ಮುಸ್ಲಿಂ ಸಮುದಾಯದ ಐಕ್ಯತೆಗೆ ನಿರಂತರ ಶ್ರಮಿಸಬೇಕಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಧಾರ್ಮಿಕ ಮುಖಂಡರು ಪರಸ್ಪರ ಧೋಷಾರೋಪಣೆ ವ್ಯಕ್ತಪಡಿಸುತ್ತಾ ಸಮುದಾಯದೊಳಗೆ ಗುಂಪುಗಾರಿಕೆಗೆ ತೀವ್ರ ಸ್ವರೂಪ ನೀಡುತ್ತಿರುವುದು ಕಂಡುಬರುತ್ತಿದೆ. ಆದರೆ ಇದು ಈಗ ತಾರಕಕ್ಕೇರಿದ್ಧು ಅನಪೇಕ್ಷಣೀಯ ವಿಧ್ಯಮಾನಗಳನ್ನು ಸೃಷ್ಟಿಸುತ್ತಿರುವುದರಿಂದ ಸಾಮಾನ್ಯ ಜನತೆ ಆತಂಕಕ್ಕೊಳಗಾಗುವಂತಾಗಿದೆ. ಹಾಗೂ ಸಮುದಾಯದೊಳಗೆ ಪರಸ್ಪರ ಗುಂಪುಗಾರಿಕೆಗೆ ಮತ್ತು ಕಚ್ಚಾಟಗಳಿಗೆ ದಾರಿ ಒದಗಿಸಿದಂತಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ಧರೂ ಅದನ್ನು ಪರಸ್ಪರ ಮಾತುಕತೆ ಮತ್ತು ತಿಳುವಳಿಕೆಯಿಂದ ಬಗೆಹರಿಸಬಹುದಾಗಿದ್ಧು ಬಹಿರಂಗವಾಗಿ ಗದ್ದಲವನ್ನೇರ್ಪಡಿಸುವುದು ಸರಿಯಲ್ಲ.
ಭಿನ್ನಾಭಿಪ್ರಾಯಗಳನ್ನು ಆಧಾರವಾಗಿಟ್ಟುಕೊಂಡು ಸಮುದಾಯದೊಳಗೆ ಕಲಹವನ್ನು ಸೃಷ್ಟಿಸುತ್ತಿರುವ ಯತ್ನವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿಯು ಖಂಡಿಸುತ್ತದೆ.
ಇದೀಗ ಉದ್ಭವಿಸಿರುವ ವಿಷಮ ಪರಿಸ್ಥಿತಿಯನ್ನು ಬಗೆಹರಿಸಲು ಹಾಗೂ ಸಮುದಾಯ, ಸಮಾಜದೊಳಗೆ ಐಕ್ಯತೆಗಾಗಿ ಸೌಹಾರ್ದತೆಯನ್ನು ನೆಲೆಗೊಳಿಸಲು ಮುಸ್ಲಿಂ ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳುಗಳು ಶ್ರಮಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಆಗ್ರಹಿಸುತ್ತದೆ.
ಸಮುದಾಯದ ಐಕ್ಯತೆ ಹಾಗೂ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಪಾಪ್ಯುಲರ್ ಫ್ರಂಟ್ ಸದಾ ಕಾರ್ಯ ಪ್ರವೃತ್ತವಾಗಿರುವುದೆಂದು ಈ ಸಂದರ್ಭದಲ್ಲಿ ನೆನಪಿಸುತ್ತದೆ.
ಕೆ. ಎ.ಸಿದ್ಧೀಕ್
ಅಧ್ಯಕ್ಷರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ