ಬುಧವಾರ, ಡಿಸೆಂಬರ್ 29, 2010

ಮದ್ರಸದಲ್ಲಿ ಹಲ್ಲೆ: ಶಿಕ್ಷಕನಿಂದ ಜೀವಬೆದರಿಕೆ

ಪುತ್ತೂರು: ಪಡುವನ್ನೂರು ಗ್ರಾಮದ ಸಿರಾಜುಲ್ ಹುದಾ ಮದ್ರಸದ ಶಿಕ್ಷಕರೊಬ್ಬರು ಮದ್ರಸ ವಿದ್ಯಾರ್ಥಿಗಳಿಬ್ಬರಿಗೆ ಹಲ್ಲೆ ನಡೆಸಿರುವ ಕುರಿತು ವಿದ್ಯಾರ್ಥಿಯ ತಂದೆ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿರಾಜುಲ್ ಹುದಾ ಮದ್ರಸದ ಶಿಕ್ಷಕ ಹನೀಫ್ ಸಅದಿ ಎಂಬವರ ವಿರುದ್ಧ ಪಡುವನ್ನೂರು ಗ್ರಾಮದ ಕುಕ್ಕಾಜೆ ಕಾರಡ್ಕ ನಿವಾಸಿ ಹಮೀದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಿರಾಜುಲ್ ಹುದಾ ಮದ್ರಸದ ಅಧ್ಯಾಪಕ ಹನೀಫ್ ಸಅದಿ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸದ ಆರೋಪದಲ್ಲಿ ಆಡಳಿತ ಮಂಡಳಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆಡಳಿತ ಮಂಡಳಿಯ ನಿರ್ಧಾರದಂತೆ ಆಡಳಿತ ಮಂಡಳಿಯ ಪ್ರಧಾನ ಕಾರ್ಯ ದರ್ಶಿಯಾದ ತಾನು ಮತ್ತು ಅಧ್ಯಕ್ಷರು ಅವರನ್ನು ಕರ್ತವ್ಯದಿಂದ ವಜಾಗೊಳಿಸಿದ್ದು, ಈ ಕಾರಣಕ್ಕಾಗಿ ಅವರು ಮದ್ರಸದಲ್ಲಿ ಕಲಿಯುತ್ತಿರುವ ತನ್ನ ಮಕ್ಕಳಾದ ರಂಸೀನ ಮತ್ತು ರಾಶಿದ್ ಮೇಲೆ ವಿನಾ ಕಾರಣ ಹಲ್ಲೆ ನಡೆಸಿ ಹಿಂಸೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ರಂಸೀನಾಳಿಗೆ ವಾರದ ಹಿಂದೆ ಕೈಯಿಂದ ಹೊಡೆದು ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿದ್ದ ಶಿಕ್ಷಕ ಹನೀಫ್ ಸಅದಿ ಇದೀಗ ಪುತ್ರ ರಾಶಿದ್‌ಗೆ ವಿನಾ ಕಾರಣ ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿದ್ದಲ್ಲದೆ ಈ ಕುರಿತು ಪ್ರಶ್ನಿಸಿದ ತನಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಹಮೀದ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ