು ಪ್ರಾಮಾಣಿಕ ಮಾನವ ಹಕ್ಕುಗಳ ಸೇವಾ ಸಂಸ್ಥೆ ಎಂದು ಜನಮಣ್ಣನೆ ಗಳಿಸಿದೆ. IFF ಕಾರ್ಯಾಚರಣೆ ನಡೆಸುವ ಮಾನವ ಹಕ್ಕು ಉಲ್ಲಂಘನೆ ಕೇಸುಗಳಲ್ಲಿ ನಿರಂತರವಾಗಿ ರಾಯಭಾರಿ ಕಛೇರಿಯೊಡನೆ ಸಂರ್ಪಕಿಸಿ ಕೆಲಸ ಕೈಗೆತ್ತಿಕೊಳ್ಳುತ್ತದೆ. ಮಾತ್ರವಲ್ಲದೆ ರಾಯಭಾರಿ ಕಚೇರಿಗೆ ಭಾರತೀಯ ಪ್ರತಿನಿಧಿಗಳು ಭಾಗವಹಿಸುವ ಸಮಾರಂಭಕ್ಕೆ ನಮ್ಮ ಸಂಘಟನೆಯ ಪ್ರತಿನಿಧಿಗಳಿಗೂ ನಿರಂತರವಾಗಿ ಆಹ್ವಾನ ನೀಡುತ್ತಿರುವುದು ನಮ್ಮ ಕಾರ್ಯಗಳನ್ನು ರಾಯಬಾರಿ ಕಚೇರಿ ಗುರುತಿರುವುದಕ್ಕೆ ಸಾಕ್ಷಿಯಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ತಿಂಗಳಿನಿಂದ ಸಂಬಳಸಿಗದ, ಅನೇಕ ವರ್ಷಗಳಿಂದ ಊರಿಗೆ ಹೋಗಲು ಅಸಾಧ್ಯವಾಗದೆ ಸಿಲುಕಿಕೊಂಡವರ, ಜೈಲು ಶಿಕ್ಷೆ ಮುಗಿದೂ ಕೂಡಾ ಜೈಲಲ್ಲೇ ಕೊಳೆಯುತ್ತಿರುವ ಭಾರತೀಯರ, ಅವಗಡಕ್ಕೊಳಪಟ್ಟು ಅಸಹಾಯಕರಾದವರಿಗೆ, ಅನಾರೋಗ್ಯ ಪೀಡಿತರಿಗೆ, ಹಾಗೂ ಮರಣ ಹೊಂದಿದ ಅನಿವಾಸಿ ಭಾರತೀಯರಿಗೆ ಅಗತ್ಯವಿರುವ ಸೇವಾ ಕಾರ್ಯಗಳನ್ನು IFF ಮಾಡುತ್ತಾ ಬಂದಿದ್ದು ಇದರ ಫಲಾನುಭವಿಗಳು ಊರಿನಲ್ಲಿಯೂ ಅನೇಕರಿದ್ದಾರೆ. ನಮ್ಮ ನಿಷ್ಕಳಂಕ ಸೇವೆಗಳನ್ನು ಕಂಡು ಅನೇಕ ಸಂಘ-ಸಂಸ್ಥೆಗಳು ಹಾಗೂ ಜೈಹಿಂದ್ ಟಿ.ವಿ ಗಲ್ಫ್ ವಿಭಾಗ 2009ರಲ್ಲಿ ಪುರಸ್ಕರಿಸಿದೆ. ಕೇವಲ IFF ರಿಯಾದ್ ಘಟಕ ಒಂದರಲ್ಲೇ 2010 ರಲ್ಲಿ ಸಾವಿರ ಕ್ಕೂ ಮೇಲ್ಪಟ್ಟು ಜನರ ಸೇವೆ ಗಳನ್ನು ಮಾಡಿ ಫಲಾನುಭವಿಗಳ ಆಶೀರ್ವಾದ ಪಡೆದಿರುವ IFF ನ ಉತ್ತಮ ಸೇವೆಗಳ ಕುರಿತಾದ ವರದಿಗಳು ಆಗಾಗ್ಗೆ ದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಾ ಇರುತ್ತದೆ.
ಅನೇಕ ವರುಷಗಳಿಂದ ಹಲವಾರು ಉತ್ಕ್ರಷ್ಟ ಸೇವೆಗಳನ್ನು ಗೈಯುತ್ತಾ ಬಂದಿರುವ ಒಂದು ಸಾಮಾಜಿಕ ಹಾಗೂ ಅನಿವಾಸಿ ಭಾರತೀಯರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಸಂಸ್ಥೆಯನ್ನು ಒಬ್ಬ ಕ್ರಿಮಿನಲ್ ಜೊತೆ ಸಂಬಂದ ಕಲ್ಪಿಸುವ ಹುನ್ನಾರ ರಾಜಕೀಯ ಪ್ರೇರಿತವಾದ ದುರಾಲೋಚನೆಯಿಂದ ಕೂಡಿದ್ದು ಇದರಿಂದಾಗಿ ನಮ್ಮ ಸದಸ್ಯರ ಉತ್ಸಾಹ ಕುಂದಿಸುವುದು ದೂರದ ಮಾತು. ಇಂತಹ ಹೊಣೆಗೇಡಿತನದ ಹೇಳಿಕೆಗಳಿಗೆ ಜನತೆ ಕಿವಿಗೊಡಬಾರದೆ೦ದು IFF ವಿನಂತಿಸಿದೆ ಹಾಗೂ ಎಲ್ಲರ ಸಹಕಾರವನ್ನು ಎಂದಿನಂತೆ ನಿರೀಕ್ಷಿಸುತ್ತದೆ.
ವಿ.ಸೂ : ನಮ್ಮ ಸಾಮಾಜಿಕ ಕಾರ್ಯಕ್ರಮ ಹಾಗೂ ಸಮಾರಂಭಗಳ ಸಚಿತ್ರ ವರದಿಗಳ ವೆಬ್ ಸೈಟ್ ಲಿಂಕ್ ಗಳನ್ನು ಲಗತ್ತಿಸಲಾಗಿದೆ.
ಪತ್ರಿಕಾ ಪ್ರಕಟಣೆ:
ನೌಶಾದ್ ಮಂಗಳೂರು
(ಅದ್ಯಕ್ಷರು : IFF – Riyadh Chapter)
Annual Activities list link
Independence day Celebration, Iftar & Other program
Release from Jail , other harass issue release & death Help links
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ