ಆದರ್ಶ್ ಹೌಸಿಂಗ್ ಸೊಸೈಟಿಯಲ್ಲಿ ಫ್ಲಾಟ್ ಗಳನ್ನು ಪಡೆಯಲು ಮಾಜಿ ಸೇನಾ ವರಿಷ್ಠ ಲೆ.ಜ.ದೀಪಕ್ ಕಪೂರ್ ಹಾಗೂ ಅವರ ಬಳಗ ನಡೆಸಿದ ಕರ್ಮಕಾಂಡವು ಒಂದೊಂದಾಗಿ ಬಯಲಿಗೆ ಬರುತ್ತಿದ್ದಂತೆಯೇ, ಭಾರತವು ನಾಚಿಕೆ ಯಿಂದ ತಲೆತಗ್ಗಿಸುವಂತಾಗಿದೆ. ಕಾರ್ಗಿಲ್‌ನ ಹುತಾತ್ಮ ಯೋಧರ ಕುಟುಂಬಗಳಿಗಾಗಿ ನೀಡಲೆಂದು ನಿರ್ಮಾಣಗೊಂಡಿದ್ದ ಈ ವಸತಿ ಕಟ್ಟಡ ದಲ್ಲಿ ಫ್ಲಾಟ್‌ಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳು ವಲ್ಲಿ ದೀಪಕ್ ಕಪೂರ್ ಮತ್ತಿತರ ಸೇನಾಧಿಕಾರಿ ಗಳು ನಡೆಸಿದ ಅವ್ಯವಹಾರಗಳು ಜನತೆಯಲ್ಲಿ ಸೇನೆಯಂತಹ ಮಹಾನ್ ಸಂಸ್ಥೆಯ ಬಗ್ಗೆ ಇಟ್ಟುಕೊಂಡಿರುವ ನಂಬಿಕೆಯ ಬುನಾದಿ ಯನ್ನು ಅಲುಗಾಡಿಸತೊಡಗಿದೆ.
ಈ ಹಗರಣದಿಂದಾಗಿ ದೇಶದ ಗಡಿಯನ್ನು ಸುರಕ್ಷಿತವಾಗಿಡುವ ಹೊಣೆ ಹೊತ್ತ ಹಾಗೂ ಪ್ರಾಕೃತಿಕ ವಿಕೋಪ ಅಥವಾ ಆಂತರಿಕ ಗಲಭೆಗಳ ಸಂದರ್ಭ ದಲ್ಲಿ ನಾಗರಿಕರ ರಕ್ಷಣೆಗೆ ಧಾವಿಸುವ ನಮ್ಮ ಸೇನೆಯ ಬಗ್ಗೆ ವಿಶ್ವಾಸವನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಬಹುದು ಎಂಬ ಪ್ರಶ್ನೆ ಕಾಡುತ್ತದೆ.

![]() | ||
| ಲೆ.ಜ.ದೀಪಕ್ ಕಪೂರ್ ಹಾಗೂ ಅವರ ಬಳಗ ನಡೆಸಿದ ಕರ್ಮಕಾಂಡವು ಒಂದೊಂದಾಗಿ ಬಯಲಿಗೆ ಬರುತ್ತಿದ್ದಂತೆಯೇ, ಭಾರತವು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಕಾರ್ಗಿಲ್‌ನ ಹುತಾತ್ಮ ಯೋಧರ ಕುಟುಂಬಗಳಿಗಾಗಿ ನೀಡ ಲೆಂದು ನಿರ್ಮಾಣ ಗೊಂಡಿದ್ದ ಈ ವಸತಿ ಕಟ್ಟಡದಲ್ಲಿ ಫ್ಲಾಟ್‌ಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ದೀಪಕ್ ಕಪೂರ್ ಮತ್ತಿತರ ಸೇನಾಧಿ ಕಾರಿಗಳು ನಡೆಸಿದ ಅವ್ಯವ ಹಾರಗಳು ಜನತೆಯಲ್ಲಿ ಸೇನೆಯಂತಹ ಮಹಾನ್ ಸಂಸ್ಥೆಯ ಬಗ್ಗೆ ಇಟ್ಟುಕೊಂಡಿ ರುವ ನಂಬಿಕೆಯ ಬುನಾದಿ ಯನ್ನು ಅಲುಗಾಡಿಸತೊಡಗಿದೆ. |
ಸೇನೆಯಲ್ಲಿ ಭ್ರಷ್ಟಾಚಾರದ ಹಗರಣವು ಬೆಳಕಿಗೆ ಬಂದಿರು ವುದು ಇದೇ ಮೊದಲೇನಲ್ಲ. 2001ರಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ನಡೆದ ಅವ್ಯವಹಾರವನ್ನು, ‘ತೆಹೆಲ್ಕಾ’ ಅಂತ ರ್ಜಾಲ ಪತ್ರಿಕೆಯು ಬಯಲಿಗೆಳೆದಿತ್ತು. ದುರದೃಷ್ಟವಶಾತ್ ಆಗಿನ ಎನ್‌ಡಿಎ ಸರಕಾರವು ಸೇನೆಯ ಆಡಳಿತ ವ್ಯವಸ್ಥೆಯನ್ನು ಶುಚೀಕರಣಗೊಳಿಸುವ ಬದಲು ತೆಹೆಲ್ಕಾದ ವಿರುದ್ಧ ‘ಯುದ್ಧ’ ವನ್ನು ಸಾರಿತು. ಕಳೆದ ಐದು ವರ್ಷಗಳಲ್ಲಿ ವಿವಿಧ ಹಗರಣ ಗಳಲ್ಲಿ ಹಿರಿಯ ಸೇನಾಧಿಕಾರಿಗಳು ಶಾಮೀಲಾಗಿರುವುದನ್ನು ನೋಡಿದರೆ, ಇದಕ್ಕೆ ಒಂದು ಲೆಕ್ಕದಲ್ಲಿ ಸರಕಾರವೇ ಹೊಣೆ ಯೆಂದು ಹೇಳಬಹುದು. ಏಕೆಂದರೆ ಸೇನೆಯಲ್ಲಿ ಹುಟ್ಟಿ ಕೊಂಡಿದ್ದ ಭ್ರಷ್ಟಾಚಾರದ ಬೇರನ್ನು ಆರಂಭದಲ್ಲೇ ಚಿವುಟಿದಲ್ಲಿ ಈಗಿನ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ,.
ಹೊಸ ಶತಮಾನದ ಮೊದಲ ದಶಕವು ಕೊನೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಸೇನೆಯ ಮೇಲೆ ಕಳಂಕದ ಕಾರ್ಮೋಡ ಕವಿದಿದೆ. ಹೀಗಿದ್ದೂ, ಅಲ್ಲೊಂದು, ಇಲ್ಲೊಂದು ಭರವಸೆಯ ಬೆಳ್ಳಿಯ ಗೆರೆ ಗೋಚರಿಸುತ್ತಿದೆ. ಸೇನಾ ನಿವೇಶನ ಮಾರಾಟ, ಶಸ್ತ್ರಾಸ್ತ್ರ ಖರೀದಿ ಮತ್ತಿತರ ವಿವಿಧ ಭ್ರಷ್ಟಾಚಾರ ಪ್ರಕರಣಗಳ ಆರೋಪಿ ಸೇನಾಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿ ರುವುದು ಹಾಗೂ ಅವರ ವಿರುದ್ಧ ಸೈನಿಕ ನ್ಯಾಯಾಲಯ (ಕೋರ್ಟ್ ಮಾರ್ಶಲ್) ವಿಚಾರಣೆಗೆ ಆದೇಶ ದೊರೆತಿರು ವುದು ಒಂದು ಸಮಾಧಾನಕರ ಅಂಶ.
2015ರೊಳಗೆ ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ ಭಾರತವು 2.21 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಯೆಂಬುದು ಒಂದು ಅಂದಾಜು. ಹೀಗಾಗಿ ವಿಶ್ವದ ಪ್ರಮುಖ ಸೇನಾ ಉಪಕರಣಗಳ ಉತ್ಪಾದಕರು, ಸೇನೆಯ ರಕ್ಷಣಾ ವೆಚ್ಚದಲ್ಲಿ ತಮಗೊಂದು ಪಾಲು ಪಡೆಯಲು ತಡಮಾಡದೆ ದಿಲ್ಲಿಗೆ ಲಗ್ಗೆಯಿಡುತ್ತಿದ್ದಾರೆ. ಈ ವಿಷಯದಲ್ಲಿ ಭಾರತೀಯ ಸಂಸ್ಥೆಗಳೂ ಹಿಂದುಳಿದಿಲ್ಲ. ಅವು ಕೂಡಾ 44,209 ಕೋಟಿ ರೂ. ವೌಲ್ಯದ ಗುತ್ತಿಗೆಯನ್ನು ಪಡೆಯಲು ತುದಿಗಾಲಲ್ಲಿ ನಿಂತಿವೆ. ಅಂತೂ ಇಷ್ಟೊಂದು ಬಹುಕೋಟಿ ವ್ಯವಹಾರದಲ್ಲಿ ಲಂಚ ಹಾಗೂ ವಶೀಲಿಯು ನಡೆಯುವ ಅಪಾಯ ಎದ್ದು ಕಾಣುತ್ತಿದೆ.
ದೀಪಕ್ ಕಪೂರ್ ಈಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾಗಿರುವ ಯೋಧರು ಮತ್ತು ಹುತಾತ್ಮ ಯೋಧರ ವಿಧವಾ ಮಹಿಳೆಯರ ಆಕ್ರೋಶಕ್ಕೆ ಗುರಿಯಾ ಗಿದ್ದಾರೆ. ಯಾಕೆಂದರೆ ಆತ ಕೇವಲ ಭಾರೀ ಮೊತ್ತದ ಲಂಚ ವನ್ನು ಜೇಬಿಗಿಳಿಸಿದುದೇ ಅಲ್ಲದೆ, ರಾಜಕಾರಣಿ- ಗುತ್ತಿ ಗೆದಾರ- ಪೊಲೀಸ್- ಇಲಾಖಾಧಿಕಾರಿಗಳೆಂಬ ಸಮಗ್ರ ವಿಷವರ್ತುಲವನ್ನು ಸೇನೆಯೊಳಗೆ ಆಹ್ವಾನಿಸಿದರು.
ಭ್ರಷ್ಟಾಚಾರದಿಂದ ಲಾಭವನ್ನು ಹಂಚಿಕೊಳ್ಳಲು ತನ್ನ ಅಧಿಕಾರವನ್ನು ಬಳಸಿಕೊಳ್ಳಲು ತಾನು ಸಿದ್ಧನಿರುವುದಾಗಿ ರಾಜಕೀಯ ವಲಯಗಳಿಗೆ ಅವರು ತನ್ನ ನಡವಳಿಕೆಗಳಿಂದ ಮನವರಿಕೆ ಮಾಡಿಕೊಟ್ಟಿದ್ದರು. ಸೇನೆಯ ಭ್ರಷ್ಟಾಚಾರವು ಬೇರು ಬಿಡುವಂತೆ ಮಾಡುವಲ್ಲಿ ದೀಪಕ್ ಕಪೂರ್‌ರ ಪೂರ್ವಾಧಿಕಾರಿ ಎನ್.ಸಿ. ವಿಜ್ ಅವರ ಪಾತ್ರವೂ ದೊಡ್ಡದೆಂದು ಕೆಲವು ಸೇನಾಧಿಕಾರಿಗಳು ಆಪಾದಿಸುತ್ತಾರೆ.
![]() ಶಾಂತಿಪಾಲನಾ ಪಡೆಗೆ ಸಾಮಗ್ರಿಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಿ ಜೇಬು ತುಂಬಿಸಿಕೊಂಡರು ಜಬಲ್‌ಪುರದಲ್ಲಿರುವ ಸೇನಾ ಸಾಮಗ್ರಿ ನಿರ್ವಹಣಾ ಸಂಸ್ಥೆಯ ಕಮಾಂಡೆಂಟ್ ಆಗಿದ್ದ ಮೇ. ಜ. ಅನಿಲ್ ಸ್ವರೂಪ್ ಅವರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಾಗಿ ಕಾರ್ಯನಿರ್ವಹಿಸಲು ತೆರಳಿದ ಭಾರತೀಯ ಸೈನಿಕ ತಂಡಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿಯೇ ತಮ್ಮ ಜೇಬು ತುಂಬಿಸಿ ಕೊಂಡರು. ಕಾಮನ್‌ವೆಲ್ತ್ ಗೇಮ್ಸ್ ಹಗರಣದ ರೀತಿಯಲ್ಲೇ ಸ್ವರೂಪ್, ಸಾಮಗ್ರಿಗಳನ್ನು ನೈಜಬೆಲೆಗಿಂತ ಅಧಿಕ ದರದಲ್ಲಿ ಖರೀದಿಸಿದರು. ಉದಾಹರಣೆಗೆ 100 ಕೆವಿಎ ಜನರಲ್‌ರೇಟರ್‌ಗಳಿಗೆ ಮಾರುಕಟ್ಟೆ ಬೆಲೆ 7 ಲಕ್ಷವಿದ್ದರೆ, ಅವರು ಅದನ್ನು 15 ಲಕ್ಷ ರೂ.ಗೆ ಖರೀದಿಸಿದರು. ಬರೀ 300 ರೂ. ಬೆಲೆಯ ಕೇಬಲ್ ತಂತಿಗಳನ್ನು 2 ಸಾವಿರ ರೂ.ಗಳಿಗೆ ಕೊಳ್ಳಲಾಯಿತು. ದಿಲ್ಲಿಯ ಶಾಲೆ ಯೊಂದಕ್ಕೆ ಬರೀ 700ರೂ.ಗೆ ಶೂಗಳನ್ನು ಪೂರೈಕೆ ಮಾಡಿದ ಕಂಪೆನಿಯು, ಸೇನೆಗಾಗುವಾಗ 1200 ರೂ.ಗಳಿಗೆ ಮಾರಾಟ ಮಾಡಿತು. ಹೀಗೆ 2006- 2008ರವರೆಗೆ 100 ಕೋಟಿ ರೂ.ಗಳನ್ನು ಕೊಳ್ಳೆ ಹೊಡೆಯಲಾಯಿತು. |
ಆದರ್ಶ್ ಹೌಸಿಂಗ್ ಸೊಸೈಟಿಯ ವಸತಿ ಕಟ್ಟಡಕ್ಕೆ ಮಹಾರಾಷ್ಟ್ರ ಸರಕಾರವು ಕಾರ್ಯಸಮರ್ಥ ಪ್ರಮಾಣಪತ್ರ (ಆಪರೇಶನಲ್ ಸರ್ಟಿಫಿಕೇಟ್) ನೀಡಿದಾಗ ಮುಂಬೈಯಲ್ಲಿನ ಪಶ್ಚಿಮ ನೌಕಾಪಡೆ ನೆಲೆಯ ಕಮಾಂಡರ್ ಸಂಜೀವ್ ಭಾಸಿನ್ ಪತ್ರ ಬರೆದು, ಈ ಗಗನಚುಂಬಿ ಕಟ್ಟಡವು ಸಮೀಪ ದಲ್ಲಿರುವ ನೌಕಾನೆಲೆಗೆ ಒಂದು ದೊಡ್ಡ ಭದ್ರತಾ ಬೆದರಿಕೆ ಯಾಗಿದೆ ಎಂದು ತಿಳಿಸಿದ್ದರಲ್ಲದೆ, 2003ರಿಂದೀಚೆಗೆ ಈ ವಸತಿ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದ ಪ್ರವರ್ತಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಕಾರ್ಗಿಲ್ ಸಮರದ ಹುತಾತ್ಮರ ವಿಧವಾ ಪತ್ನಿಯರಿಗಾಗಿ ವಸತಿಗಳನ್ನು ನೀಡುವ ಉದ್ದೇಶದಿಂದ ಆದರ್ಶ್ ಹೌಸಿಂಗ್ ಸೊಸೈಟಿ ರೂಪುಗೊಂಡಿತ್ತು ಎಂಬ ವಿಚಾರವು ತಮಗೆ ತಿಳಿದಿರ ಲಿಲ್ಲವೆಂಬ ದೀಪಕ್ ಕಪೂರ್ ಹಾಗೂ ವಿಜ್‌ರ ವಾದವು ಯಾರೂ ನಂಬುವಂತಹದ್ದಲ್ಲ.‘‘ಈ ಫ್ಲಾಟ್‌ಗಳು ಯುದ್ಧದಲ್ಲಿ ಮಡಿದವರ ವಿಧವಾ ಪತ್ನಿಯರಿಗಾಗಿತ್ತೆಂದು ತನಗೆ ತಿಳಿದಿರಲಿಲ್ಲ ವೆಂದು ದೀಪಕ್ ಕಪೂರ್‌ರಂತಹ ಒಬ್ಬ ಉನ್ನತ ಸೇನಾಧಿಕಾರಿ ಹೇಳುತ್ತಿರುವುದು ಎಷ್ಟು ವಿವೇಕರಹಿತವಾದುದು? ಅವರು ಸೇನಾ ಉನ್ನತಾಧಿಕಾರಿಯಾಗುವುದಕ್ಕೆ ನಾಲಾಯಖ್ ಎಂದು ನಿವೃತ್ತ ಮೇಜರ್ ಜನರಲ್ ಎಸ್.ಸಿ.ಎನ್. ಜಾತರ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
2005ರಲ್ಲಿ ಆದರ್ಶ್ ಫ್ಲಾಟ್‌ಗಾಗಿ ದೀಪಕ್ ಕಪೂರ್ ಅರ್ಜಿ ಸಲ್ಲಿಸಿದಾಗ, ಸೊಸೈ ಟಿಯ ಸದಸ್ಯತ್ವದ ನಿಯಮಗಳು ಸ್ಪಷ್ಟವಾಗಿ ದ್ದವು. ಅಪೇಕ್ಷಿತರು ಮುಂಬೈಯಲ್ಲಿ 15 ವರ್ಷಗಳ ಕಾಲ ವಾಸಿಸಿರಬೇಕೆಂಬ ನಿಯಮ ವಿಧಿಸಲಾಗಿತ್ತು. ಇದಕ್ಕಾಗಿ ದೀಪಕ್ ಕಪೂರ್ ಮಹಾರಾಷ್ಟ್ರದ ಆಗಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್‌ಗೆ ಪತ್ರ ಬರೆದು, ತನಗೆ ವಾಸ್ತವ್ಯ ಪ್ರಮಾಣಪತ್ರವನ್ನು ನೀಡುವಂತೆ ಆಗ್ರಹಿಸಿದ್ದರು. ದೇಶಮುಖ್ ಮರುಮಾತಿ ಲ್ಲದೆ ಸಮ್ಮತಿಸಿದ್ದರು. ಈ ಅರ್ಜಿಯ ಜೊತೆ ಸಲ್ಲಿಸಿದ ವೇತನ ಸ್ಲಿಪ್‌ನಲ್ಲಿ ಅವರು ತಮ್ಮ ಮಾಸಿಕ ಆದಾಯವನ್ನು 23,450 ಎಂಬು ದಾಗಿ ನಮೂದಿಸಿದ್ದರು. ಈ ನಕಲಿ ಸ್ಲಿಪ್‌ನ ಬಗ್ಗೆ ಕಪೂರ್‌ರ ಗಮನವನ್ನು ಸೆಳೆದಾಗ ಅವರು ಅಚ್ಚರಿ ವ್ಯಕ್ತಪಡಿಸಿದ್ದರು.
ತೃಣಮೂಲ ಕಾಂಗ್ರೆಸ್‌ನ ಸಂಸದೆ ಅಂಬಿಕಾ ಬ್ಯಾನರ್ಜಿ, ಆಗಸ್ಟ್ 5ರಂದು ರಕ್ಷಣಾ ಸಚಿವರಿಗೆ ಬರೆದ ಪತ್ರವು ಇದಕ್ಕಿಂತಲೂ ಆಘಾತಕಾರಿಯಾಗಿತ್ತು. ದೀಪಕ್ ಕಪೂರ್ ಅಧಿಕೃತ ಆದಾಯಕ್ಕಿಂತಲೂ ಹೆಚ್ಚು ಪ್ರಮಾಣದ ಅಕ್ರಮ ಆಸ್ತಿಪಾಸ್ತಿಯನ್ನು ಹೊಂದಿದ್ದಾರೆಂದು ಆಕೆ ಪತ್ರದಲ್ಲಿ ಆಪಾದಿಸಿದ್ದರು.ಹೊಸದಿಲ್ಲಿಯ ದ್ವಾರಕಾ ಸೆಕ್ಟರ್ 29ರಲ್ಲಿ ಒಂದು ಫ್ಲಾಟ್, ಗುರ್ಗಾಂವ್ ಸೆಕ್ಟರ್ 23ರಲ್ಲಿ ಮೂರು ಫ್ಲಾಟ್, ಗುರ್ಗಾಂವ್ ಸೆಕ್ಟರ್ 42/44ರಲ್ಲಿ, ಗುರ್ಗಾಂವ್ ಮೂರನೆ ಹಂತದಲ್ಲಿ ತಲಾ ಒಂದು ಫ್ಲಾಟ್, ಮುಂಬೈಯ ಲೋಖಂಡವಾಲದಲ್ಲಿ ಒಂದು ಮನೆ ಇವಿಷ್ಟು ಆಸ್ತಿ ದೀಪಕ್ ಕಪೂರ್ ಬಳಿಯಿವೆಯೆಂದವರು ಪತ್ರದಲ್ಲಿ ಬಹಿರಂಗಪಡಿಸಿದ್ದರು.
| * ಮಿಲಿಟರಿ ಬಳಕೆಯ ಮದ್ಯವನ್ನು ಮುಕ್ತ ಮಾರು ಕಟ್ಟೆಯಲ್ಲಿ ಮಾರಾಟ ಮಾಡಿದ ಹಗರಣಕ್ಕೆ ಸಂಬಂಧಿಸಿ 2006ರಲ್ಲಿ ತನಿಖಾ ಸಮಿತಿಯೊಂದು ಮೇಜರ್ ಜನರಲ್ ಇಕ್ಬಾಲ್‌ಸಿಂಗ್ ಮುಲ್ತಾನಿ, ನಾಲ್ವರು ಬ್ರಿಗೇಡಿಯರ್‌ಗಳು ಹಾಗೂ ಇತರ ಹಲವು ಸೇನಾಧಿಕಾರಿಗಳನ್ನು ದೋಷಿ ಗಳೆಂದು ಪರಿಗಣಿಸಿತು. * ತಮ್ಮ ವೈಯಕ್ತಿಕ ಬಳಕೆಗೆಂದು ನೀಡಲಾಗಿದ್ದ ಲಘುಶಸ್ತ್ರಾಸ್ತ್ರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ 41 ಅಧಿಕಾರಿಗಳ ಕರ್ಮಕಾಂಡ 2009ರಲ್ಲಿ ಬಯಲಿಗೆ ಬಂದಿತು. |
ಆದರೆ ಕಪೂರ್ ತಡಮಾಡದೆ ರಕ್ಷಣಾ ಸಚಿವರನ್ನು ಭೇಟಿಯಾಗಿ ತನ್ನ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದರು. ಇನ್ನು ಸುಖ್ನಾ ಸೇನಾ ನಿವೇಶನ ಭೂಹಗರಣದ ವಿಷಯಕ್ಕೆ ಬರೋಣ. ಈ ಹಗರಣದ ಪ್ರಮುಖ ಆರೋಪಿ ತನ್ನ ಸೈನಿಕ ಕಾರ್ಯದರ್ಶಿಯೂ ಆಗಿದ್ದ ಲೆಫ್ಟಿನೆಂಟ್ ಜನರಲ್ ಅವಧೇಶ್ ಪಾರೀಖ್ ಬಗ್ಗೆ ದೀಪಕ್ ಕಪೂರ್ ಮೃದು ಧೋರಣೆ ತಾಳಿದ್ದುದು ಕೂಡಾ ಸಂಶಯಕ್ಕೆಡೆ ಮಾಡಿದೆ.
ಪಶ್ಚಿಮಬಂಗಾಳದ ಸುಖ್ನಾದಲ್ಲಿರುವ 33 ಕಾರ್ಪ್ಸ್ ಪಡೆಗೆ ಸೇರಿದ 70 ಎಕರೆ ಭೂಮಿಯನ್ನು ಗೀತಾಂಜಲಿ ಶಿಕ್ಷಣ ಟ್ರಸ್ಟ್‌ಗೆ ಮಾರಲಾಗಿತ್ತು. ಈ ಹಗರಣದಲ್ಲಿ ಉನ್ನತ ಸೇನಾಧಿ ಕಾರಿಗಳಾದ ಲೆ.ಜ.ರಥ್, ಲೆ.ಜ. ಹಾಲ್‌ಗಳಿ ಹಾಗೂ ಪ್ರಕಾಶ್ ಶಾಮೀಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿತು. ಆ ವೇಳೆ ರಥ್ ಅವರು ಸೇನೆಯ ಉಪಮುಖ್ಯಸ್ಥನ ಸ್ಥಾನಕ್ಕೇರುವ ಸನ್ನಾಹದಲ್ಲಿದ್ದರೆ, ಪ್ರಕಾಶ್‌ಗೆ ಸೇನಾಧಿಕಾರಿಗಳ ಭಡ್ತಿ ಹಾಗೂ ನಿಯೋಜನೆಗಳ ಕುರಿತ ಹುದ್ದೆ ದೊರೆಯುವು ದರಲ್ಲಿತ್ತು. ಹಗರಣ ಹೊರಬಂದ ಬಳಿಕ ಈ ಭಡ್ತಿಗಳಿಗೆ ಬ್ರೇಕ್ ನೀಡಲಾಯಿತು.
ಆಗ ಪೂರ್ವ ಕಮಾಂಡ್‌ನ ಕಮಾಂ ಡಿಂಗ್ ಕಚೇರಿಯ ವರಿಷ್ಠರಾಗಿದ್ದ ಹಾಲಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ನೇತೃತ್ವದ ತನಿಖಾ ಸಮಿತಿಯು ಈ ನಾಲ್ವರ ವಿರುದ್ಧದ ಆರೋಪಗಳ ವಿಚಾರಣೆ ನಡೆಸಿತು. ಎಲ್ಲ ಆರೋ ಪಿಗಳನ್ನು ತಪ್ಪಿತಸ್ಥರೆಂದು ಸಮಿತಿಯು ಘೋಷಿಸಿತಲ್ಲದೆ, ಪ್ರಕಾಶ್‌ರ ಉಚ್ಚಾಟನೆಗೆ ಶಿಫಾರಸು ಮಾಡಿತು. ಆದರೆ ದೀಪಕ್ ಕಪೂರ್ ಮಧ್ಯೆಪ್ರವೇಶಿಸಿ ಪ್ರಕಾಶ್ ವಿರುದ್ಧ ಆಡಳಿ ತಾತ್ಮಕ ಕ್ರಮ ಮಾತ್ರ ಕೈಗೊಳ್ಳುವಂತೆ ತಿಳಿಸಿದರು.
ಸೇನಾ ಹಗರಣ ಇಲ್ಲಿಗೆ ಮುಗಿಯಲಿಲ್ಲ. 2006ರಲ್ಲಿ ಆರ್ಡ್‌ನಾನ್ಸ್ ಕಾರ್ಪ್ಸ್ ದಳದ ಮೇಜರ್ ಜನರಲ್ ಮಲ್ಹೋತ್ರಾ ಎಂಬವರು 16 ಕೋಟಿ ರೂ. ವೌಲ್ಯದ ಟೆಂಟ್‌ಗಳ ಖರೀದಿಗಾಗಿ ಪ್ರಸ್ತಾಪವೊಂದನ್ನು ಸಲ್ಲಿಸಿದ್ದರು. ಟೆಂಟ್‌ಗಳ ಅಭಾವದಿಂದಾಗಿ ಸೈನಿಕರು ಕಷ್ಟಪಡುತ್ತಿರುವು ದರಿಂದ ಶೀಘ್ರವೇ ಟೆಂಟ್‌ಗಳನ್ನು ಪೂರೈಕೆ ಮಾಡುವಂತೆ ಅವರು ಬೇಡಿಕೆ ಸಲ್ಲಿಸಿದ್ದರು.ದೀಪಕ್ ಕಪೂರ್ ಕೂಡಾ ಒಪ್ಪಿಗೆ ನೀಡಿದ್ದರು.
ಆ ಬಳಿಕ ಕಪೂರ್ ಉಪವರಿಷ್ಠರಾಗಿ ಸೇನಾ ಮುಖ್ಯ ಕಾರ್ಯಾಲಯಕ್ಕೆ ತೆರಳಿದರು. ಲೆ.ಜ. ಎಚ್.ಎಸ್. ಪನಾಗ್ ಕಮಾಂಡರ್ ಆಗಿ ಅಧಿಕಾರವಹಿಸಿಕೊಂಡರು. ಆದರೆ ಭಾರೀ ಪ್ರಮಾಣದಲ್ಲಿ ಟೆಂಟ್ ಹಗರಣ ನಡೆದಿದೆಯೆಂಬ ಅನಾಮಿಕ ಪತ್ರವೊಂದು ಬಂದ ಬಳಿಕ ಅವರು ಎಚ್ಚೆತ್ತು ತನಿಖೆ ನಡೆಸಿ ದರು. ಆದರೆ ಬಳಿಕ ಈ ಟೆಂಟ್‌ಗಳ ಅಗತ್ಯವೇ ಇರಲಿಲ್ಲ ವೆಂದು ಮೇ. ಜ. ಸಪ್ರು ನೇತೃತ್ವದ ತನಿಖಾ ಸಮಿತಿ ಪತ್ತೆ ಹಚ್ಚಿತು. ಈ ಹಗರಣದಲ್ಲಿ ಮಲ್ಹೋತ್ರಾ 1.6 ಕೋಟಿ ರೂ. ಸ್ವಾಹಾ ಮಾಡಿರುವುದನ್ನು ಅದು ಬಯಲಿಗೆಳೆಯಿತು. ಇದ ರಿಂದಾಗಿ ಮಲ್ಹೋತ್ರಾ ಅವರ ಭವಿಷ್ಯದ ಭಡ್ತಿಗಳಿಗೆ ತೆರೆಬಿತ್ತು.
ಅಷ್ಟರ ಹೊತ್ತಿಗೆ ದೀಪಕ್ ಕಪೂರ್ ಸೇನಾಮುಖ್ಯಸ್ಥ ರಾಗಿದ್ದರು. ತನ್ನ ಎರಡು ವರ್ಷಗಳ ಅಧಿಕಾರಾವಧಿಯ ಮಧ್ಯ ದಲ್ಲಿ ಕಪೂರ್ ಅವರು ಪನಾಗ್‌ರನ್ನು ಕೇಂದ್ರೀಯ ಕಮಾಂಡ್‌ಗೆ ವರ್ಗಾಯಿಸಿದರು. ಪನಾಗ್ ಈ ಬಗ್ಗೆ ಕಪೂರ್ ರನ್ನು ಭೇಟಿಯಾದಾಗ ಅವರು ವರ್ಗಾವಣೆಯ ವಿಶೇಷಾಧಿ ಕಾರ ತನಗಿದೆಯೆಂದು ಖಡಕ್ಕಾಗಿ ಉತ್ತರಿಸಿದ್ದರು.
ಈ ವಿದ್ಯಮಾನವು ಸೇನೆಯಲ್ಲಿ ಬಹಳಷ್ಟು ಆತಂಕವನ್ನು ಸೃಷ್ಟಿಸಿತ್ತು. ತನ್ನ ಅಧಿಕಾರಾವಧಿಯ ಮಧ್ಯದಲ್ಲಿ ಸೇನಾ ಕಮಾಂಡರೊಬ್ಬರನ್ನು ವರ್ಗಾಯಿಸುವುದು ಅಸಹಜವಾದ ಕ್ರಮವಾಗಿದೆ. ಆದರೆ ಆ ನಂತರ ಹೊರಬಿದ್ದ ಮಹಾ ಲೇಖಪಾಲ (ಕಂಪ್ಟ್ರೋಲರ್ ಹಾಗೂ ಅಡಿಟರ್ ಜನರಲ್)ರ ವರದಿಯು ಸೇನೆಯ ಸಂಸ್ಥಾಪನೆಯ ಘನತೆಗೆ ದೊಡ್ಡ ಹೊಡೆತವನ್ನೇ ನೀಡಿತು. ಆಗ ಉತ್ತರ ವಿಭಾಗದ ಕಮಾಂಡರ್ ವರಿಷ್ಠರು, ತನಗಿದ್ದ ವಿಶೇಷ ಕಾರ್ಯನಿರ್ವಹಣಾ ಅವಶ್ಯಕತೆಗಳ ಖರೀದಿಯ ಅಧಿಕಾರವನ್ನು ದುರ್ಬಳಕೆ ಮಾಡಿದ್ದರೆಂದು ವರದಿ ತಿಳಿಸಿತ್ತು.
2002-03ರವರೆಗೂ ಮೇಜರ್ ಜನರಲ್ ಶ್ರೇಣಿಯ ಸೇನಾಧಿಕಾರಿಯನ್ನು ಸೇನಾ ನ್ಯಾಯಾಲಯದ ವಿಚಾರಣೆಗೊಳ ಪಡಿಸುವುದು (ಕೋರ್ಟ್ ಮಾರ್ಶಲ್) ತೀರಾ ಅಪರೂಪ ವಾಗಿತ್ತು. ಆದರೆ 2010ರ ಹೊತ್ತಿಗೆ ನಮ್ಮ ಸೇನಾ ವ್ಯವಸ್ಥೆಯ ಸ್ಥಿತಿ ಎಷ್ಟು ಶೋಚನೀಯವಾಯಿತೆಂದರೆ, ವಿವಿಧ ಹಗರಣಗಳಲ್ಲಿ ಮಾಜಿ ಸೇನಾ ಮುಖ್ಯಸ್ಥರ ಹೆಸರುಗಳು ಕಾಣಿಸಿಕೊಂಡಿವೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ