ಭಾನುವಾರ, ಏಪ್ರಿಲ್ 03, 2011

ಇಸ್ಲಾಂನ ಪವಿತ್ರ ಗ್ರಂಥಕ್ಕೆ ಅಪಚಾರ

ಇಸ್ಲಾಂನ ಪವಿತ್ರ ಧರ್ಮಗ್ರಂಥ ಕುರ್ ಆನ್‌ನ ಪ್ರತಿಯೊಂದನ್ನು ಅಮೆರಿಕದ ಪಾದ್ರಿಯೊಬ್ಬರು ದಹಿಸಿರುವ ಘಟನೆಯನ್ನು ಖಂಡಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ‘‘ಇದೊಂದು ತೀವ್ರ ಅಸಹಿಷ್ಣುತೆಯ ಕೃತ್ಯವಾಗಿದೆ’’ ಎಂದು ಅಭಿಪ್ರಾಯಿಸಿದ್ದಾರೆ.
ಅಮೆರಿಕದಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿ ಅಫ್ಘಾನಿಸ್ತಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಜನರನ್ನು ಬಲಿತೆಗೆದು ಕೊಂಡಿರುವುದು ಒಂದು ಅವಮಾನಕಾರಿ ಘಟನೆಯಾಗಿದೆ ಎಂದೂ ಅವರು ಹೇಳಿದ್ದಾರೆ.
‘‘ಕುರ್ ಆನ್ ಸೇರಿದಂತೆ ಯಾವುದೇ ಒಂದು ಪಾವನ ಗ್ರಂಥವನ್ನು ಅಪವಿತ್ರಗೊಳಿಸುವುದು ತೀರಾ ಅಸಹಿಷ್ಣುತೆ ಹಾಗೂ ಅಂಧಾಭಿಮಾನದ ಕೃತ್ಯವಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಒಬಾಮ ತಿಳಿಸಿದ್ದಾರೆ.
ಅಮಾಯಕ ಜನರ ಮೇಲಿನ ದಾಳಿಯನ್ನು ಹೇಯ ಕೃತ್ಯವೆಂದು ಬಣ್ಣಿಸಿರುವ ಅವರು, ಇದೊಂದು ಮಾನವ ಶಿಷ್ಟಾಚಾರ ಹಾಗೂ ಗೌರವಕ್ಕೆ ಚ್ಯುತಿಯನ್ನುಂಟು ಮಾಡುವಂತಹದ್ದಾಗಿದೆ’’ ಎಂದು ಅಭಿಪ್ರಾಯಿಸಿದ್ದಾರೆ.
ಅಮೆರಿಕದ ಫ್ಲಾರಿಡಾದ ಚರ್ಚೊಂದರಲ್ಲಿ ಪಾದ್ರಿ ಟೆರ್ರಿ ಜೋನ್ಸ್ ಕುರ್ ಆನ್ ಪ್ರತಿಯನ್ನು ಸುಟ್ಟಿರುವ ವಿರುದ್ಧ ಅಫ್ಘಾನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಭುಗಿಲೆದ್ದ ಹಿಂಸಾಚಾರದ ಘಟನೆಯನ್ನು ಪ್ರಸ್ತಾಪಿಸಿ ಒಬಾಮ ಮಾತನಾಡುತ್ತಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ