ಬದನವಾಳ ರೈತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಸೋಶಿಯ್ ಡೆಮಾಕ್ರಟಿಕಪಾರ್ಟಿ ಆ್ ಇಂಡಿಯಾ ಮೈಸೂರು ಜಿಲ್ಲಾ ಸಮಿತಿ ಸ್ವಾಗತಿಸಿದೆೆ. ಇದು ಸವರ್ಣೀಯರ ಅನ್ಯಾಯದ ವಿರುದ್ಧ ದಲಿತರಿಗೆ ಸಂದ ಜಯ ಎಂದು ಪಕ್ಷವು ಬಣ್ಣಿಸಿದೆ.
ದಲಿತರ ವಿರುದ್ಧ ಅನ್ಯಾಯ
-ಅಕ್ರಮ ಎಸಗುವ ಸವರ್ಣೀಯ ವರ್ಗಕ್ಕೆ ಇದು ಪಾಠವಾಗಲಿ ಎಂದು ಎಸ್.ಡಿ.ಪಿ.ಐ ಹಾರೈಸಿದೆ.
ದಲಿತರು ಭಯ ಮುಕ್ತ ವಾತಾವರಣದಲ್ಲಿ ಜೀವಿಸಲು ಪೂರಕವಾದ ವ್ಯವಸ್ಥೆಯನ್ನು ರೂಪಿಸಲು ಜಿಲ್ಲಾಡಳಿತ ಮತ್ತು ಪೊಲೀ್ ವ್ಯವಸ್ಥೆ ಕ್ರಮ ಕೈಗೊಳ್ಳಬೇಕು
. ದಲಿತರಿಗೆ ಸವರ್ಣೀಯರಿಂದ ಆಗುತ್ತಿರುವ ಎಲ್ಲಾ ರೀತಿಯ ದೌರ್ಜನ್ಯಗಳನ್ನು ನಿಲ್ಲಿಸುವುದಕ್ಕಾಗಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಆಗ್ರಹಿಸಿದೆ.
ರಾಜ್ಯದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯ
, ಅಕ್ರಮ ಮತ್ತು ಅಸ್ಪೃಶ್ಯತೆಯನ್ನು ಪಕ್ಷವು ಸಹಿಸುವುದಿಲ್ಲ. ಇಂತಹ ಸಮಾಜ ವಿರೋಧಿ ಚಟುವಟಿಕೆಗಳು ಭವಿಷ್ಯದಲ್ಲಿ ಕಾಣಿಸಿದರೆ, ಪಕ್ಷವು ಅದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಎಸ್.ಡಿ.ಪಿ.ಐ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ