ಮಂಗಳವಾರ, ಫೆಬ್ರವರಿ 01, 2011

ನಾಳೆ ಆತೂರಿನಲ್ಲಿ ದ್ಸಿಕ್ರ್ ಹಲ್ಕಾದ ವಾರ್ಷಿಕೋತ್ಸವ

ಪುತ್ತೂರು, ಫೆ.1: ಆತೂರು ಕೊಲದ ಬದ್ರಿಯಾ ಜುಮಾ ಮಸೀದಿಯಲ್ಲಿ ವರ್ಷಂಪ್ರತಿ ನಡೆಯುವ ದ್ಸಿಕ್ರ್ ಹಲ್ಕಾದ 10ನೆ ವಾರ್ಷಿಕೋತ್ಸವ ಫೆ.3ರಂದು ರಾತ್ರಿ ಆತೂರು ಮಸೀದಿ ವಠಾರದಲ್ಲಿ ನಡೆಯಲಿದೆ.

ಆತೂರು ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಇಬ್ರಾಹೀಂ ಅಲ್‌ಹಾದಿ ತಂಙಳ್ ಅಲ್‌ಖಾಸಿಮಿಯವರಿಂದ ಸ್ಥಾಪನೆಗೊಂಡು ಪ್ರತಿ ತಿಂಗಳ ಗುರುವಾರ ಮಗ್ರಿಬ್ ನಮಾಝ್‌ನ ಬಳಿಕ ಆಚರಿಸಿಕೊಂಡು ಬರುತ್ತಿರುವ ದ್ಸಿಕ್ರ್ ಹಲ್ಕಾದ ವಾರ್ಷಿಕೋತ್ಸವವು ಮಸೀದಿಯ ಗೌರವಾಧ್ಯಕ್ಷ ಕೆ.ಎಸ್.ಆಟಕೋಯ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಂಗಳೂರು ಖಾಝಿ ತ್ವಾಕ ಅಹ್ಮದ್ ವೌಲವಿ ಅಲ್‌ಖಾಸಿಮಿ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಇಬ್ರಾಹೀಂ ಅಲ್‌ಹಾದಿ ತಂಙಳ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಉಡುಪಿ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಮೂಡಬಿದ್ರೆ ಖಾಝಿ ವಿ.ಕೆ.ಅಬೂಬಕರ್, ತಾಯಲಂಗಾಡಿ ಮಸೀದಿ ಮುದರ್ರಿಸ್ ಎಂ.ಎ.ಖಾಸಿಂ ಮುಸ್ಲಿಯಾರ್, ಅರಂತೋಡು ಮಸೀದಿ ಮುದರ್ರಿಸ್ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ಶೌಕತ್ ಅಲಿ ವೌಲವಿ ವೆಲ್ಲಮುಂಡ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ