ಗುರುವಾರ, ಜನವರಿ 27, 2011

ಮೈಸೂರು: ಎಸ್‌ಡಿಪಿಐನಿಂದ ಮೈಸೂರಿನಲ್ಲಿ 111 ಅಡಿ ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ: ದೇಶದ ಇತಿಹಾಸದಲ್ಲೇ ಮೊದಲ ಪ್ರಯತ್ನ

image 111 ಅಡಿ ಉದ್ದದ ರಾಷ್ಟ್ರ ಧ್ವಜ
ಈ ಬೃಹತ್ ಧ್ವಜ ಇಲ್ಲಿನ ಮಂಡಿ ಮೊಹಲ್ಲಾದ ಸಾಡೆ ರಸ್ತೆಯ ದುಬೈ ಸೆಂಟರ್‌ನಲ್ಲಿ ತಯಾರಾಗಿದೆ. ಇದರ ಹಿಂದಿನ ರೂವಾರಿ ಎಸ್‌ಡಿಪಿಐ ಪಕ್ಷದ ಸದಸ್ಯ ಅಬ್ದುಲ್ ಅನ್ಸಾರಿಯವರಾಗಿದ್ದಾರೆ.

ಮೈಸೂರು, ಜ.27: ಗಣರಾಜ್ಯೋತ್ಸವ ಪ್ರಯುಕ್ತ ಮೈಸೂರಿನಲ್ಲಿ ಬುಧವಾರ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು 111 ಅಡಿ ಉದ್ದದ ರಾಷ್ಟ್ರ ಧ್ವಜವನ್ನು ಮೈಸೂರು-ಬೆಂಗಳೂರು ರಸ್ತೆಯ ಟಿಪ್ಪು ವೃತ್ತದ ಬಳಿ ಪ್ರದರ್ಶಿಸಿದರು. ದೇಶದಲ್ಲಿಯೇ ಅತಿ ಉದ್ದದ ಧ್ವಜ ಎನ್ನಲಾದ ಇದು 12 ಅಡಿ ಅಗಲವಿದೆ.

ಧ್ವಜವನ್ನು ಸುಮಾರು 10ಕ್ಕೂ ಹೆಚ್ಚು ಮಂದಿ ಪಕ್ಷದ ಕಾರ್ಯಕರ್ತರು ಹಿಡಿದುಕೊಂಡು ನೋಡುಗರಿಗೆ ಅಚ್ಚರಿ ಉಂಟು ಮಾಡಿದರು. ಅಲ್ಲದೇ ಝಂಡಾ ಉಂಚಾ ರಹೇ ಹಮಾರ, ಸಾರೆ ಜಹಾಂಸೆ ಅಚ್ಚಾ ಗೀತೆಯನ್ನು ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
2 ವರ್ಷಗಳ ಹಿಂದೆ ಪಂಜಾಬ್‌ನ ಚಂಢೀಗಡದಲ್ಲಿ 6 ಅಡಿ ಉದ್ದದ ರಾಷ್ಟ್ರಧ್ವಜ ಹಾರಾಡಿತು. ಇದರಿಂದ ಪ್ರೇರಿತರಾದ ಅನ್ಸಾರಿ 11ಅಡಿ ಉದ್ದದ ಧ್ವಜವನ್ನು ತಯಾರು ಮಾಡಲು ಪಣ ತೊಟ್ಟು ನಿಂತರು.
8ಮಂದಿ ಟೈಲರ್‌ಗಳು ಇವರಿಗೆ ಸಹಾಯಕರಾಗಿ ದುಡಿದಿದ್ದು, 15 ದಿನಗಳಲ್ಲಿ ಈ ಧ್ವಜ ತಯಾರಾಯಿತು. ಇದಕ್ಕೆ ಬೇಕಾದ ಬಟ್ಟೆಯನ್ನು ಬೆಂಗಳೂರು ಮತ್ತು ಮೈಸೂರಿನಿಂದ ಖರೀದಿಸಲಾಗಿದೆ ಎಂದು ಅನ್ಸಾರಿ ಮಾಹಿತಿ ನೀಡಿದ್ದಾರೆ.
ಈ ಪ್ರದರ್ಶನವು ದೇಶದ ಇತಿಹಾಸದಲ್ಲೇ ಪ್ರಥಮ ಪ್ರಯತ್ನವಾಗಿದ್ದು, ಇದೊಂದು ದಾಖಲೆಯ ಪಯತ್ನ ಎನ್ನುತ್ತಾರೆ ಅಬ್ದುಲ್ ಅನ್ಸಾರಿ.
ಉಪನ್ಯಾಸಕರಾದ ಶಬ್ಬೀರ್ ಹುಸೇನ್, ಶಬ್ಬೀರ್ ಮುಸ್ತಫಾ, ಎಸ್‌ಡಿಪಿಐ ಅಧ್ಯಕ್ಷ ಮಹಮ್ಮದ್ ಫೈಝಲ್, ಉಪಾಧ್ಯಕ್ಷ ಅಕ್ರಮ್ ಶರೀಫ್, ಪ್ರಧಾನ ಕಾರ್ಯದರ್ಶಿ ಅಫ್ಝಲ್ ಮುಹಮ್ಮದ್, ಸದಸ್ಯರಾದ ಕಿರಣ್ ಕುಮಾರ್, ಅಯೂಬ್ ಖಾನ್ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ