ಬುಧವಾರ, ಡಿಸೆಂಬರ್ 15, 2010

ಮ೦ಗಳೂರು : ಸಮಸ್ತದೊಂದಿಗೆ ಕೈ ಜೋಡಿಸಿ, ಐಕ್ಯತೆಗೆ ಶ್ರಮಿಸಿ , ಉಚ್ಚಿಲದ ಬೃಹತ್ ಸಮಸ್ತ ಸಮ್ಮೇಳನದಲ್ಲಿ ಸಯ್ಯೆದ್ ಅಲೀ ತಂಙಳ್ ಕುಂಬೋಲ್ ಕರೆ

ವರದಿ : ಅತಾವುಲ್ಲಾ ಉಮರ್ ಮುಕ್ವೆ , ದುಬೈ
 
ಮಂಗಳೂರು : ಸಮಸ್ತದೊಂದಿಗೆ ಕೈ ಜೋಡಿಸಿ ಮುಹಲ್ಲಾದಲ್ಲಿ ಐಕ್ಯತೆಗೆ ಶ್ರಮಿಸಬೇಕು ಎಂದು ಸೈಯ್ಯದ್ ಕುಂಬೋಳ್ ಅಲೀ ತಂಙಳ್ ಕರೆ ನೀಡಿದ್ದಾರೆ.ಎಸ್ಕೆಎಸ್ಸೆಸ್ಸೆಫ್ ಉಚ್ಚಿಲ ಶಾಖೆಯ ವತಿಯಿಂದ ಉಚ್ಚಿಲ ಶಂಶುಲ್ ಉಲಮಾ ನಗರದ ಇಸ್ಮಾಯೀಲ್ ಹಾಜಿ ವೇದಿಕೆಯಲ್ಲಿ ರವಿವಾರ ನಡೆದ ಬೃಹತ್ ಸಮಸ್ತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಖಾಸಿಮ್ ಉಸ್ತಾದ್, ಸಿ.ಎಂ.ಉಸ್ತಾದ್ ಅನುಸ್ಮರಣಾ ಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುನ್ನಾಸಿರ್ ಫೈಝಿ ಕೂಡತ್ತಾಯಿ ಮುಖ್ಯ ಭಾಷಣ ಮಾಡಿದರು. ಅಧ್ಯಯನ ಶಿಬಿರದಲ್ಲಿ ಸಮಸ್ತ ಮುಫತ್ತಿಸ್ ಹಮೀದ್ ದಾರಿಮಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ವಿಷಯ ಮಂಡಿಸಿದರು. ಸಮ್ಮೇಳನದಲ್ಲಿ ಸೈಯ್ಯದ್ ಹಮೀರ್ ತಂಙಳ್, ಸೈಯ್ಯದ್ ಬಾತಿಷ್ ತಂಙಳ್, ಅಬ್ಬಾಸ್ ಹಾಜಿ ಮಜಲ್, ಅಬ್ದುಲ್ ಹಮೀದ್ ಹಾಜಿ ಉಚ್ಚಿಲ, ಕೆ.ಎಲ್. ಉಮರ್ ದಾರಿಮಿ, ಅಬ್ದುಲ್ ಅಝೀಝ್ ಕುಮರಂಗಳ, ಕೆ.ಸಿ.ಅಬ್ದುಲ್ ಹಮೀದ್ ಕೆ.ಸಿ. ರೋಡ್, ಅಬ್ದುಲ್ಲಾ ಅರ್ಶದಿ, ಸಿತಾರ್ ಮಜೀದ್ ಹಾಜಿ, ಮುಸ್ತಫಾ ಫೈಝಿ, ಅಹ್ಮದ್ ಅಜ್ಜನಡ್ಕ, ಎಸ್. ಬಿ. ಮುಹಮ್ಮದ್ ಹನೀಫ್, ಅಬ್ಬು ಹಾಜಿ ಮತ್ತಿತರರು ಹಾಜರಿದ್ದರು.ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ರನ್ನು ಸನ್ಮಾನಿಸಲಾಯಿತು. ಮದ್ರಸ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಇಬ್ರಾಹೀಂ ಬಾಖವಿ ಸ್ವಾಗತಿಸಿದರು. ಯು. ಅಬ್ದುಸ್ಸಲಾಂ ವಂದಿಸಿದರು. ಮುಸ್ತಫಾ ಕಮಾಲ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ