ಮೂಡಬಿದ್ರೆ: ಜಿಲ್ಲಾ ಎಸ್‌ಕೆಎಸ್ ಎಸ್‌ಎಫ್ ಸಮಿತಿ ವತಿಯಿಂದ ಮೂಡುಬಿದಿರೆಯಲ್ಲಿ ಬುಧವಾರ ನಡೆದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯದಡಿ ನಡೆದ ‘ಮಾನವ ಸರಪಳಿ’ ಕಾರ್ಯಕ್ರಮದಲ್ಲಿ ಜಿಲ್ಲೆಯಾ ದ್ಯಂತ ಸಾವಿರಾರು ಮಂದಿ ಭಾಗವಹಿ ಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಖ್ಯಾತ ವಿದ್ವಾಂಸ ಮಿತ್ತಬೈಲು ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿ ಯಾರ್‌ರವರು, ಶಾಂತಿ ಸಹೋ ದರತೆಯೊಂದಿಗೆ ಬದುಕುವ ಜೊತೆ ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳಿ ಎಂಬ ಸಲಹೆ ನೀಡಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ಬಾಸ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಖಾಝಿ ತ್ವಾಕಾ ಉಸ್ತಾದ್ ರ‍್ಯಾಲಿಯನ್ನು ಉದ್ಘಾ ಟಿಸಿದರು.
ಶಾಸಕ ಅಭಯಚಂದ್ರ, ಸುಚರಿತ ಶೆಟ್ಟಿ, ಅಬ್ದುಲ್ ದಾರಿಮಿ ಕುಕ್ಕಿಲ, ಸಾಹಿತಿ ಹೈದರ್ ದಾರಿಮಿ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ