ಭಾನುವಾರ, ಫೆಬ್ರವರಿ 27, 2011

‘ಕಾಲೇಜು ಸೀಟು, ಲಕ್ಷ ನೋಟು’.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ

Karavali-imageಸಮಾಜದಲ್ಲಿ ನಾನಾ ಸಮಸ್ಯೆಗಳು ತಾಂಡವವಾಡುತ್ತಿದ್ದು, ಅವುಗಳನ್ನು ಎದುರಿಸಲು ವಿದ್ಯಾರ್ಥಿ ಶಕ್ತಿ ಸಜ್ಜುಗೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ, ನ್ಯಾಯವಾದಿ ಎ.ಮುಹಮ್ಮದ್ ಯೂಸುಫ್ ಕರೆ ನೀಡಿದರು.

 ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ)ದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಇದೊಂದು ಕೇವಲ ಸಮಾವೇಶ ಅಲ್ಲ, ಕರ್ನಾಟಕದ ಸಾಮಾಜಿಕ ಬದಲಾವಣೆಗೆ ನಾಂದಿ ಎನ್ನಬಹುದು. ಸಮೀಕ್ಷೆಯೊಂದರ ಪ್ರಕಾರ ಭಾರತವು 2028ನೆ ಇಸವಿಗೆ ಜನಸಂಖ್ಯೆಯಲ್ಲಿ ವಿಶ್ವಕ್ಕೆ ಪ್ರಥಮ ಸ್ಥಾನಿಯಾಗಲಿದೆ. ಈ ವೇಳೆ ಶೇ.70ರಷ್ಟು ಯುವ ಸಮೂಹವೇ ದೇಶದಲ್ಲಿ ತುಂಬಲಿದೆ. ಯುವಶಕ್ತಿಯನ್ನು ಬಲವೃದ್ಧಿಗೊಳಿಸಿದಾಗ ಮಾತ್ರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಎ.ಮುಹಮ್ಮದ್ ಯೂಸುಫ್ ಹೇಳಿದರು.


ಇಂದು ಕಾಲೇಜು ಕ್ಯಾಂಪಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಬಿವಿಪಿ ಸಂಘ ಟನೆ ಶಿಕ್ಷಣದ ವ್ಯಾಪಾರೀಕರಣದ

ವಿರುದ್ಧ ಸೊಲ್ಲೆತ್ತುವುದಿಲ್ಲ. ಜತೆಗೆ ಅದರೊಂದಿಗೆ ಕೈ ಜೋಡಿಸುವುದರ ಮೂಲಕ ಈ ಸಂಘಟನೆ ಕೇಸರಿ ಭಯೋತ್ಪಾದಕರನ್ನು ನಿರ್ಮಿಸುವ ಕಾರ್ಖಾನೆಗಳಾಗುತ್ತಿದೆ ಎಂದು ಅವರು ನುಡಿದರು. ರಾಜ್ಯದಲ್ಲಿ ಪ್ರಜಾ ವಿರೋಧಿ, ಭ್ರಷ್ಟ
ಸರಕಾರವಿದೆ. ಇದರ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೋರಾಟ ಮಾಡಬೇಕು ಎಂದು ಅವರು ಕರೆ
ನೀಡಿದರು.
ಪಕ್ಷದ ದಾಳಗಳಾಗಬೇಡಿ: ವಿದ್ಯಾರ್ಥಿಗಳನ್ನು ಬಲೆಗೆ ಕೆಡವಲು ರಾಜಕೀಯ ಪಕ್ಷಗಳು ಹೊಂಚಿ ಹಾಕಿ ಕೊಳ್ಳುತ್ತಿವೆ. ಯಾವ ಕಾರಣಕ್ಕೂ ವಿದ್ಯಾರ್ಥಿ ಸಮೂಹ ರಾಜಕೀಯ ಪಕ್ಷಗಳ ದಾಳಗಳಾಗಬೇಡಿ ಮತ್ತು ಕೋಮು ವಿಷವರ್ತುಲದಿಂದ ಹೊರಗೆ ಬನ್ನಿ ಎಂದು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಕರೆ ನೀಡಿದರು.

 ಕೆಲವು ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತರಾಗಿದ್ದರೆ, ಇನ್ನು ಕೆಲವರು ಸಮಾಜಮುಖಿಯಾಗಿ ರುತ್ತಾರೆ. ಸಮಾಜದ ದಿಕ್ಕನ್ನೇ ಬದಲಿ ಸಬಲ್ಲ ಶಕ್ತಿ ಹೊಂದಿರುವ ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿ ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.

ತೇಜಸ್ ದೈನಿಕದ ಸಂಪಾದಕ ಪ್ರೊ.ಸಿ.ಕೋಯ, ಚಿಂತಕ ಅಂಕಣಕಾರ ಶಿವಸುಂದರ್, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ, ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್, ಎನ್‌ಡಬ್ಲುಎಫ್ ಪ್ರಧಾನ ಕಾರ್ಯ ದರ್ಶಿ ಶಾಹಿದ ತಸ್ನೀಮ್ ಮಾತನಾಡಿದರು.

ಸಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿರ್ ಅಧ್ಯಕ್ಷತೆ ವಹಿಸಿದ್ದರು.

 ವೇದಿಕೆಯಲ್ಲಿ ಪಿಎಫ್‌ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಸಿಎಫ್‌ಐ ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷ ಅನೀಸ್ ಅಹ್ಮದ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಕೊಡ್ಲಿಪೇಟೆ, ಸಿಎಫ್‌ಐ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಂಬಿ, ಕೇರಳ ಘಟಕದ ಅಧ್ಯಕ್ಷ ಅಜ್ಮಲ್ ಇಸ್ಮಾಯೀಲ್, ಬೆಂಗಳೂರು ವಿಜಯ ಕಾಲೇಜಿನ ಡಾ.ಶ್ರೀಧರ್ ಉಪಸ್ಥಿತರಿದ್ದರು.

ಸಂಚಲನಾ ಸಮಿತಿಯ ಸಂಚಾಲಕ ಅಬ್ದುರ್ರಹ್ಮಾನ್ ಸ್ವಾಗತಿಸಿದರು. ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಇಮ್ರಾನ್ ಖಾನ್ ವಂದಿಸಿದರು. ಸಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ನಝೀರ್ ಮಂಗಳೂರು ಮತ್ತು ಸಿಎಫ್‌ಐ ಪ್ರಧಾನ ಕಾರ್ಯದರ್ಶಿ

ಅಬ್ದುಲ್ ರಹೀಂ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶಕ್ಕೆ ಮುನ್ನ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದ ವರೆಗೆ ಆಕರ್ಷಕ ರ್ಯಾಲಿ ನಡೆಯಿತು.
ಬೆಳಗ್ಗೆ ನೆಹರೂ ಮೈದಾನದಲ್ಲಿ ಸಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿರ್ ಧ್ವಜಾರೋಹಣಗೈದರು.
 ಸಮಾವೇಶ ವೇದಿಕೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಕಾಲೇಜು ಸೀಟು, ಲಕ್ಷ ನೋಟು’ ಎಂಬ ನಾಟಕ ಗಮನ ಸೆಳೆದವು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ