ಬುಧವಾರ, ಡಿಸೆಂಬರ್ 01, 2010

ವಿಕಿಲೀಕ್ಸ್ ಮುಖ್ಯಸ್ಥನಿಗೆ ಬಂಧನಾದೇಶ ಜಾರಿ

ವಾಷಿಂಗ್ಟನ್, : ಸರಕಾರದಿಂದ ಹಿಡಿದು ಆರ್ಥಿಕ ಮಾರುಕಟ್ಟೆಗಳವರೆಗೂ ವ್ಯಾಪಿಸಿರುವ ಅಮೆರಿಕದ ಭಾರೀ ಪ್ರಮಾಣದ ರಹಸ್ಯ ದಾಖಲೆಗಳನ್ನು ಬಯಲುಗೊಳಿಸಿರುವ ವಿಕಿಲೀಕ್ಸ್‌ನ ಸ್ಥಾಪಕ ಜೂಲಿ ಯಾನ್ ಅಸ್ಸಾಂಜ್‌ಗೆ ಬುಧವಾರ ಇಂಟರ್‌ಪೋಲ್ ಜಾಗತಿಕ ಬಂಧನಾದೇಶ ಹೊರಡಿಸಿದೆ. ಇನ್ನೂ ಹೆಚ್ಚಿನ ಮಾಹಿತಿ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇನೆಯು ರಾಜತಾಂತ್ರಿಕವಾಗಿ ವ್ಯವಹರಿಸಿರುವುದನ್ನು ಅಮೆರಿಕ ತಳ್ಳಿಹಾಕಿದೆ. ವಿಕಿಲೀಕ್ಸ್‌ನ ಸ್ಥಾಪಕ 39ರ ಹರೆಯದ ಜೂಲಿಯಾನ್ ಅಸ್ಸಾಂಜ್ ಆಸ್ಟ್ರೇಲಿಯದ ಓರ್ವ ಕಂಪ್ಯೂಟರ್ ಹ್ಯಾಕರ್ ಆಗಿದ್ದು, ಸ್ವೀಡನ್‌ನಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬೇಕಾದವನಾಗಿದ್ದಾನೆ. ಆದರೆ ಅಸಾಸ್‌ಸಿ ಈ ಆರೋಪಗಳನ್ನು ತಳ್ಳಿಹಾಕಿದ್ದಾನೆ. ಯಾವುದೇ ಸ್ಥಳದಲ್ಲಿ ಅಸ್ಸಾಂಜ್ ಪತ್ತೆಯಾದಲ್ಲಿ ಆತನನ್ನು ಬಂಧಿಸುವಂತೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿರುವುದಾಗಿ ಫ್ರಾನ್ಸ್ ಮೂಲದ ಇಂಟರ್‌ಪೋಲ್ ಬುಧವಾರ ತಿಳಿಸಿದೆ. ಅಸ್ಸಾಂಜ್ ಸಾಮಾನ್ಯವಾಗಿ ತನ್ನ ಹೆಚ್ಚಿನ ಸಮಯವನ್ನು ಬ್ರಿಟನ್ ಹಾಗೂ ಸ್ವೀಡನ್‌ನಲ್ಲಿ ಕಳೆಯುತ್ತಿರುವುದಾಗಿಯೂ ಅದು ಹೇಳಿದೆ.

ಚೀನಾ: ವಿಕಿಲೀಕ್ಸ್‌ಗೆ ತಡೆ
ಬೀಜಿಂಗ್, ಡಿ.1: ರಹಸ್ಯ ದಾಖಲೆಗಳನ್ನು ಬಹಿರಂಗ ಗೊಳಿಸುವ ಮೂಲಕ ವಿಶ್ವಾದ್ಯಂತ ತಲ್ಲಣವನ್ನುಂಟು ಮಾಡಿರುವ ವಿಕಿಲೀಕ್ಸ್ ಅಂತರ್ಜಾಲ ತಾಣದ ಎಲ್ಲ ಸಂಪರ್ಕಗಳನ್ನು ಚೀನಾದಾದ್ಯಂತ ಕಡಿತಗೊಳಿಸಲಾಗಿದೆ. ವಿಕಿಲೀಕ್ಸ್ ಹಾಗೂ ಕೇಬಲ್‌ಗೇಟ್ ತಾಣಗಳನ್ನು ಸಂಪರ್ಕಿಸಲು ಯತ್ನಿಸುತ್ತಿರುವಂತೆಯೇ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಸೂಚನೆಯೊಂದು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಯಾವುದೇ ಅಂತರ್ಜಾಲ ತಾಣವು ಸ್ಥಗಿತಗೊಂಡಾಗ ಈ ರೀತಿಯ ಸಂದೇಶವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ