ಸೋಮವಾರ, ಡಿಸೆಂಬರ್ 06, 2010

ಇಂದು ಚಾಮರಾಜನಗರದಲ್ಲಿ ರಾಜಶೇಖರ ಮೂರ್ತಿ ಅಂತ್ಯಸಂಸ್ಕಾರ

ಚಾಮರಾಜನಗರ, ಡಿ. 6: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಸಭಾ ಸದಸ್ಯರಾಗಿದ್ದ ದಿವಂಗತ ಎಂ.ರಾಜಶೇಖರ್ ಮೂರ್ತಿಯವರ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಚಾಮರಾಜನಗರ ಜಿಲ್ಲೆಯ ಮರಿಯಾಲ ಗ್ರಾಮದ ಮುರುಘರಾಜೇಂದ್ರ ಸ್ವಾಮಿಗಳ ವಿರಕ್ತ ಮಠದ ಆವರಣದಲ್ಲಿ ನಡೆಯಲಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತಡಿಮಾಲಂಗಿಯಲ್ಲಿ ಜನಿಸಿದ ರಾಜಶೇಖರ್ ಮೂರ್ತಿ, ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಹಾಗೂ ಕೇಂದ್ರ ಸಚಿವರಾಗಿದ್ದರು. ಹಳೇ ಮೈಸೂರು ಪ್ರಾಂತ್ಯದಲ್ಲಿ ವೀರಶೈವ ನಾಯಕರಾಗಿದ್ದ ಇವರು, ಬದಲಾದ ರಾಜಕಾರಣದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅನಂತರ ಜೆಡಿಎಸ್ ಸೇರಿದ್ದರು, ಜೆಡಿಎಸ್ ಮೂಲಕ ರಾಜ್ಯ ಸಭಾ ಸದಸ್ಯರಾಗಿದ್ದ ಇವರು ನಿನ್ನೆ ರಾತ್ರಿ ನವದೆಹಲಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರ ಗೌರವಾರ್ಥವಾಗಿ ಮಂಗಳವಾರ ಚಾಮರಾಜನಗರ, ಮೈಸೂರು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಸರಕಾರ ರಜೆ ಘೋಷಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ