ವಾಷಿಂಗ್ಟನ್, ಫೆ.10: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲಿರುವ ಭಯೋತ್ಪಾದಕ ಶಿಬಿರಗಳಲ್ಲಿ ‘ಸೈಫುಲ್ಲಾ’ ಎಂಬ ಹೆಸರಿನಲ್ಲಿ ಸೇನಾ ಮಾದರಿಯ ತರಬೇತಿ ಪಡೆದಿರುವ ಅಮೆರಿಕನ್ ಡೇನಿಯಲ್ ಪ್ಯಾಟ್ರಿಕ್ ಬಾಯ್ಡಿ ತನ್ನ ಮೇಲಿನ ಭಯೋತ್ಪಾದನೆಯ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ನ್ಯಾಯಾಂಗ ಇಲಾಖೆ ತಿಳಿಸಿದೆ.
‘‘ಸಾಗರೋತ್ತರ ಪ್ರದೇಶಗಳಲ್ಲಿ ಸಂಚರಿಸಿ ಕೊಲೆ, ಅಪಹರಣ ಮೊದಲಾದ ಕುಕೃತ್ಯಗಳಲ್ಲಿ ಪಾಲ್ಗೊಳ್ಳುವ ಯುವಕರನ್ನು ನೇಮಿಸುವ ಹಾಗೂ ನೆರವಾಗುವ ಮೂಲಕ ಹಿಂಸಾಚಾವನ್ನು ನಡೆಸುವ ಬಹುವಾರ್ಷಿಕ ಪಿತೂರಿ ಯೋಜನೆಯಲ್ಲಿ ತಾನು ಭಾಗಿಯಾಗಿರು ವುದಾಗಿ ಡೇನಿಯಲ್ ಪ್ಯಾಟ್ರಿಕ್ ಬಾಯ್ಡಿ ಒಪ್ಪಿಕೊಂಡಿದ್ದಾನೆ’’ ಎಂದು ರಾಷ್ಟ್ರೀಯ ಭದ್ರತೆಯ ಸಹಾಯಕ ಅಟಾರ್ನಿ ಜನರಲ್ ಡೇವಿಡ್ ಕ್ರಿಸ್ ವಿವರಿಸಿದ್ದಾರೆ.
ಹಿಂಸಾಚಾರದ ಕೃತ್ಯಗಳಲ್ಲಿ ತೊಡಗುವ ಉದ್ದೇಶಕ್ಕಾಗಿ 40ರ ಹರೆಯದ ಬಾಯ್ಡಾ 1989-92ರ ಅವಧಿಯಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಿಗೆ ಪ್ರಯಾಣಿಸಿದ್ದು, ಅಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳಲ್ಲಿ ಸೇನಾ ಮಾದರಿಯ ತರಬೇತಿ ಪಡೆದಿದ್ದಾನೆ ಎಂದು ಆತನ ಮೇಲೆ ದೋಷಾರೋಪಣೆ ಸಲ್ಲಿಸಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ