ಮಂಗಳವಾರ, ಡಿಸೆಂಬರ್ 14, 2010

‘ಡಿಸಿಐಬಿ ಪೊಲೀಸರ ವಿರುದ್ಧ ಲೋಕಾಯುಕ್ತರಿಗೆ ದೂರು’

ಮಂಗಳೂರು, ಡಿ.14: ಅಕ್ರಮ ಆಸ್ತಿ ಸಂಪಾದಿಸಿರುವ ಡಿಸಿಐಬಿ (ಜಿಲ್ಲಾ ಅಪರಾಧ ಪತ್ತೆ ದಳ) ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನ ಸಹಿತ ಡಿಸಿಐಬಿ ಪೊಲೀಸರ ವಿರುದ್ಧ ಶೀಘ್ರದಲ್ಲೇ ಲೋಕಾಯುಕ್ತರಿಗೆ ದೂರು ಸಲ್ಲಿಸು ವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ತಿಳಿಸಿದ್ದಾರೆ.
ಅಕ್ರಮ ಬಂಧನ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಪಿಎಫ್‌ಐ ಜಿಲ್ಲಾ ಸಮಿತಿ ಮಂಗಳವಾರ ಸಂಜೆ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಿಎಫ್‌ಐ ಯಾವತ್ತೂ ಕಾನೂನಿಗೆ ವಿರುದ್ಧವಾಗಿ ನಡೆದಿಲ್ಲ. ದೇಶದ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ನಂಬಿಕೆಯಿಟ್ಟು ಕಾರ್ಯಾಚರಿ ಸುತ್ತಿದೆ. ಆರೆಸ್ಸೆಸ್ ಹಿನ್ನೆಲೆಯ ಡಿಸಿಐಬಿ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನರು, ಮಾಡೂರು ಯೂಸುಫ್‌ನಂತಹ ಕ್ರಿಮಿನಲ್‌ಗಳ ಬಾಯಲ್ಲಿ ಪಿಎಫ್‌ಐ ವಿರುದ್ಧ ಹೇಳಿಕೆ ಹೊರಡಿಸಿ ಅದನ್ನು ‘ಉದಯವಾಣಿ’ಯಂತಹ ಕೋಮುವಾದಿ ಪತ್ರಿಕೆಗಳಲ್ಲಿ ಪ್ರಚಾರ ಪಡಿಸುತ್ತಿರುವುದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಪಿಎಫ್‌ಐಯ ಶಕ್ತಿಯನ್ನು ದಮನಿ ಸುವುದೇ ಪ್ರಸನ್ನರ ಯೋಜನೆಯಾಗಿದೆ ಎಂದು ಅನ್ವರ್ ಸಾದಾತ್ ಆಕ್ರೋಶ ವ್ಯಕ್ತಪಡಿಸಿದರು.
ಪಿಎಫ್‌ಐ ಸಂಘಟನೆಯ ಮೇಲೆ ಸಂಶಯವಿದ್ದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಥವಾ ಸಿಬಿಐಯಿಂದ ತನಿಖೆ ನಡೆಸಲಿ. ಅದಕ್ಕೆ ನಾವು ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದ ಅವರು, ಮಾಡೂರು ಯೂಸುಫ್ ಬಾಯ್ಬಿಟ್ಟಿದ್ದಾನೆ ಎನ್ನುವ ಮೂಲಕ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರನ್ನು ಕೊಲ್ಲಲು ಪಿಎಫ್‌ಐ ಸಂಚು ನಡೆಸಿದೆ ಎಂದು ಪೊಲೀಸರು ಹೇಳಿಕೊಳ್ಳು ತ್ತಿದ್ದಾರೆ. ಇದು ಮುಸ್ಲಿಂ ಸಮುದಾಯದ ಒಗ್ಗಟ್ಟನ್ನು ಮುರಿಯಲು ಪೊಲೀಸ್ ಅಧಿಕಾರಿಗಳು ನಡೆಸುವ ಸಂಚಾಗಿದೆ ಎಂದು ಅನ್ವರ್ ಸಾದಾತ್ ಆರೋಪಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಪಿಎಫ್‌ಐ ಮುಖಂಡ ಅಕ್ಬರ್ ಅಲಿ, ಮೈಸೂರಿನಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಸಂಘಟನೆಯ 9 ಮಂದಿ ಜಿಲ್ಲಾ ಪ್ರಮುಖರನ್ನು ಶನಿವಾರ ರಾತ್ರಿ ಬಿ.ಸಿ.ರೋಡ್ ಸಮೀಪ ಅಕ್ರಮವಾಗಿ ಬಂಧಿಸಲಾಗಿತ್ತು. ಈಗ ಬಿಡುತ್ತೇವೆ ಎಂದು ಮೂರು ಬಾರಿ ಭರವಸೆ ನೀಡಿದಾಗಲೂ ನಾವು ಪೊಲೀಸರನ್ನು ನಂಬಿದೆವು.
ಆದರೆ, ಪೊಲೀಸರು ನಾಲ್ಕನೇ ಬಾರಿ ಅದನ್ನೇ ಪುನರುಚ್ಚರಿಸಿದಾಗ ಉಪಾಯವಿಲ್ಲದೆ ನಾವು ಸರ್ಚ್‌ವಾರೆಂಟ್ ಹಾಕಿದೆವು. ಹಾಗಾಗಿ ಆರೋಪಿಗಳನ್ನು ಕಳೆದ ರಾತ್ರಿ ಅನಿವಾರ್ಯವಾಗಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ನೆಹಮತ್ ಅಲಿ ಮಾತನಾಡಿದರು. ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು.
ಪೊಲೀಸರ ಮೇಲೆ ನಂಬಿಕೆ ಬೇಡ : ಡೇಸಾ
 ಪಿಯುಸಿಎಲ್ ಮುಖಂಡ ಪಿ.ಬಿ.ಡೇಸಾ ಮಾತನಾಡಿ, ಪೊಲೀಸರನ್ನು ನೀವು ಯಾವತ್ತೂ ನಂಬಬೇಡಿ. ಅವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಯಾರನ್ನೂ ವಿನಾ ಕಾರಣ ಬಂಧಿಸ ಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ಆದರೆ, ಜಿಲ್ಲೆಯ ಕೋಮುವಾದಿ ಪೊಲೀಸರಿಗೆ ಆ ಆದೇಶ ಮುಖ್ಯವಲ್ಲ. ಡಿಸಿಐಬಿ ಇನ್ಸ್‌ಪೆಕ್ಟರ್ ಪ್ರಸನ್ನ ಸಹಿತ ಪೊಲೀಸರು ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದು, ಅವರನ್ನೆಲ್ಲಾ ಲೋಕಾಯುಕ್ತ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಸನ್ನರ ಮೇಲೆ ಕಾರನ್ನು ದುರ್ಬಳಕೆ ಮಾಡಿದ ಆರೋಪವಿದೆ. ಈ ಬಗ್ಗೆ ಅಂದಿನ ಐಜಿಪಿ ಕೂಡ ಡಿಜಿಗೆ ವರದಿ ಸಲ್ಲಿಸಿದ್ದಾರೆ. ಆದರೂ ಪ್ರಸನ್ನರ ಮೇಲೆ ಕ್ರಮ ಜರಗಿಸಿಲ್ಲ. ಹಿಂದೂ ನಾಯಕರ ಹತ್ಯೆಗೆ ಸಂಚು ನಡೆಸಿದ ಆರೋಪ ಹೊರಿಸಿ ಇನ್ಸ್‌ಪೆಕ್ಟರ್ ಪ್ರಸನ್ನ ಇನ್ನಷ್ಟು ಅಮಾ ಯಕ ಮುಸ್ಲಿಂ ಯುವಕರನ್ನು ಪ್ರಕರಣದಲ್ಲಿ ಸಿಲುಕಿಸುವ ಅಪಾಯವಿದೆ. ಆ ಹಿನ್ನೆಲೆಯಲ್ಲಿ ಪ್ರಸನ್ನ ಮತ್ತವರ ತಂಡದ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಬೇಕು ಎಂದು ಡೇಸಾ ಸಲಹೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ