ಗುರುವಾರ, ಮಾರ್ಚ್ 03, 2011

ಶಿರವಸ್ತ್ರ ಎಳೆದು ಬಸ್ಸು ನಿರ್ವಾಹಕನೊಬ್ಬ ಅವಹೇಳನ ಮಾಡಿದ ಪ್ರಕರಣ :ಕಾನೂನು ಕ್ರಮಕ್ಕೆ ಪಿ.ಎಫ್.ಐ.ಆಗ್ರಹ

ಪುತ್ತೂರು:ಹೈಸ್ಕೂಲು ವಿದ್ಯಾರ್ಥಿನಿಯೋರ್ವಳ ಬುರ್ಖಾದ ಶಿರವಸ್ತ್ರ ಎಳೆದು ಬಸ್ಸು ನಿರ್ವಾಹಕನೊಬ್ಬ ಅವಹೇಳನ ಮಾಡಿದ ಪ್ರಕರಣ ಗುರುವಾರ ಉಪ್ಪಿನಂಗಡಿ ಪುತ್ತೂರು ರಸ್ತೆಯ ಶಾಂತಿನಗರ ಎಂಬಲ್ಲಿ ನಡೆದಿದ್ದು ಆರೋಪಿ ನಿರ್ವಾಹಕನ ವಿರುದ್ದ ನಗರ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. 
 
ಪುತ್ತೂರಿನ ಶಾಂತಿನಗರ ಶಾಲಾ ವಿದ್ಯಾರ್ಥಿನಿ ಸೇಡಿಯಾಪು ಎಂಬಲ್ಲಿಂದ ಸರ್ಕಾರಿ ಪಾಸಿನಲ್ಲಿ  ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದು, ಎಂದಿನಂತೆ ಗುರುವಾರ ಬೆಳಿಗ್ಗೆ ಶಾಲೆಗೆ ಬಸ್ಸಿನಲ್ಲಿ ಹೋಗುತ್ತಿರುವಾಗ ಪಾಸಿನ ಬಗ್ಗೆ ವಿಚಾರಿಸಿದ ನಿರ್ವಾಹಕ ಈ ಪಾಸು ಅಸಲಿಯಲ್ಲ ನಕಲಿ ಎಂದು ತಗಾದೆ ಮಾಡಿ ಪ್ರಯಾಣಿಕರ ಸಮ್ಮುಖದಲ್ಲಿಯೇ  ಬಾಲಕಿಯನ್ನು ಅವಹೇಳನ ಮಾಡಿ ಆಕೆ ಧರಿಸಿದ್ದ ಬುರ್ಕಾದ ಶಿರವಸ್ತ್ರವನ್ನು ಎಳೆದು ಮುಖ ತೋರಿಸುವಂತೆ ಆಗ್ರಹಿಸಿರುವುದಾಗಿ ಆರೋಪಿಸಲಾಗಿದೆ. 
 
ಬಸ್ಸು ನಿರ್ವಾಹಕನ ವರ್ತನೆಯಿಂದ ಖಿನ್ನಳಾದ ಬಾಲಕಿಯು ಮನೆಯಲ್ಲಿ ತಾನು ಇನ್ನು ಶಾಲೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದು ಈ ಬಗ್ಗೆ ವಿಚಾರಿಸಿದಾಗ ಪ್ರಕರಣದ ಬಗ್ಗೆ ತಿಳಿಸಿದಳು ಎನ್ನಲಾಗಿದೆ. ಪ್ರಕರಣದ ಕುರಿತು ಬಾಲಕಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ