ಬೆಳ್ತಂಗಡಿ, ಜ.18: ಇಸ್ಲಾಂ ಧರ್ಮ ವಿವಾಹವನ್ನು ಅತ್ಯಂತ ಸರಳವಾಗಿ ವರದಕ್ಷಿಣೆರಹಿತವಾಗಿ ನಡೆಸಲು ಕಲ್ಪಿಸಿದೆ. ಆದರೆ ಇಂದು ಸಮಾಜದಲ್ಲಿ ವರದಕ್ಷಿಣೆ ಹಾಗೂ ಮದುವೆಗೆ ದುಂದು ವೆಚ್ಚ ಶಾಪವಾಗಿ ಕಾಡುತ್ತಿದೆ ಎಂದು ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಅಕ್ಷರ ಗ್ರೂಪ್ ವತಿಯಿಂದ ಮುಸ್ಲಿಂ ಸಮುದಾಯವನ್ನು ಸಾಮಾಜಿಕ ಶೈಕ್ಷಣಿಕ ಹಾಗೂ ಔದ್ಯೋ ಗಿಕ ವಲಯಗಳಲ್ಲಿ ಸಬಲೀಕರಣಗೊಳಿ ಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಮುಸ್ಲಿಂ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ www.muslimalnikah.com ಮತ್ತು ಪ್ರಾಪರ್ಟಿ ಡೆವಲಪ್ ಮೆಂಟ್ ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಕ್ರಿಯೇಟಿವ್ ಫೌಂಡೇಶ ನ್‌ನ ಚೇಯರ್‌ಮನ್ ಅನ್ವರ್ ಸಾದಾತ್ ಮಾತನಾಡಿ, ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುವ ಕಾರ್ಯ ಕ್ರಮವೊಂದನ್ನು ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಶಂಸುದ್ದೀನ್ ದಾರಿಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ ಖೆಟ್ಟಿ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ.ನಝೀರ್, ಬಶೀರ್ ದಾರಿಮಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಕ್ಬರ್ ಬೆಳ್ತಂಗಡಿ, ಹನೀಫ್ ಗೇರುಕಟ್ಟೆ, ಅಬ್ದುಸ್ಸಲಾಂ, ಅಬ್ದುಲ್ ಖಾದರ್ ನಾವೂರು, ಮುಹ ಮ್ಮದ್ ಅಲಿ ಉಜಿರೆ, ಅಬ್ದುರ್ರಶೀದ್ ಗೇರುಕಟ್ಟೆ, ಕಬೀರ್ ಬೆಳ್ತಂಗಡಿ ಉಪಸ್ಥಿತರಿದ್ದರು.
ಈ ಸಂದರ್ಭ ಅಂಬ್ಯುಲೆನ್ಸ್ ಚಾಲಕ ಜಲೀಲ್ ಬೆಳ್ತಂಗಡಿ ಹಾಗೂ ಇಸ್ಮಾ ಯೀಲ್ ಸಂಜಯ ನಗರರನ್ನು ಸನ್ಮಾನಿ ಸಲಾಯಿತು. ಸಲೀಂ ಪ್ರಾಸ್ತಾವಿಕವಾಗಿ ಮಾತನಾಡಿ ದರು. ನಿಝಾಂ ಗೇರುಕಟ್ಟೆ ಸ್ವಾಗತಿಸಿದರು. ಅಬ್ದುಲ್ ಖಾದರ್ ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ