ಮಂಗಳವಾರ, ಜನವರಿ 11, 2011

ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ: ಆರೋಪಿಗಳ ಸುಳಿವಿಗೆ ಬಹುಮಾನ ಘೋಷಣೆ

 
ಹೊಸದಿಲ್ಲಿ, ಜ.11: ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಆರೋಪಿ ಗಳಾಗಿರುವ ಸಂದೀಪ್ ಡಾಂಗೆ ಹಾಗೂ ರಾಮಚಂದ್ರ ಕಲ್ಸಂಗ್ರ ಎಂಬವರ ಕುರಿತು ಮಾಹಿತಿ ನೀಡಿದವರಿಗೆ ತಲಾ ರೂ. 10 ಲಕ್ಷ ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ತನಿಖೆ ಸಂಸ್ಥೆಯಿಂದು ಘೋಷಿಸಿದೆ. ಇವರಿಬ್ಬರಲ್ಲದೆ, ಇದೇಪ್ರಕರಣ ದಲ್ಲಿ ಬೇಕಾಗಿರುವ ಅಶೋಕ್ ಎಂಬಾತನ ಕುರಿತು ಸುಳಿವು ನೀಡಿದ ವರಿಗೆ ರೂ.2 ಲಕ್ಷ ಬಹುಮಾನವನ್ನು ಅದು ಪ್ರಕಟಿಸಿದೆ.
ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ ಮ್ಯಾಜಿಸ್ಟ್ರೇಟ ರೊಬ್ಬರ ಮುಂದೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಸಂಜೋತಾ ಎಕ್ಸ್‌ಪ್ರೆಸ್ ಸಹಿತ ದೇಶಾದ್ಯಂತ ನಡೆದ ಹಲವು ಸ್ಫೋಟ ಪ್ರಕರಣ ಗಳಲ್ಲಿ ಡಾಂಗೆ ಹಾಗೂ ಕಲ್ಸಂಗ್ರೆ ಪ್ರಧಾನ ಪಾತ್ರ ವಹಿಸಿದ್ದರೆಂದು ಹೇಳಿದ್ದಾನೆನ್ನಲಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿರುವ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್‌ಐಎ) 2007ರ ಫೆಬ್ರವರಿಯಲ್ಲಿ 68 ಮಂದಿಯ ಸಾವಿಗೆ ಕಾರಣವಾದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ತನಿಖೆ ನಡೆಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ