ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ನಂದರಬೆಟ್ಟು ಘಟಕದ ವತಿಯಿಂದ 19-12-2010ರಂದು ನೇತ್ರಾವತಿ ನದಿ ತೀರಿದ ದಡದಲ್ಲಿ ಸಾರ್ವಜನಿಕ ಕ್ರೀಡಾಕೂಟವು ನಡೆಯಿತು.
ಧ್ವಜವನ್ನು ಘಟಕಾಧ್ಯಕ್ಷ ನಿಯಾಝ್ ಎನ್.ಬಿಯವರಿಗೆ ಹಸ್ತಾಂತರಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದ ಪಾಪ್ಯುಲರ್ ಫ್ರಂಟ್ ಬಂಟ್ವಾಳ ವಲಯಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್ ಕ್ರೀಡೆಯ ಮಹತ್ವದ ಬಗ್ಗೆ ತಿಳಿಸಿದರು.
ವಲಯ ಸಮಿತಿ ಸದಸ್ಯ ಇಕ್ಬಾಲ್ ಎನ್.ಬಿ, ಮದೀನಾ ಮಸ್ಜಿದ್ ನಂದರಬೆಟ್ಟು ಇದರ ಉಪಾಧ್ಯಕ್ಷ ಹುಸೈನಾಯಕ, ಘಟಕದ ಹಿರಿಯ ಸದಸ್ಯರಾದ ರಫೀಕ್ ಎ.ಕೆ ಮತ್ತು ಇಕ್ಬಾಲ್ ಎಂ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಟಾಣಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ವಯಸ್ಕರಿಗೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ