ಬೆಂಗಳೂರು: ಬೆಂಗಳೂರು ಬಾಂಬ್ ಸ್ಫೋಟವೂ ಸೇರಿದಂತೆ ಹಲವು ದುಷ್ಕೃತ್ಯಗಳ ಆರೋಪಿಯಾಗಿ ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ರಿಯಾಝ್ ಭಟ್ಕಳ್ ಕರಾಚಿಯಲ್ಲಿ ಹತ್ಯೆಯಾಗಿರುವ ಬಗ್ಗೆ ಭಾರತೀಯ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭ್ಯವಾಗಿದೆ.
ಛೋಟಾ ರಾಜನ್ ಸಹಚರರು ಈ ಕೃತ್ಯ ಎಸಗಿರಬಹುದು ಎಂದು ಗುಪ್ತಚರ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಆದರೆ ಹತ್ಯೆ ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹತ್ಯೆಗೀಡಾಗಿರುವಾತ ತಮಗೆ ಬೇಕಾದ ರಿಯಾಝ್ ಭಟ್ಕಳ್‌ನೇ ಆಗಿರಬಹುದೇ ಎಂಬ ಪ್ರಶ್ನೆಯೂ ಗುಪ್ತಚರ ಸಂಸ್ಥೆಗಳಿಗೆ ಕಾಡುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ